Advertisement
ಅವರು ನಗರದಲ್ಲಿ ಶನಿವಾರ ಬೃಹತ್ ರೈತ ಮಹಾಪಂಚಾಯತ್ ಸಭೆಯಲ್ಲಿ ಮಾತನಾಡಿದರು. ರೈತ ವಿರೋ ಧಿ ಕಾನೂನುಗಳ ವಿರುದ್ಧ ಹೋರಾಟ ಮಾಡಲು ನೀವು ದೆಹಲಿಗೆ ಬರಬೇಕಿಲ್ಲ. ಬೆಂಗಳೂರನ್ನೇ ನಾಲ್ಕು ಕಡೆಗಳಿಂದ ಸುತ್ತುವರೆದು ಪ್ರತಿಭಟನೆ ನಡೆಸಿ. ಬೆಂಗಳೂರನ್ನೇ ದೆಹಲಿ ಮಾಡಬೇಕು. ಮೂರು ಕಾಯ್ದೆಗಳು ವಾಪಾಸ್ ಆಗುವವರೆಗೂ ಹೋರಾಟ ನಡೆಯಬೇಕು ಎಂದರು. ಡೀಸೆಲ್ ವಾಹನಗಳಿಗೆ 10 ವರ್ಷ ನಿಗದಿಪಡಿಸಿ ರೈತರ ಟ್ರ್ಯಕ್ಟರ್‌ಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಮಾರುಕಟ್ಟೆ ಹೊರಗೆ ನಿಮ್ಮ ಉತ್ಪನ್ನ ಮಾರಬಹುದು ಎಂದು ಹೇಳುತ್ತಿದ್ದಾರೆ. ಸರಕಾರ ನಿಗದಿಪಡಿಸಿದ ದರಕ್ಕೆ ಖರೀದಿ ಮಾಡಿ ಎಂದರೆ ಬೇಡ ಎನ್ನುತ್ತಾರೆ.
Related Articles
Advertisement
ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟವನ್ನು ಇಂದು ನಾವು ತೀರ್ಮಾನ ಮಾಡುತ್ತಿದ್ದೇವೆ. ಸರಕಾರ ಅಲ್ಲ. ನಮ್ಮ 40 ಜನರ ಕಮಿಟಿಯಲ್ಲಿ ಯಾರಲ್ಲಾದರೂ ಕೊರತೆ ಸಿಕ್ಕರೆ ಅವರನ್ನು ಹೇಗಾದರೂ ಮುಗಿಸಬೇಕೆಂಬ ಪ್ರಯತ್ನ ಸರಕಾರದಿಂದ ನಡೆಯಿತು. ಅವರಿಗೆ ಏನೂ ಸಿಗಲಿಲ್ಲ. ಹಾಗಾಗಿ ಯುವಕರು ಇಂದು ಕಾಯ್ದೆ ವಾಪಾಸ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಸರಕಾರ ವಾಪಾಸಾತಿ ಬಗ್ಗೆ ಮಾತನಾಡಿದರೆ ಏನಾಗಬಹುದು ಎಂಬುದರ ಬಗ್ಗೆ ಸರಕಾರ ಆಲೋಚಿಸಬೇಕು.
ಯುವಸಮೂಹ ಸರಕಾರದ ವಿರುದ್ಧ ಮುಗಿಬೀಳುವ ಮೊದಲು ರೈತ ಮುಖಂಡರ ಜತೆ ಮಾತುಕತೆ ನಡೆಸಲಿ ಎಂದರು. ಹಸಿವಿನ ಉದ್ದಿಮೆ ನಡೆಯಬಾರದು, ಹಸಿವಿನ ಮೇಲೂ ಉದ್ದಿಮೆ ನಡೆಸಬಾರದು. ನಾವು ಬೆಳೆದ ಬೆಳೆಯನ್ನು ಅನ್ನ ಮಾಡಿಕೊಳ್ಳುತ್ತೇವೆ. ಈ ಅನ್ನವನ್ನು ಕಾನೂನಿನ ಮೂಲಕ ಲಾಕರ್‌ನಲ್ಲಿ ಬೀಗ ಹಾಕಲು ಸರ್ಕಾರ ಮುಂದಾಗಿದೆ. ಕೃಷಿ ಕಾಯ್ದೆ ಅಡಿ ಪ್ರತಿಭಟನೆ ನಡೆಯದಿದ್ದರೆ 20 ವರ್ಷಗಳಲ್ಲಿ ರೈತರು ಜಮೀನು ಕಳೆದುಕೊಳ್ಳಲಿದ್ದಾರೆ ಎಂದರು.