ವಿಜಯಪುರ: ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಕೃಷಿ ಕಾಯ್ದೆ ವಿರೋ ಸಿ ಕರೆ ನೀಡಿರುವ ಸೆ.27 ರ ಭಾರತ ಬಂದ್‌ಗೆ ಬೆಂಬಲಿಸಲು ವಿಜಯಪುರ ಜಿಲ್ಲೆಯ ಪ್ರಗತಿಪರ ಹಾಗೂ ರೈತ ಪರ ಸಂಘಟನೆಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಸೋಮವಾರ ನಗರದ ಎಪಿಎಂಸಿ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಜರುಗಿದ ರೈತರು, ಕಾರ್ಮಿಕರು, ವ್ಯಾಪಾರಸ್ಥರು, ವಾಹನ ಚಾಲಕರು, ಪ್ರಗತಿಪರ ಸಂಘಟನೆಗಳು ಕರೆದಿದ್ದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಶಿ ಕಲಾದಗಿ, ಜಿಲ್ಲೆಯ ಜನತೆಗೆ ಸ್ವಯಂ ಪ್ರೇರಿತವಾಗಿ ವಿಜಯಪುರ ಬಂದ್ ಮಾಡುವಂತೆ ಮನವಿ ಮಾಡಿಕೊಂಡರು. ದೇಶದಲ್ಲಿ ಕಳೆದ 10 ತಿಂಗಳಿಂದ ದೇಶದ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ತಿದ್ದುಪಡಿ ಕರಾಳ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಲಾಗುತ್ತಿದೆ. ಇಷ್ಟಾದರೂ ಸರ್ಕಾರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ನೂರಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಇದು ದೇಶದ ರೈತರಿಗೆ, ಹೋರಾಟಗಾರರಿಗೆ ಸೂ #ರ್ತಿ ತುಂಬಿದೆ.
ಜಾಗತಿಕ ಮಟ್ಟದಲ್ಲಿ ಐತಿಹಾಸಿಕ ಎನಿಸಿದೆ ಎಂದರು.
ಮತ್ತೂಂದೆಡೆ ಕಾಯ್ದೆಯ ಬಗ್ಗೆ ಸುಳ್ಳು ಹೇಳಿಕೆ ಕೊಡಿಸುತ್ತಾ ರೈತ ಸಮುದಾಯದ ಹಾಗೂ ಹೋರಾಟದ ದಿಕ್ಕು ತಪ್ಪಿಸಲು ಹುನ್ನಾರ ನಡೆದಿದೆ. ಹೀಗಾಗಿ ಕೇಂದ್ರದ ಮೇಲೆ ಇಂಥ ಕರಾಳ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಸೆ. 27ರಂದು ಕರೆ ನೀಡಿರುವ ಭಾರತ ಬಂದ್‌ಗೆ ವಿಜಯಪುರ ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡುವ ಮೂಲಕ ಬೆಂಬಲ ನೀಡಲಾಗುತ್ತದೆ ಎಂದರು.
ಎಪಿಎಂಸಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ಜಯಾನಂದ ತಾಳಿಕೋಟಿ, ಲಾಲಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆಯ ವ್ಯಾಪಾರಸ್ಥರ ಅಧ್ಯಕ್ಷ ವಿ.ಡಿ. ಕರ್ಪೂರಮಠ, ತರಕಾರಿ ವ್ಯಾಪಾರಸ್ಥರ ಸಂಘದ ಸಲಿಂ ಸಗರ, ಫಾರೂಖ್ ಬಾಗವಾನ್, ಆಟೋ ಯೂನಿಯನ್‌ನ ನೂರಅಹ್ಮದ, ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ, ಫಯಾಜ್ ಕಲಾದಗಿ, ಸ್ಲಂ ಅಭಿವೃದ್ಧಿ ಸಮಿತಿಯ ಅಕ್ರಂ ಮಾಶ್ಯಾಳಕರ, ದಸ್ತಗೀರ ಉಕ್ಕಲಿ, ಜನವಾದಿ ಮಹಿಳಾ ಸಂಘಟನೆಯ ಸುರೇಖಾ ರಜಪೂತ, ಬ್ಯಾಂಕ್ ನಿವೃತ್ತ ನೌಕರರ ಸಿ.ಎ.ಗಂಟೆಪ್ಪಗೋಳ, ಟಿಪ್ಪು ಕ್ರಾಂತಿ ಸೇನೆಯ ರಿಜ್ವಾನ್ ಮುಲ್ಲಾ, ನಿರ್ಮಲಾ ಹೊಸಮನಿ,
ದಲಿತಪರ ಸಂಘಟನೆಯ ಶ್ರೀನಾಥ ಪೂಜಾರಿ, ಕಾರ್ಮಿಕ ಸಂಘಟನೆಯ ಲಕ್ಷ್ಮಣ ಹಂದ್ರಾಳ, ಎಚ್.ಟಿ. ಮಲ್ಲಿಕಾರ್ಜುನ, ರೈತ ಸಂಘಟನೆಯ ಬಿ.ಭಗವಾನರೆಡ್ಡಿ, ಅರವಿಂದ ಕುಲಕರ್ಣಿ ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.