Advertisement

ವಜ್ರದಿಂದ ರೈತನ ಬದುಕು ಬದಲು!

12:47 AM Dec 08, 2020 | mahesh |

ಭೋಪಾಲ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ರೈತ ಲಖನ್‌ ಯಾದವ್‌ (45) ಈಗ ಖುಷಿಯಾಗಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಕೇವಲ 200 ರೂ.ಗೆ ಗುತ್ತಿಗೆಗೆ ಪಡೆದ ಭೂಮಿಯಲ್ಲಿ 14.98 ಕ್ಯಾರೆಟ್‌ ವಜ್ರ ಸಿಗಲಿದೆ. ಅದರಿಂದಾಗಿ ತನ್ನ ಜೀವನದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂಬ ನಿರೀಕ್ಷೆಯೂ ಅವರಿಗೆ ಇರಲಿಲ್ಲ. ತೀರಾ ಬಡತನದಲ್ಲಿದ್ದ ಅವರಿಗೆ ವಜ್ರವನ್ನು ಹರಾಜು ಹಾಕಿ ಸಿಕ್ಕಿದ ಮೊತ್ತ ಅವರ ಜೀವನದ ಮುಂದಿನ ದಿನಗಳನ್ನೇ ಬದಲಾಯಿದೆ.

Advertisement

ಭೂಮಿ ಉಳುಮೆ ಮಾಡಲು ಮುಂದಾದಾಗ ಕಲ್ಲುಗಳ ನಡುವೆ ವಿಶಿಷ್ಟ ವಸ್ತುವೊಂದು ಕಾಣಿಸಿತು, ಅದರ ಮೇಲಿನ ಧೂಳು ಸರಿಸಿದಾಗ ಹೊಳೆಯಲಾರಂಭಿಸಿತು. ಇದನ್ನು ಜಿಲ್ಲಾಡಳಿತಕ್ಕೆ ತೋರಿಸಿದಾಗ ಅದನ್ನು ವಜ್ರ ಎಂದು ಖಚಿತಪಡಿಸಿದರು ಎಂದು ಲಖನ್‌ ತಿಳಿಸಿದ್ದಾರೆ. ಡಿ.5ರಂದು ವಜ್ರವನ್ನು 60.6 ಲಕ್ಷ ರೂಪಾಯಿಗೆ ಹರಾಜಾಗಿದ್ದು, ಇದರಲ್ಲಿ ಒಂದಷ್ಟು ಪಾಲನ್ನು ಜಿಲ್ಲಾಡಳಿತ ಲಖನ್‌ಗೂ ಕೊಟ್ಟಿದೆ. ಈ ಹಣದಲ್ಲಿ ಆತ ಈಗ ಎರಡು ಎಕರೆ ಜಮೀನು, ಒಂದು ಬೈಕ್‌, ಎರಡು ಎಮ್ಮೆಗಳನ್ನು ಖರೀದಿಸಿದ್ದಾನೆ. ಮತ್ತಷ್ಟು ಮೊತ್ತವನ್ನು ಮಕ್ಕಳ ಹೆಸರಲ್ಲಿ ಸ್ಥಿರ ಠೇವಣಿ ಇಡುವುದಾಗಿ ಹೇಳಿದ್ದಾರೆ ಲಖನ್‌.

Advertisement

Udayavani is now on Telegram. Click here to join our channel and stay updated with the latest news.

Next