Advertisement

ಫಿಫಾ ಮಾಜಿ ಅಧ್ಯಕ್ಷ ಬ್ಲೇಟರ್‌ ವಿರುದ್ಧ ಕ್ರಿಮಿನಲ್ ಮೊಕದ್ದಮೆ

11:50 PM Dec 23, 2020 | sudhir |

ಜಿನೇವಾ (ಸ್ವಿಜರ್ಲೆಂಡ್‌): ವಿಶ್ವ ಫ‌ುಟ್‌ಬಾಲ್‌ನ ಅತ್ಯುನ್ನತ ಸಂಸ್ಥೆ ಫಿಫಾ ತನ್ನ ಮಾಜಿ ಅಧ್ಯಕ್ಷ ಸೆಪ್‌ ಬ್ಲೇಟರ್‌ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದೆ. ವಿಶ್ವ ಫ‌ುಟ್‌ಬಾಲ್‌ ವಸ್ತು ಸಂಗ್ರಹಾಲಯದ ನಿರ್ಮಾಣಕ್ಕೆ ಭಾರೀ ಪ್ರಮಾಣದಲ್ಲಿ ಹಣವನ್ನು ಅಪವ್ಯಯ ಮಾಡಿದ್ದಾರೆನ್ನುವುದು ಅವರ ಮೇಲಿನ ಆರೋಪ.

Advertisement

ಇದಕ್ಕೆ 10.33 ಸಾವಿರ ಕೋಟಿ ರೂ. ಹಣವನ್ನು ವ್ಯಯಿಸಲಾಗಿದೆ. ಬ್ಲೇಟರ್‌ ಕಾಲದಲ್ಲಿ ಇದಕ್ಕಾಗಿ ನೇಮಿಸಲಾಗಿದ್ದ ಕಂಪೆನಿಗಳು, ವ್ಯವಸ್ಥಾಪಕರು ಅವ್ಯವಹಾರ ಮಾಡಿದ್ದಾರೆಂದು ಫಿಫಾದ ಈಗಿನ ಆಡಳಿತ ಆರೋಪಿಸಿದೆ. ಈಗಾಗಲೇ ಬ್ಲೇಟರ್‌ ವಿರುದ್ಧ ಎರಡು ಪ್ರಕರಣಗಳ ವಿಚಾರಣೆ ನಡೆಯುತ್ತಿರುವುದು ಗಮನಾರ್ಹ.

ಬ್ಲೇಟರ್‌ ಅವರ ಮಹತ್ವಾಕಾಂಕ್ಷಿ ವಸ್ತು ಸಂಗ್ರಹಾಲಯ 2015ರಲ್ಲೇ ಉದ್ಘಾಟನೆಯಾಗಬೇಕಿತ್ತು. ಆದರೆ 5ನೇ ಬಾರಿಗೆ ಫಿಫಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು ಅಮೆರಿಕ ಮತ್ತು ಸ್ವಿಜರ್ಲೆಂಡ್‌ ತನಿಖಾ ಸಂಸ್ಥೆಗಳಿಂದ ಒತ್ತಡ ಎದು ರಿಸಿದ ಪರಿಣಾಮ ರಾಜೀನಾಮೆ ನೀಡಿದರು. ಆದ್ದ ರಿಂದ ಅದು 2016ರಲ್ಲಿ ಉದ್ಘಾಟನೆಯಾಯಿತು. ಈ ವಸ್ತುಸಂಗ್ರಹಾಲಯವನ್ನು 1970ರಲ್ಲಿ ನಿರ್ಮಿಸ ಲಾಗಿದ್ದ ಫಿಫಾ ಕಟ್ಟಡವೊಂದನ್ನು ನವೀಕರಿಸಿ ಕಟ್ಟಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next