ಕುರುಗೋಡು: ಕಳೆದ ದಿನಗಳಿಂದೆ ಸುರಿದ ಅಕಾಲಿಕ ಮಳೆಯಿಂದ ಬೆಳೆ ನಾಶ ಗೊಂಡ ಹಿನ್ನಲೆ ಮನ ನೊಂದು ರೈತ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಬೈಲೂರ್ ಗ್ರಾಮದಲ್ಲಿ ಜರುಗಿದೆ.
ಆತ್ಮಹತ್ಯೆ ಗೆ ಶರಣಾದ ರೈತ ಗಾಳೆಪ್ಪ (45) ವರ್ಷ ಎನ್ನಲಾಗಿದೆ.
7 ಎಕರೆ ಸಾಗುವಳಿ ಮಾಡಿ ಮೆಣಿಸಿನಕಾಯಿ ಬೆಳೆ ಬೆಳಿದಿದ್ದ ಮತ್ತು ತಾಯಿಯ ಹೆಸರಿದ್ದ 3 ಎಕರೆ ಯಲ್ಲಿ ಭತ್ತ ನಾಟಿ ಮಾಡಿದ್ದ ಕಳೆದ ದಿನ ಗಳಿಂದೆ ವಾಯುಬಾರು ಕುಸಿತದಿಂದ ನಿರಂತರವಾಗಿ ಸುರಿದ ಜಿಟಿ ಜಿಟಿ ಮಳೆಯಿಂದ ಸಂಪೂರ್ಣ ವಾಗಿ ಬೆಳೆ ನಾಶಗೊಂಡು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾದ ಹಿನ್ನಲೆ ಬೆಳೆಗೆ ವ್ಯಾಯಿಸಿದ ಸಾಲವನ್ನು ಹೇಗೆ ತೀರಿಸೋದು ಎಂದು ಮನನೊಂದು ಆತ್ಮಹತ್ಯೆ ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೈಲೂರು ಸಹಕಾರ ಸಂಘದಲ್ಲಿ 3ಲಕ್ಷಕ್ಕೂ ಹೆಚ್ಚು ತಾಯಿಯ ಹೆಸರಲ್ಲಿ ಸಾಲ ಹೊಂದಿದ್ದಾನೆ ಹಾಗೆ ಹೊರಗಡೆ 10 ಲಕ್ಷಕ್ಕೂ ಹೆಚ್ಚು ಕೈ ಸಾಲ ಮಾಡಿದ್ದಾನೆ ಎಂದು ಹೇಳಲಾಗಿದೆ.
ಈಗಾಗಲೇ ಕುರುಗೋಡು ಸುತ್ತಮುತ್ತ ರೈತರ ಸಾವು ಸರಣಿಯಲ್ಲಿ ಇದ್ದು, ಇದನ್ನು ತಡೆಗಟ್ಟಲು ಸರಕಾರ ಮುಂದಾಗಬೇಕಿದೆ.
ಶಾಸಕ ಗಣೇಶ್ ಭೇಟಿ :
ಮೃತ ಹೊಂದಿದ ರೈತನ ಕುಟುಂಬದ ಮನೆಗೆ ಕ್ಷೇತ್ರದ ಶಾಸಕ ಜೆ. ಎನ್ ಗಣೇಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಸರಕಾರದಿಂದ ಬರುವ ಪರಿಹಾರವನ್ನು ಕೂಡಲೇ ನೀಡುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ತಿಳಿಸಲಾಗುವುದು ಹಾಗೆ ಮೃತನ ಮಕ್ಕಳಿಗೆ ಉಚಿತ ಶಿಕ್ಷಣ ಪತ್ನಿಗೆ ಸರಕಾರಿ ಕಚೇರಿ ಯಲ್ಲಿ ಉದ್ಯೋಗ ನೀಡುವಂತೆ ಸರಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಮೃತರಿಗೆ ಪತ್ನಿ ಸೇರಿದಂತೆ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳು ಇದ್ದು ಅಪಾರ ಬಂದು ಬಳಗದಿಂದ ಅಗಲಿದ್ದಾರೆ.
ಈ ಕುರಿತು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.