Advertisement

ಕೃಷಿ ಪರಿಕರ ಮಾರಾಟಗಾರರಿಂದ ರೈತರ ಅಭಿವೃದ್ಧಿ

03:55 PM Sep 03, 2021 | Team Udayavani |

ದೊಡ್ಡಬಳ್ಳಾಪುರ: ದೇಶದಲ್ಲಿ ಇಂದು ಕೃಷಿಯಲ್ಲಿನ ಆವಿಷ್ಕಾರಗಳಿಂದಾಗಿ ಆಹಾರ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಲಾಗಿದೆ. ಆಹಾರಧಾನ್ಯಗಳ ಉತ್ಪಾದನೆ ಹೆಚ್ಚಿಸುವುದರೊಂದಿಗೆ ರೈತರ ಆದಾಯ ದ್ವಿಗುಣಗೊಳಿಸುವುದು ಕೃಷಿ ಪರಿಕರ ಮಾರಾಟಗಾರರ ಧ್ಯೇಯವಾಗ ಬೇಕೆಂದು ಕೃಷಿ ವಿವಿ ಕುಲಪತಿ ಡಾ.ಎಸ್‌. ರಾಜೇಂದ್ರಪ್ರಸಾದ್‌ ತಿಳಿಸಿದರು.

Advertisement

ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿವಿ ಮತ್ತು ಕೃಷಿ ವಿಸ್ತರಣೆ ನಿರ್ವಹಣೆ ರಾಷ್ಟ್ರೀಯ ಸಂಸ್ಥೆ ಸಹಯೋಗದಲ್ಲಿ ಕೃಷಿ ಪರಿಕರಗಳ ವಿತರಕರಿಗೆ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ಗೆ ನೋಂದಾಯಿಸಿದ ಅಭ್ಯರ್ಥಿಗಳಿಗೆ ಸಂಪರ್ಕತರಗತಿಗಳನ್ನುಉದ್ಘಾಟಿಸಿ
ಮಾತನಾಡಿದ ಅವರು, ಕೃಷಿಯಲ್ಲಿ ರೈತರಷ್ಟೇ ಮಹತ್ವವು ಕೃಷಿ ಪರಿಕರ ಮಾರಾಟಗಾರರಿಗಿದ್ದು, ರೈತರೊಂದಿಗೆ ನೇರವಾಗಿ ಸಂಪರ್ಕದಲ್ಲಿ ರುವುದರಿಂದ, ಕೃಷಿ ತಂತ್ರಜ್ಞಾನಗಳ ಕುರಿತಾಗಿ ಮಾಹಿತಿ ಪಡೆಯುವುದು ಅವಶ್ಯವಾಗಿದೆ ಎಂದು ಹೇಳಿದರು.

ರೈತರಿಗೆ ತಾಂತ್ರಿಕ ಕೃಷಿ ಮಾಹಿತಿ: ಕೃಷಿ ವಿವಿಯಿಂದ ವಿವಿಧ ತರಬೇತಿಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ವಿವಿಧ
ರಂಗಗಳಿಂದ ಬಂದಿರುವ ಶಿಬಿರಾರ್ಥಿಗಳು ಕೃಷಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ನಮ್ಮ ದೇಶವು
ಸ್ವಾತಂತ್ರ್ಯದ ಬಳಿಕ ಸಂದಿಗ್ಧ ಪರಿಸ್ಥಿತಿಯದ್ದ ನಮ್ಮ ದೇಶ ಆಹಾರ ಪದಾರ್ಥಗಳನ್ನು ಹೊರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ
ಈಗ ಪರಿಸ್ಥಿತಿ ಬದಲಾಗಿದೆ. ಈ ಡಿಪ್ಲೊಮಾ ತರಗತಿಗಳಲ್ಲಿ ಕೃಷಿ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಮನದಟ್ಟುಮಾಡಿಕೊಂಡು ರೈತರಿಗೆ ಸೂಕ್ತ
ರೀತಿಯಲ್ಲಿ ಕೃಷಿ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ:ಅಡಿಕೆ ಬೆಳೆಗಾರರಿಗೆ ಬಂಪರ್‌: ಅರ್ಧಲಕ್ಷ ದ ಗಡಿ ದಾಟಿದ ದೇಸಿ ಕೆಂಪಡಿಕೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ಎನ್‌. ದೇವಕುಮಾರ್‌ ಮಾತನಾಡಿ, ವ್ಯಾವಹಾರಿಕ
ದೃಷ್ಟಿಯಿಂದ ಮಾತ್ರವಲ್ಲದೇ ರೈತರಿಗೆ ಕೃಷಿ ತಾಂತ್ರಿಕತೆಗಳ ಮಾಹಿತಿ ನೀಡಬೇಕಿದೆ ಎಂದರು.

Advertisement

ದೇಸಿ ರಾಜ್ಯ ನೋಡಲ್‌ ಅಧಿಕಾರಿ ಡಾ.ಪೆನ್ನೋಬಳಿ ಸ್ವಾಮಿ,ಮಾತನಾಡಿಇದುವರೆಗೂ ಕರ್ನಾಟಕದಲ್ಲಿ 11, 534 ಜನ ದೇಸಿ ಡಿಪ್ಲೊಮಾ
ಪಡೆದು ಮುಂಚೂಣಿಯಲ್ಲಿದೆ ಎಂದು ತಿಳಿಸಿದರು. ರೈತರ ಆರ್ಥಿಕ ಅಭಿವೃದ್ಧಿಗೆ ಒತ್ತು: ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಪಿ. ಮಲ್ಲಿಕಾರ್ಜುನ ಗೌಡ ಮಾತನಾಡಿ, ಡಿಪ್ಲೊಮೋ ತರಗತಿಗಳ ಸದುಪಯೋಗ ಪಡೆದುಕೊಂಡು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದರ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿತು ರೈತರ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡಿ ಇತರರಿಗೆ ಮಾದರಿ ಯಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅನುವುಗಾರ ಓಬಳೇಶಪ್ಪ, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಕೃಷಿ ಪರಿಕರಗಳ ಮಾರಾಟಗಾರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next