Advertisement

ರೈತಾಪಿ ಮಕ್ಕಳು ಬೇರೆ ಬೇರೆ ಉದ್ಯೋಗ ಮಾಡಿ ಮುಂದೆ ಬರಬೇಕು: ಸಿಎಂ ಬೊಮ್ಮಾಯಿ

02:40 PM Dec 04, 2022 | Team Udayavani |

ಹಾವೇರಿ: ಮುಂದಿನ ದಿನಗಳಲ್ಲಿ ಶಿಗ್ಗಾವಿ ಪ್ರಮುಖ ಕೇಂದ್ರವಾಗಿ ಬೆಳೆಯಲಿದ್ದು, ಜವಳಿ ಪಾರ್ಕ್, ಶಿಕ್ಷಣ ಸಂಸ್ಥೆಗಳು ಬರಲಿವೆ. ಶಿಗ್ಗಾವಿ-ಸವಣೂರು ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅವಕಾಶಗಳಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಜಿಲ್ಲೆಯ ಶಿಗ್ಗಾವಿ ಪಟ್ಟಣದ ಶ್ರೀ ಹನುಮಂತಗೌಡ್ರು ಪಾಟೀಲ ಕಲ್ಯಾಣ ಭವನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಶಿಗ್ಗಾವಿ ತಾಲೂಕಿನಲ್ಲಿ ಅತ್ಯಂತ ಶ್ರಮ ವಹಿಸಿ ಬದುಕು ಸಾಗಿರುವ ರೈತರ ಸಮೂಹವಿದೆ. ಹನುಮಂತಗೌಡ್ರು ಪಾಟೀಲ ಅವರು ವ್ಯವಸ್ಥಿತ ಕೃಷಿ ಹೇಗೆ ಮಾಡಬೇಕು ಎಂಬ ಕುರಿತು ಕೆಲಸವನ್ನು ಮಾಡುತ್ತಿದ್ದರು. ಇವರ ಕೃಷಿ ಕಾರ್ಯವನ್ನು ಜನರು ಇತರೆ ಭಾಗದಿಂದ ಬಂದು ನೋಡಿಕೊಂಡು ಹೋಗುತ್ತಿದ್ದರು. ಯಾವುದು ಎಷ್ಟು ಬಳಕೆ ಮಾಡಬೇಕು. ಎಷ್ಟು ಗೊಬ್ಬರ, ಯಾವ ಬಿತ್ತನೆ ಬೀಜ ಬಳಸಬೇಕು ಎಂಬ ಬಗ್ಗೆ ವೈಜ್ಞಾನಿಕವಾಗಿ ಚಿಂತನೆ ಮಾಡುತ್ತಿದ್ದರು. ತಾಲೂಕಿನ ಬಗ್ಗೆ ಅತ್ಯಂತ ಕಳಕಳಿ ಹೊಂದಿದ್ದ ಹನುಮಂತಗೌಡ್ರು ಬುದ್ಧಿವಂತರಿದ್ದರು. ಬಹಳಷ್ಟು ಚಲ, ಹಠದೊಂದಿಗೆ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ. ಜನರ ಸೇವೆ ಮಾಡುವ ಶಕ್ತಿ ನೀಡಲಿ ಎಂದರು.

ಕಾಲ ಬದಲಾಗಿದ್ದು, ಭೂಮಿ ಕಡಿಮೆಯಾಗಿದೆ. ಜೊತೆಗೆ ಅವಲಂಬಿತರು ಹೆಚ್ಚಾಗಿದ್ದಾರೆ. ಈ ಹಿನ್ನೆಲೆ ರೈತಾಪಿ ಮಕ್ಕಳು ಬೇರೆ ಬೇರೆ ಉದ್ಯೋಗ ಮಾಡಿ ಮುಂದೆ ಬರಬೇಕು ಎಂದು ಹೇಳಿದರು.

ಇದನ್ನೂ ಓದಿ:ಆಧ್ಯಾತ್ಮಿಕತೆಯ ಚಿಂತನೆಯೊಂದಿಗೆ ಮುನ್ನಡೆಯುವ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ; ರಾಜ್ಯಪಾಲ ಗೆಹ್ಲೋಟ್

Advertisement

ಉದ್ಯಮಿ ವಿಜಯ ಸಂಕೇಶ್ವರ ಮಾತನಾಡಿ, ಈ ಕಲ್ಯಾಣ ಮಂಟಪ ಕೇವಲ ಮದುವೆ ಸಮಾರಂಭಗಳಿಗೆ ಸಿಮೀತಗೊಳ್ಳದೇ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕು. ರೈತರು, ಯುವಕರಿಗೆ ಮಾರ್ಗದರ್ಶನ ನೀಡುವ ಚಟುವಟಿಕೆಗಳು ನಡಯಬೇಕು ಎಂದರು.

ಈ ವೇಳೆ ಸಂಸದ ಶಿವಕುಮಾರ ಉದಾಸಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಸಿದ್ದಾರ್ಥಗೌಡ್ರು ಪಾಟೀಲ, ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಸುಶೀಲಾ ಪಾಟೀಲ, ವಿಜಯಕುಮಾರ ಕುಲಕರ್ಣಿ, ಬಾಬುಸಾಹೇಬ್ ಪಾಟೀಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next