Advertisement

ನಾಳೆ ರೈತ ಜಾಗೃತ ಸಮಾವೇಶ

01:23 PM Dec 23, 2019 | Team Udayavani |

ಕನಕಗಿರಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತ ಜಾಗೃತ ಸಮಾವೇಶ ಮತ್ತು ರೈತ ದಿನಾಚರಣೆ ಮಾಡಲಾಗುವುದು ಎಂದು ತಾಲೂಕು ಘಟಕದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೆ. ಗಣೇಶ ರೆಡ್ಡಿ ಹೇಳಿದರು.

Advertisement

ಅವರು ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಬೃಹತ್‌ ಪ್ರಮಾಣದ ರೈತ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದು, ರಾಜ್ಯಾಧ್ಯಕ್ಷರಾದ ಚಂದ್ರಶೇಖರ ಕೋಡಿಹಳ್ಳಿ, ರಾಜ್ಯ ಕಾರ್ಯದರ್ಶಿಗಳಾದ ಶಿವಪ್ಪ ಅಂಬಣ್ಣಿ, ಮಾಲುತೇಶ ಪೂಜಾರ, ಸಂಘಟನಾ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ರಾಮದುರ್ಗಾ, ನಜೀರಸಾಬ್‌ ಮೂಲಿಮನಿ ಸೇರಿದಂತೆ ವಿವಿಧ ರೈತ ನಾಯಕರು ಭಾಗವಹಿಸಲಿದ್ದಾರೆ. ಡಿ. 24ರಂದು ಬೆಳಗ್ಗೆ ಪಟ್ಟಣದ ಮೇಲುಗಡೆ ಅಗಸಿಯಿಂದ ಪ್ರಾರಂಭವಾಗುವ ಎತ್ತಿನ ಬಂಡಿಗಳ ಮೆರವಣಿಗೆ ರಾಜಬೀದಿಯ ಮೂಲಕ ಕನಕಾಚಲಪತಿ ವೇದಿಕೆ ತಲುಪಲಿದೆ. ವೇದಿಕೆಯಲ್ಲಿ ಕೃಷ್ಣಾ ಬಿಸ್ಕಿಂ, ಸಮನಾಂತರ ಜಲಾಶಯ, ಖರೀದಿ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಕಚೇರಿಗಳ ಪ್ರಾರಂಭ, ವಾರದ ಸಂತೆ ಮಾರುಕಟ್ಟೆ ಸ್ಥಳ ನಿಗದಿ ಪಡಿಸುವುದು, ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ರೈತರ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.

ಸುತ್ತಮುತ್ತ ಹೋಬಳಿಯಿಂದ 5 ಸಾವಿರಕ್ಕೂ ಅ ಧಿಕ ರೈತರು ಹಾಗೂ ರೈತ ಮಹಿಳೆಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ರೈತ ಮುಖಂಡರಾದ ಉಮಾಕಾಂತ ದೇಸಾಯಿ, ಸಗರಪ್ಪ ಗಂಗಾಮತ, ಗಿರೀಶ ದೇವರೆಡ್ಡಿ, ಗೋಪಾಲಕೃಷ್ಣ, ಅಂಬಣ್ಣ ಮಹಿಪತಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next