ವಿಜಯಪುರ: ಸಾಲಬಾಧೆಗೆ ರೈತರೊಬ್ಬರು ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಕಡಣಿ ಗ್ರಾಮದಲ್ಲಿ ಜರುಗಿದೆ.
ಆತ್ಮಹತ್ಯೆ ಮಾಡಿಕೊಂಡ ಯುವ ರೈತನನ್ನು ಕಡಣಿ ಗ್ರಾಮದ ಪುಂಡಲಿಂಗ ಜೀರಟಗಿ (22) ಎಂದು ಗುರುತಿಸಲಾಗಿದೆ. ಆಲಮೇಲದ ಕಡಣಿ ರಸ್ತೆಯಲ್ಲಿ ಇರುವ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೈತನ ಜಮೀನಿನಲ್ಲಿದ್ದ ಬೆಳೆ ಹಾಳಾಗಿತ್ತು. ಇದರಿಂದ ಗೇಣಿ ಮೇಲೆ ಕೃಷಿ ಮಾಡಿದ್ದ ಜಮೀನಿನ ಮಾಲೀಕರಿಗೆ ಹಣ ಕೊಡಲಾಗದೆ ಕಂಗಾಲಾಗಿದ್ದ. ಇದಲ್ಲದೆ ಕೃಷಿ ಕಾರ್ಯಕ್ಕಾಗಿ ಖಾಸಗಿಯಾಗಿ ಲಕ್ಷಾಂತರ ರೂ. ಸಾಲವನ್ನೂ ರೈತ ಪುಂಡಲಿಕ ಜೀರಟಗಿ ಮಾಡಿದ್ದ.
ಇದನ್ನೂ ಓದಿ:ಪ್ರೇಮಿಗಳ ದಿನದಂದು ಅಹಿತಕರ ಘಟನೆಗೆ ಆಸ್ಪದವಾಗದಂತೆ ಅಗತ್ಯ ಕ್ರಮ: ಮಂಗಳೂರು ಡಿಸಿಪಿ
ಬೆಳೆ ಹಾನಿಯಾದ ಕಾರಣ ಹಣ ಮರು ಪಾವತಿ ಮಾಡಲು ಕಷ್ಟವಾದ ಕಾರಣ ನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ.
ವಿಷಯ ತಿಳಿದ ಅಲಮೇಲ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಇದನ್ನೂ ಓದಿ: ಕಂಟೈನರ್ ಗೆ ಕಾರು ಢಿಕ್ಕಿ: ಕಾರಿನಲ್ಲಿದ್ದ ಬೆಂಗಳೂರು ಮೂಲದ ನಾಲ್ವರು ಯುವಕರು ಸಾವು