Advertisement
ತಾಲ್ಲೂಕ್ ಕೇಂದ್ರದಿಂದ 30 ಕಿ.ಮೀ ದೂರದಲ್ಲಿದೆ ಈ ಪ್ರೌಢಶಾಲೆ. ಇದು ಪ್ರಾರಂಭವಾಗಿ ನಾಲ್ಕುವರೆ ದಶಕಗಳೇ ಕಳೆದಿವೆ. ಈ ಪ್ರೌಢಶಾಲೆಯಲ್ಲಿ ಶಿಕ್ಷಣದೊಂದಿಗೆ ಕಲೆ, ಸಂಗೀತ, ಸಾಹಿತ್ಯ, ಪರಿಪೂರ್ಣ ಶಿಕ್ಷಣದೊಂದಿಗೆ ಪಾರಂಪರಿಕ ಕೃಷಿಗೆ ಆಧ್ಯತೆ ನೀಡಲಾಗಿದೆ. ಹೆಸರೇ ಸೂಚಿಸುವಂತೆ “ಪ್ರಗತಿ’ ಶಿಕ್ಷಣ ಸಂಸ್ಥೆ-ಪ್ರಗತಿ ಪ್ರೌಢಶಾಲೆ, ಪ್ರಗತಿ ಸಂಸ್ಕೃತ ಪಾಠಶಾಲೆ, ಪ್ರಗತಿ ಹಿಂದಿಪಾಠಶಾಲೆ,ಪ್ರಗತಿ ವಾಚನಾಲಯ, ಪ್ರಗತಿ ಪ್ರಾಥಮಿಕ ಶಾಲೆ, ಪ್ರಗತಿ ಭಾವೀ ಕೃಷಿಕರ ಸಂಘ, ಅಭಿನವ ಕಲಾಕೂಟ, ಪ್ರಗತಿ ಅನಾಥಧಾಮ ಹೀಗೆ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಹೆಜ್ಜೆಗಳನ್ನಿಡುತ್ತ ಸಾಗುತ್ತಿದೆ. ಮೂಲಭೂತವಾಗಿ ಕಲೆ, ಕೃಷಿ ಕ್ರೀಡೆ ಹೆಚ್ಚಿನ ಆಧ್ಯತೆ ನೀಡುತ್ತಿರುವುದು ಇಲ್ಲಿನ ವಿಶೇಷ. ಹಾಗಂತ ವಿದ್ಯಾರ್ಥಿಗಳು ಓದಿನಲ್ಲಿ ಹಿಂದಿಲ್ಲ. ಎಲ್ಲಾದರಲ್ಲೂ ಮುಂದು. Related Articles
Advertisement
ಕೈತೋಟದ ಸಲುವಾಗಿಯೇ ಇರುವ ಸಮಯವನ್ನು ಇವುಗಳ ಪೋಷಣೆಗೆ ಎಲ್ಲಾ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಕಾಯಕ ಸದಾ ನಡೆಯುತ್ತಿದೆ. ಈಗೀಗ ಮೂರರಿಂದ ನಾಲ್ಕು ಕ್ವಿಂಟಾಲ್‌ಗಳಷ್ಟು ಅಡಿಕೆಯನ್ನು ಬೆಳೆದು ಲಕ್ಷಾಂತರ ರೂ. ಆದಾಯವನ್ನು ಶಾಲೆ ಪಡೆಯುತ್ತಿದೆ. ಪ್ರೌಢಶಾಲಾ ಮಕ್ಕಳ ಬಿಸಿಯೂಟಕ್ಕೆ ಸಾಕಾಗುವಷ್ಟು ತೆಂಗಿನಕಾಯಿಗಳನ್ನು ತೋಟದಲ್ಲಿಯೇ ಬೆಳೆದುಕೊಳ್ಳಲಾಗುತ್ತಿದೆ. ದೆ„ಹಿಕ ಶಿಕ್ಷಕ ಎನ್.ವಿ.ಹೆಗಡೆ, ಗಣೇಶ ಭಟ್ಟ, ಹಾಸ್ಟೇಲ್ ಪರಿವೀಕ್ಷಕ ಸಂತೋಷ ಶೇಟ್, ಹಾಲಿ ಮುಖ್ಯಾಧ್ಯಾಪಕ ವಿನಾಯಕ ಹೆಗಡೆ, ಹಿಂದಿನ ನಿವೃತ್ತ ಮುಖ್ಯಾಧ್ಯಾಪಕರು ಸೇರಿದಂತೆ ಶಾಲೆಯ ಎಲ್ಲಾ ವಿಷಯ ಬೋಧಕ, ಶಿಕ್ಷಕ ಶಿಕ್ಷಕಿಯರು ಬೋಧಕೇತರರು ಎಲ್ಲಾ ಹಂತದಲ್ಲಿ ತಮ್ಮ ನಿಷ್ಠೆಯನ್ನು ತೋರಿದುದರ ಫಲವಾಗಿ ಪ್ರಗತಿ ತನ್ನ ಹೆಸರನ್ನು ಉಳಿಸಿಕೊಂಡು ಹೊರಟಿದೆ. ಪ್ರೌಢಶಾಲೆಗೆ ಸೇರಿದ ಸುಮಾರು ಐದು ಎಕರೆ ಜಾಗವಿದೆ. ಇದನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಂಡಿದ್ದರಿಂದ ಶಾಲೆಯ ಆವರಣ ಪೂರ್ತಿ ಹಸಿರಾಗಿದೆ. ಇಲ್ಲಿ ತಯಾರಿಸಿದ ಸಾವಿರಾರು ಅಡಿಕೆ ಸಸಿಗಳನ್ನು ಮಾರಾಟಮಾಡಿದೆ. ಈ ಮೂಲಕ ಮಕ್ಕಳಲ್ಲಿ ಕೃಷಿ ಕಾಳಜಿಮೂಡಿಸುತ್ತಿದೆ. ಒಂದು ಕಡೆ ಆಕೇಶಿಯ, ಇನ್ನೊಂದೆಡೆ ಸಾಗವಾನಿ, ಮತ್ತೂಂದೆಡೆ ಅಡಿಕೆತೋಟ,ಅದರಲ್ಲಿ ಬಾಳೆ, ಕಾಳಮೆಣಸು, ವೆನಿಲ್ಲಾ ಬƒಹದಾಕರವಾಗಿ ಶಾಲೆಯ ಎದುರು ಕಂಗೊಳಿಸುವ ಕಲ್ಪವೃಕ್ಷಗಳು ನಯನ ಮನೋಹರವಾಗಿದೆ. ಹಾಸ್ಟೇಲ್ ಉಸ್ತುವಾರಿ ವಹಿಸಿಕೊಂಡಿರುವ ಸಂತೋಶ ಶೇಟ್ ಮತ್ತು ವಿದ್ಯಾರ್ಥಿಗಳು ರಜಾ ಅವ ಧಿಯಲ್ಲಿ ಪ್ರಾಣಿಕಾಟಗಳ ಮಧ್ಯೆಯೂ ತೋಟವನ್ನು ರಕ್ಷಿಸುತ್ತಲೇ ಬಂದಿದ್ದಾರೆ. ವಿದ್ಯಾರ್ಥಿಗಳಿಗೆ ಪರಿಸರದ ಮೇಲಿನ ಆಸಕ್ತಿ ಎಷ್ಟಿದೆ ಎಂದರೆ ಬಿಡುವಿನ ವೇಳೆಯಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ನರಸಿಂಹ ಸಾತೊಡ್ಡಿ