ಬಳ್ಳಾರಿ: ಕೇಂದ್ರದ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳು ರೈತರನ್ನು ಮಾತ್ರ ಕಂಗಾಲು ಮಾಡುವುದಲ್ಲದೇ ಮುಂದಿನ ದಿನಗಳಲ್ಲಿ ಇಡೀದೇಶದ ಆಹಾರ ಭದ್ರತೆಯನ್ನೇ ಅಲುಗಾಡಿಸಲಿದೆ ಎಂದು ಎಐಎಂಎಸ್‌ಎಸ್ ರಾಜ್ಯಾಧ್ಯಕ್ಷೆ ಬಿ.ಆರ್. ಅಪರ್ಣಾ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳು ಹಾಗೂ ವಿದ್ಯುತ್‌ತ್ಛಕ್ತಿಬಿಲ್ 2020ನ್ನು ವಿರೋಧಿಸಿ ದೆಹಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಳೆದ 37 ದಿನಗಳಿಂದ ಲಕ್ಷಾಂತರರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಡೀಕೃಷಿ ರಂಗವನ್ನು ನರೇಂದ್ರ ಮೋದಿ ಸರ್ಕಾರ, ಕಾರ್ಪೋರೇಟ್ ಮನೆತನಗಳಿಗೆ ನೆರವಾಗುವಂತೆ ಮಾಡಿದ್ದಾರೆ. ಈ ನಡೆಯನ್ನು ಖಂಡಿಸಿ ರೈತರು ನಡೆಸುತ್ತಿರುವ ಹೋರಾಟ ಅತ್ಯಂತ ನ್ಯಾಯೋಚಿತವಾಗಿದೆ. ಕೇವಲ ದೇಶ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಬೆಂಬಲ ಪಡೆದಿದೆ. ಈ ಕಾಯ್ದೆಗಳು ರೈತರನ್ನು ಮಾತ್ರ ಕಂಗಾಲು ಮಾಡುವಂತವುದಲ್ಲದೆ, ಇಡೀ ದೇಶದ ಆಹಾರ ಭದ್ರತೆಗೆ ಮಾರಕವಾಗಿ ಪರಿಣಮಿಸಲಿದೆ ಎಂದರು.
ಎಐಎಂಎಸ್‌ಎಸ್ ಅಖೀಲಭಾರತ ಸಮಿತಿಯು, ರೈತರು ದೆಹಲಿ ಚಲೋ ಕಾರ್ಯಕ್ರಮವನ್ನು ಪ್ರಾರಂಭಿಸಿದ ಮೊದಲನೇ ದಿನದಿಂದಲೇ ಅವರಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲವನ್ನುವ್ಯಕ್ತ ಪಡಿಸಿದೆ. ದೇಶದಾದ್ಯಂತ ಇಂದಿನವರೆಗೂಹಲವಾರು ಪ್ರತಿಭಟನೆಗಳನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಹೋರಾಟಕ್ಕೆ ಬೆಂಬಲವ್ಯಕ್ತಪಡಿಸಿದ ಸಮಿತಿಯ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಛಬಿರಾಣಿ ಮೊಹಂತಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷೆ, ರಾಜ್ಯಾಧ್ಯಕ್ಷೆಬಿ.ಆರ್.ಅಪರ್ಣಾ ಮತ್ತು ಖಜಾಂಚಿ ಮೊಹುವಾ ನಂದಾ ಅವರು ನಿಯೋಗದಲ್ಲಿ ತೆರಳಿ ದೆಹಲಿಗೆತೆರಳಿ ಸಿಂಘುಗಡಿ, ಘಾಜಿಪೂರ್‌ಗಡಿ, ಠೆಕ್ರಿಗಡಿ,ಷಹಜಾನ್‌ಪುರ್ ಗಡಿಗೆ ಭೇಟಿ ನೀಡಿ ಹೋರಾಟದ ವಾಸ್ತವಾಂಶವನ್ನು ಅರಿತಿದ್ದೇವೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುವವರೆಗೂ ರೈತರು ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ. ನಾವು ಮಕ್ಕಳೊಂದಿಗೆ ಬಂದಿದ್ದೇವೆ.ನಮ್ಮ ಪ್ರಾಣತ್ಯಾಗವಾದರೂ ಸರಿಯೇ ಸರ್ಕಾರ ಈಕಾಯ್ದೆಗಳನ್ನು ಹಿಂಪಡೆಯುವವರೆಗೂ ಇಲ್ಲಿಂದಹಿಂದೆ ಸರಿಯುವುದಿಲ್ಲ ಎಂದು ಘೋಷಣೆ ಕೂಗಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಐಎಂಎಸ್‌ಎಸ್‌ನ ಜಿಲ್ಲಾ ಮುಖಂಡರಾದ ಎಂ.ಎನ್ ಮಂಜುಳಾ, ಎ. ಶಾಂತ, ಕೆ.ಎಂ. ಈಶ್ವರಿ, ರೇಖಾ. ವಿದ್ಯಾವತಿ, ಗಿರೀಜಾ, ಪದ್ಮಾವತಿ, ಅಹಲ್ಯಾ, ವಿಜಯಲಕ್ಷ್ಮೀ ಇದ್ದರು.