ಶಿವರಾತ್ರಿ ಮುಗಿದು ಚಳಿಯ ದಿನಗಳು ಬೇಸಿಗೆಯ ಧಗೆದಿನಗಳಿಗೆ ಹಾದಿ ಮಾಡಿಕೊಡುತ್ತಿರುವಂತೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ದಿನಗಳು ಸಮೀಪಿಸುತ್ತಿದೆ. ಇದರ ಜೊತೆಗೆ ಕೆಲವರಿಗೆ ಓದಿದ ಶಾಲೆಗಳಿಗೆ ವಿದಾಯ ಹೇಳುವ ದಿನಗಳು ಹತ್ತಿರವಾಗುತ್ತಿವೆ. ಇಂದು ಕುಳಿತು ಓದಿದ ಡೆಸ್ಕ್ನ ನಿಮ್ಮ ಜಾಗ ನಾಳೆಯಿಂದ ಬೇರೆಯವರ ಪಾಲು. ಮುಂದೊಮ್ಮೆ ಅದೇ ಶಾಲೆಗೆ ಅದೇ ಜಾಗಕ್ಕೆ ನೀವು ಭೇಟಿ ನೀಡಬಹುದಾದರೂ ಅಲ್ಲಿ “ಹಳೆಯ ವಿದ್ಯಾರ್ಥಿ’ ಎಂಬ ಹಣೆಪಟ್ಟಿ ಇರುತ್ತದೆ.
ರಸ್ತೆಯ ಬದಿಯಲ್ಲಿ ನಿಂತು ಗಮನಿಸಿದರೆ ಹೊಸ ಚೂಡಿ ಅಮ್ಮನದೋ ಅಕ್ಕನದೋ ಸ್ಯಾರಿ-ನವೀನ ಡ್ರೆಸ್‌ಗಳ ಜೊತೆಗೆ ಒಮ್ಮೊಮ್ಮೆ ಮ್ಯಾಚಿಂಗ್ ಇಲ್ಲದೆ ಬೇಕಾಬಿಟ್ಟಿ ಡ್ರೆಸ್ ಮಾಡಿ ಇತರರಿಂದ “ಜಾತ್ರೆ’ ಎಂಬ ಟೀಕೆಗೊಳಗಾಗುತ್ತಿದ್ದರೆ ಗಂಡು ಮಕ್ಕಳು ಯೂನಿಫಾರಂ ತ್ಯಜಿಸಿ ಬಣ್ಣ ಬಣ್ಣದ ದಿರಿಸು, ಕ್ಯಾಪ್, ಗ್ಲಾಸ್ ಧರಿಸಿ ಹೋಗುತ್ತಿದ್ದರೆ ಅನುಮಾನ ಬೇಡ. ಅಂದು ಅವರಿಗೆ “ಫೇರ್‌ವೆಲ್ ಡೇ’ ಇಲ್ಲವೆ “ಸೆಂಡಾಫ್’ ಅಥವಾ “ಬೀಳ್ಕೊಡುಗೆ’ ದಿನವೇ!
ಬಹುತೇಕ ಎÇÉಾ ಶಾಲಾ-ಕಾಲೇಜುಗಳಲ್ಲಿ ನಡೆಯುವ ಈ ಕಾರ್ಯಕ್ರಮಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಸರಸ್ವತಿ ಪೂಜೆ, ಪ್ರವೇಶಪತ್ರ ವಿತರಣೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಅನಿಸಿಕೆಗಳು, ಶಾಲೆಯ ದಿನಗಳ ಮೆಲುಕು, ಆಗಿ ಹೋದ ಘಟನೆಯಲ್ಲಿ ತಪ್ಪಾಗಿದ್ದರೆ ಕ್ಷಮೆಯಾಚನೆ, ಶಿಕ್ಷಕರಿಂದ ಹಿತವಚನ. ಬೈದು ಹೊಡೆದಿದ್ದರೆ ಅದೆಲ್ಲ ನಿಮ್ಮ ಭವಿಷ್ಯದ ಒಳಿತಿಗಾಗಿ, ಇದಾವುದನ್ನು ಮನದಲ್ಲಿಡದೆ ಮುಂದೆ ಎದುರಾದಾಗ “ವಿಶ್’ ಮಾಡದೇ ಕಂಡರೂ ಕಾಣದಂತೆ ಮಾಯವಾಗದಿರಲು ಸೂಚನೆ. ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಿಗೆ ಭವಿಷ್ಯದೆಡೆಗೆ ಯೋಚನೆ ಇನ್ನೂ ಸಮಯ ಮೀರಿಲ್ಲ. ಒಳ್ಳೆ ಫಲಿತಾಂಶ, ಶಾಲೆ, ಶಿಕ್ಷಕರಿಗೆ, ಪೋಷಕರಿಗೆ ಕೀರ್ತಿ ಮುಂತಾದ ಕಾಳಜಿಯ ನುಡಿಗಳು. ಗ್ರೂಪ್ ಫೋಟೋನ ಸಡಗರ. ಸಿಹಿ ಊಟದೊಂದಿಗೆ ಮುಕ್ತಾಯ.
ಕಾರ್ಯಕ್ರಮ ಅದೇ ಆದರೂ ಪ್ರತಿ ವಿದ್ಯಾರ್ಥಿಗೆ ಅದು ಹೊಸದೇ. ಬಾಲ್ಯ ಹಾಗೂ ಯೌವನದೊಂದಿಗೆ ಬೆಸೆದುಕೊಂಡಿರುವ ಶಾಲಾ-ಕಾಲೇಜು ದಿನಗಳು ಯಾವುದೇ ವ್ಯಕ್ತಿಯ ಜೀವಿತಾವಧಿಯ ಸುವರ್ಣಾಕ್ಷರದ ದಿನಗಳು. ಪ್ರಾಥಮಿಕ ಶಾಲಾ ದಿನಗಳು ಅಪ್ಪಅಮ್ಮಂದಿರ ಅತೀವ ಕೇರ್‌ನಲ್ಲಿ ಸ್ವಂತಿಕೆಯಿಲ್ಲದೆ ಕಳೆದು ಹೋಗುವುದರಿಂದ ಹೆಚ್ಚು ಸ್ಥಿರವಾಗಿರುವುದು ಪ್ರೌಢಶಾಲೆಯ ನಂತರದ ದಿನಗಳೇ. ಎÇÉಾ ಹದಿನೈದರಿಂದ ಹದಿನೆಂಟು ವರ್ಷಗಳವರೆಗೆ ವ್ಯಾಸಂಗದ ಅವಧಿ ಇರುವುದಾದರೂ ಬಹುತೇಕರದ್ದು ಎಸ್‌ಎಸ್‌ಎಲ್‌ಸಿ, ಪಿಯುಸಿಗೆ ಮುಗಿದು ಹೋಗುತ್ತದೆ. ಇತ್ತೀಚಿನ ಅಂಕಿಅಂಶವೂ ಕೂಡಾ ಶೇ. 12ರಷ್ಟು ಮಾತ್ರ ವಿದ್ಯಾರ್ಥಿಗಳು ಪದವಿ ಡಿಪ್ಲೊಮಾದೊಂದಿಗೆ ಆಚೆ ಬರುತ್ತಾರೆ ಎಂದು ಹೇಳಿರುವುದು ಉಳಿದ 88 ಜನರ ವಿದ್ಯಾಭ್ಯಾಸದ ಕತೆ ಮಧ್ಯಕ್ಕೇ ಮುಕ್ತಾಯದ ವ್ಯಥೆ.
ಕವಿ ವಿಲಿಯಂ ಬ್ಲೇಕ್ ಸುಮಾರು 140 ವರ್ಷಗಳ ಹಿಂದೆ ಬರೆದ ದ ಸ್ಕೂಲ್ ಬಾಯ್ ಇಂದಿಗೂ ಬದಲಾಗದ ಶಾಲಾ ದಿನದ ಕುರಿತಾಗಿಯೇ ಹೇಳುತ್ತದೆ. ಬೇಸಿಗೆಯ ಸುಂದರ ಬೆಳಿಗ್ಗೆ ಎ¨ªೊಡನೆ ಕಹಳೆಯ ಸದ್ದು ಮಾಡುತ್ತ ಬೇಟೆಗೆಂದು ಹೋಗುತ್ತಿರುವವರೊಡನೆ ಜೊತೆಗೂಡುವ ಆಸೆ, ಸ್ಕೈಲಾರ್ಕ್ ಹಾಡಿಗೆ ದನಿಗೂಡಿಸುವಾಸೆ. ಆದರೆ, ಅದೆಲ್ಲವನ್ನು ಬಿಟ್ಟು ಶಾಲೆಯಲ್ಲಿ ಪಂಜರದ ಪಕ್ಷಿಯಂತೆ ಬಂಧಿಯಾಗಿ ಆಕಳಿಸುತ್ತ ಹೊತ್ತೇ ಹೋಗದೆ ಕಳೆಯುವ ದುರ್ಭರ ದಿನಗಳ ವಿವರಣೆಯಿದೆ. ಕಲಿಕೆಯ ಕುಲುಮೆಯ ಶಾಲಾದಿನಗಳು ಈಗಲೂ ಹಾಗೇ ಇವೆ.
ನನ್ನ ಬಾಲ್ಯದಲ್ಲಿದ್ದಂತೆ ಹೊಡೆದು, ಬಡಿದು, ಹೆದರಿಸಿ ಶಾಲೆಗೆ ದಾಟಿಸುವ ದಿನಗಳಿಲ್ಲದಿದ್ದರೂ ಸಂತಸದಿಂದ ಶಾಲೆಗೆ ಹೊರಟ ಮಕ್ಕಳ ಸಂಖ್ಯೆ ಕಡಿಮೆಯೇ. ಆದರೆ ಪ್ರೌಢಶಾಲೆಗೆ ಕಾಲಿರಿಸುವಷ್ಟರಲ್ಲಿ ಬೆಳೆಯುವ ಸ್ನೇಹವೃಂದ, ತರಗತಿಯ ತಮಾಷೆ, ಹದಿಹರೆಯದ ತವಕ-ತಲ್ಲಣಗಳು, ಶಾಲಾ ದಿನಗಳನ್ನು ಹಿತವಾಗಿಸುತ್ತ ಸಾಗುತ್ತವೆ. ಪಠ್ಯ ಬೋಧನೆಯ ನಡುವಿನ ಗೇಮ್ಸ್, ಡ್ರಾಯಿಂಗ್, ಡ್ಯಾನ್ಸ್, ಲೈಬ್ರರಿ ಮುಂತಾದ ಪಠ್ಯೇತರ ಚಟುವಟಿಕೆಗಳ ಅವಧಿಗಳು ಆಕರ್ಷಣೆಯನ್ನು ಹೆಚ್ಚಿಸುತ್ತವೆ.
– ಗೋರೂರು ಶಿವೇಶ್