Advertisement

ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಶಿಕ್ಷಣಾಧಿಕಾರಿಗೆ ಬೀಳ್ಕೊಡುಗೆ

02:17 PM Feb 17, 2018 | |

ಮಹಾನಗರ : ಮಂಗಳೂರು ದಕ್ಷಿಣ ವಲಯ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ, ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್‌ ಎಂ.ಪಿ. ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಬಿ.ಇ.ಓ. ಅವರಿಗೆ ಸ್ವಾಗತ ಕಾರ್ಯಕ್ರಮ ಬುಧವಾರ ಚಿನ್ಮಯ ಪ್ರೌಢಶಾಲೆಯಲ್ಲಿ ನಡೆಯಿತು.

Advertisement

ಮುಖ್ಯ ಅತಿಥಿಯಾಗಿ ಆಗಮಿಸಿದ ಆಹಾರ ಸಚಿವ ಯು.ಟಿ. ಖಾದರ್‌ ಮಾತನಾಡಿ, ಒಬ್ಬ ವ್ಯಕ್ತಿ ಕರ್ತವ್ಯ ನಿಷ್ಠೆ ಹಾಗೂ ದಕ್ಷತೆಯಿಂದ ಸೇವೆ ಸಲ್ಲಿಸಿದಾಗ ಸಮಾಜವೇ ಅವರನ್ನು ಗುರುತಿಸಿ, ಗೌರವಿಸುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಣ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ ಜ್ಞಾನೇಶ್‌ ಅವರು ವರ್ಗಾವಣೆಗೊಂಡರೂ ವಿವಿಧ ಸಂಘಗಳು ಗೌರವಿಸುತ್ತಿರುವುದು ಅಭಿನಂದನೀಯ ಎಂದು ಅಭಿಪ್ರಾಯಪಟ್ಟರು.

ತಾಲೂಕು ಪಂಚಾಯತ್‌ ಅಧ್ಯಕ್ಷ ಮಹಮದ್‌ ಮೋನು ಮಾತನಾಡಿ, ಶಾಲಾ ಜೀವನದಲ್ಲೇ ಮಕ್ಕಳಲ್ಲಿ ಶಿಸ್ತು ರೂಪಿಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಹಿರಿದು. ವಿದ್ಯಾರ್ಥಿಗಳಿಗೂ ಆಟದ ಜತೆ ಪಾಠ ಮಾಡುವ ದೈಹಿಕ ಶಿಕ್ಷಣ ಶಿಕ್ಷಕರೆಂದರೆ ತುಂಬಾ ಅಚ್ಚುಮೆಚ್ಚು ಎಂದು ಹೇಳಿದರು. ನೂತನ ಬಿ.ಇ.ಒ. ಲೋಕೇಶ್‌ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗುರುನಾಥ ಬಿ.ಬಾಗೇವಾಡಿ, ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ಮತ್ತು ಶೇಖರ್‌ ಕಡ್ತಲ ಮಾತನಾಡಿದರು.

ತರಬೇತುದಾರರಾದ ಶಾಂತಾರಾಮ ರೈ, ಸಿದ್ದರೂಢ ಪೂಜಾರಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಲೋಕನಾಥ ರೈ, ಸಂಘದ ಪದಾಧಿಕಾರಿಗಳಾದ ಲಿಲ್ಲಿ ಪಾಯಸ್‌, ಲ್ಯಾನ್ಸಿ ಸಿಕ್ವೇರ, ಡೋಲ್ಫಿ ಸಿಕ್ವೇರ, ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ಉಪಸ್ಥಿತರಿದ್ದರು.  ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ತ್ಯಾಗಂ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರಾಜೀವ್‌ ನಾಯಕ್‌ ವರದಿ ವಾಚಿಸಿದರು. ವಿಷ್ಣು ಹೆಬ್ಟಾರ್‌ ವಂದಿಸಿದರು. ಮೋಹನ್‌ ಶಿರ್ಲಾಲ್‌ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next