Advertisement

ಬಿಷಪ್‌ ಅಲೋಶಿಯಸ್‌ ಅವರಿಗೆ ಬೀಳ್ಕೊಡುಗೆ

12:49 PM Sep 10, 2018 | Team Udayavani |

ಮಹಾನಗರ: ಕೊಡಿಯಾಲ ಬೈಲ್‌ ಬಿಷಪ್ಸ್‌ ಹೌಸ್‌ನ ಶಾಲೋಮ್‌ ಪ್ರೇಯರ್‌ ಮಿನಿಸ್ಟ್ರಿ ಸಂಸ್ಥೆಯ 3ನೇ ವಾರ್ಷಿಕ ದಿನಾಚರಣೆ ಹಾಗ ಸಂಸ್ಥೆಯ ವತಿಯಿಂದ ನಿರ್ಗಮನ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರಿಗೆ ಬೀಳ್ಕೊಡುಗೆ ಹಾಗೂ ನಿಯೋಜಿತ ಬಿಷಪ್‌ ರೆ| ಡಾ| ಪೀಟರ್‌ ಪಾವ್ಲ್ ಸಲ್ದಾನ್ಹಾ ಅವರಿಗೆ ಸ್ವಾಗತ ಕೋರುವ ಸಮಾರಂಭ ರವಿವಾರ ಜರಗಿತು.

Advertisement

12 ವರ್ಷಗಳಿಂದ ಧರ್ಮ ಪ್ರಾಂತದ ಪ್ರಧಾನ ಗುರುವಾಗಿ ಕಾರ್ಯನಿರ್ವಹಿಸುತ್ತಿರುವ ಮೊ| ಡೆನಿಸ್‌ ಮೊರಾಸ್‌ ಪ್ರಭು ಅವರೂ ಸದ್ಯದಲ್ಲಿಯೇ ನಿವೃತ್ತರಾಗಲಿದ್ದು, ಅವರನ್ನು ಕೂಡ ಈ ಸಂದರ್ಭ ಸಮ್ಮಾನಿಸಲಾಯಿತು. ಬಿಷಪ್ಸ್‌ ಹೌಸ್‌ ಚಾಪೆಲ್‌ನಲ್ಲಿ ಈ ಕಾರ್ಯಕ್ರಮ ನಡೆಯಿತು.

ರೋಸ ಮಿಸ್ತಿಕಾ ಕಾನ್ವೆಂಟ್‌ನ ಸುಪೀರಿಯರ್‌ ಸಿ| ಜುಲಿಯಾನಾ ಅವರು ಬಿಷಪ್‌ ಅಲೋಶಿಯಸ್‌ ಅವರ ಸಮ್ಮಾನ ಪತ್ರವನ್ನು ಹಾಗೂ ಚೇತನ್‌ ಮೆಂಡೊನ್ಸಾ ಅವರು ಮೊ| ಡೆನಿಸ್‌ ಮೊರಾಸ್‌ ಅವರು ಸಮ್ಮಾನ ಪತ್ರವನ್ನು ವಾಚಿಸಿದರು.

ಪ್ರೇರಣೆ ಲಭಿಸಲಿ
ಸಮ್ಮಾನಕ್ಕೆ ಪ್ರತಿಕ್ರಿಯಿಸಿದ ಮೊ| ಡೆನಿಸ್‌ ಮೊರಾಸ್‌ ಪ್ರಭು ಅವರು ಶಾಲೋಮ್‌ ಪ್ರೇಯರ್‌ ಮಿನಿಸ್ಟ್ರಿಯ ಚಟುವಟಿಕೆಗಳಿಂದ ಜನರಲ್ಲಿ ಪ್ರಾರ್ಥನೆಯ ಬಗೆಗಿನ ಒಲವು ಷಹೆಚ್ಚಾಗುವಂತೆ ಪ್ರೇರಣೆ ಲಭಿಸಲಿ ಎಂದು ಹಾರೈಸಿದರು. ಮನೆಗಳಲ್ಲಿ ದೈನಂದಿನ ದೇವರ ಪ್ರಾರ್ಥನೆ ಕುರಿತಂತೆ ಜನರಲ್ಲಿ ಆಸಕ್ತಿ ಹೆಚ್ಚಬೇಕೆಂದು ನಿಯೋಜಿತ ಬಿಷಪ್‌ ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನಾ ಹೇಳಿದರು.

ಧರ್ಮ ಪ್ರಾಂತದ ಪಾಲನಾ ಪರಿಷತ್‌ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ ಅವರು ಸ್ವಾಗತಿಸಿ ಪ್ರಸ್ತಾವನೆಗೈದರು. ವಂ| ಮನೋಹರ್‌, ವಂ| ಜಾರ್ಜ್‌ ಕರಮವಲ್ಲಿ, ಸಿ| ಲಿಲ್ಲಿಸ್‌, ಸಿ| ಲೆತೀಶಿಯಾ, ವಂ| ಅನಿಲ್‌ ಆಲ್ಪ್ರೆ ಡ್‌ ಅವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಬಿಷಪ್‌ ಅಲೋಶಿಯಸ್‌ ಪಾವ್ಲ್  ಡಿ’ಸೋಜಾ ನೇತೃತ್ವದಲ್ಲಿ ಬಲಿಪೂಜೆ ನಡೆಯಿತು. ರೆ| ಡಾ| ಪೀಟರ್‌ ಪಾವ್ಲ್ ಸಲ್ದಾನ್ಹಾ ಅವರು ಪ್ರವಚನ ನೀಡಿದರು. 

Advertisement

ದೇವರಲ್ಲಿ ವಿಶ್ವಾಸವಿರಿಸಿ
ದೇವರಲ್ಲಿ ಅಚಲ ವಿಶ್ವಾಸವಿರಿಸಿ ಪ್ರಾರ್ಥಿಸುವುದರಿಂದ ಭಕ್ತರ ಬದುಕಿನಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ. ಶಾಲೋಮ್‌ ಪ್ರೇಯರ್‌ ಮಿನಿಸ್ಟ್ರಿ ಈ ದಿಶೆಯಯಲ್ಲಿ ಜನರಲ್ಲಿ ಪ್ರಾರ್ಥನೆಯ ಮಹತ್ವವನ್ನು ತಿಳಿಸುವಲ್ಲಿ ಮಾದರಿಯಾಗಿ ಕಾರ್ಯ ನಿರ್ವ ಹಿಸುತ್ತಿದೆ ಎಂದು ಬಿಷಪ್‌ ಅಲೋಶಿಯಸ್‌ ಪಾವ್ಲ್ 
ಡಿ’ಸೋಜಾ ಅವರು ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next