Advertisement
.ಫ್ಯಾನ್‌ನ ಕಾರಣದಿಂದ, ಕೋಣೆಯಲ್ಲಿ ಗಾಳಿ ಸದಾ ಚಲನೆಯಲ್ಲಿರುತ್ತದೆ. ಆಗ, ಗಾಳಿಯಲ್ಲಿನ ಧೂಳು, ಮೂಗಿನೊಳಗೆ ಸೇರುವ ಸಂಭವ ಹೆಚ್ಚಿದ್ದು, ಶ್ವಾಸಕೋಶದ ಅಲರ್ಜಿಯುಂಟಾಗಬಹುದು..ತಜ್ಞರು ಹೇಳುವ ಪ್ರಕಾರ, ಅಸ್ತಮಾ, ಶೀತ-ಜ್ವರ, ಧೂಳಿನ ಅಲರ್ಜಿ ಉಳ್ಳವರಿಗೆ ಫ್ಯಾನ್‌ನ ಕೃತಕ ಗಾಳಿ ಒಳ್ಳೆಯದಲ್ಲ.
.ಫ್ಯಾನ್ ಗಾಳಿಯಿಂದ ಏಳುವ ಧೂಳಿನ ಕಣಗಳು ಚರ್ಮಕ್ಕೆ ಹಾನಿ ಮಾಡುತ್ತವೆ.
.ಕೃತಕ ಗಾಳಿಯಿಂದ ಶುಷ್ಕ ಚರ್ಮ ಮತ್ತಷ್ಟು ಶುಷ್ಕವಾಗಬಹುದು.
.ಅರೆಗಣ್ಣು ತೆರೆದು ಮಲಗುವವರ ಕಣ್ಣಿನ ದ್ರವವನ್ನು ಫ್ಯಾನ್ ಗಾಳಿಯು ಒಣಗಿಸುತ್ತದೆ. ಇದರಿಂದ ಕಣ್ಣಿನ ಅಲರ್ಜಿಯೂ ಉಂಟಾಗಬಹುದು.
.ಬಾಯಿಯನ್ನು ಅರೆ ತೆರೆದು ಮಲಗಿದರೆ, ಗಾಳಿಯಲ್ಲಿನ ಸೂಕ್ಷ್ಮಾಣುಗಳು ಬಾಯಿ ಮೂಲಕ ದೇಹ ಸೇರುತ್ತವೆ.
.ಶೀತ ದೇಹದವರಿಗೆ ಕೃತಕ ಗಾಳಿ ಒಗ್ಗುವುದೇ ಇಲ್ಲ. ಯಾಕೆಂದರೆ, ಗಾಳಿಯಿಂದ ಮೂಗು ಕಟ್ಟಿ , ಉಸಿರಾಟಕ್ಕೆ ತೊಂದರೆ ಆಗುತ್ತದೆ. ಕೃತಕ ಗಾಳಿಯಿಂದಾಗಿ ಮೂಗಿನ ಮೇಲ್ಭಾಗವು ಒಣಗಿ, ಕಫದ ರೀತಿ ಲೋಳೆ ಉತ್ಪಾದನೆಯಾಗಿ ಉಸಿರಾಟಕ್ಕೆ ಅಡಚಣೆಯಾಗಬಹುದು.