ತಿ.ನರಸೀಪುರ: ಅಭಿಮಾನಿಗಳು ಸಸಿ ನೆಟ್ಟು ನೀರೆರೆದು ಡಾ.ರಾಜ್‌ಕುಮಾರ್ ಜಯಂತಿಯನ್ನು ಆಚರಣೆ ಮಾಡಬೇಕು ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಹುಲ್ಲಹಳ್ಳಿ ನಾಲಾ ರಸ್ತೆಯಲ್ಲಿ ಶುಕ್ರವಾರ ಮೇರು ನಟ ಡಾ.ರಾಜ್‌ಕುಮಾರ್ ಜನುಮ ದಿನವನ್ನು ಸಸಿ ನೆಟ್ಟು ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಸಿರಿನಲ್ಲೇ ನಮ್ಮೆಲ್ಲರ ಉಸಿರಿದೆ ಎಂಬುದನ್ನು ಒತ್ತಿ ಹೇಳುತ್ತಿದ್ದ ಡಾ.ರಾಜ್ ಹಸಿರು ವನದ ಪ್ರಿಯರಾಗಿದ್ದ ಅವರಿಗೆ ಸಸಿ ನೆಟ್ಟು ನೀರೆರೆದು ನಮಿಸೋಣ ಎಂದರು.
ನಶಿಸುತ್ತಿರುವ ಅರಣ್ಯ ಪ್ರದೇಶವನ್ನು ಮರಳಿ ಪಡೆಯಲು ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು, ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕಿದೆ. ಅರಣ್ಯ ನಾಶದಿಂದ ಹವಾಮಾನ ವೈಪರೀತ್ಯವುಂಟಾಗಿ, ಕಾಲ ಕಾಲಕ್ಕೆ ಮಳೆಯೂ ಬಾರದ್ದರಿಂದ ತಾಪಮಾನ ಏರಿಕೆಯಾಗಿ ಎಲ್ಲರೂ ಬೇಯುತ್ತಿದ್ದೇವೆ. ಡಾ. ರಾಜ್‌ಕುಮಾರ್ ಅಭಿಮಾನಿಗಳು ಸೇರಿದಂತೆ ನಾವೆಲ್ಲರೂ ಕಳೆದು ಹೋಗಿರುವ ಅರಣ್ಯ ಸಂಪತ್ತನ್ನು ಮರಳಿ ಪಡೆಯಲು ಜಾಗೃತರಾಗೋಣ ಎಂದು ತಿಳಿಸಿದರು.
ರಂಗಗೀತೆಗಳ ಗಾಯನ: ಪಟ್ಟಣದ ಎಂ.ಮರೀಗೌಡ ಸ್ಮಾರಕ ಭವನದಲ್ಲಿ ಡಾ. ರಾಜ್‌ಕುಮಾರ್ ಜಯಂತಿಯ ವೇದಿಕೆಯಲ್ಲಿ ಕೆಪಿಸಿಸಿ ಎಸ್ಟಿಗಳ ಉಪಾಧ್ಯಕ್ಷ, ರಂಗಭೂಮಿ ಕಲಾವಿದ ಹೊನ್ನನಾಯಕರ ನೇತೃತ್ವದಲ್ಲಿ ರಂಗ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಜಿಪಂ ಸದಸ್ಯ ಎಂ. ಅಶ್ವಿನ್‌ಕುಮಾರ್, ತಾಪಂ ಸದಸ್ಯ ಎಂ.ರಮೇಶ್, ಪುರಸಭಾ ಸದಸ್ಯ ಟಿ.ಜಿ. ಪುಟ್ಟಸ್ವಾಮಿ, ಕಸಾಪ ಯೋಜನಾ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ. ಶಿವಶಂಕರಮೂರ್ತಿ, ಉಪನ್ಯಾಸಕ ಮೂಗೂರು ಕುಮಾರ ಸ್ವಾಮಿ, ಕನ್ನಡಸೇನೆಯ ಅಧ್ಯಕ್ಷ ಅಗಸ್ತೇಗೌಡ, ಕನಕಶಶಿ,
ಕಬ್ಬು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಕಿರಗಸೂರು ಶಂಕರ್, ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಕುಮಾರ್, ವೀರಶೈವ ಮಹಾಸಭಾ ಯುವ ಘಟಕ ಅಧ್ಯಕ್ಷ ಆರ್. ಶಿವಕುಮಾರ್, ಮುಖಂಡರಾದ ಎಂ.ಕೆ.ಸಹದೇವ, ಆರ್. ಕಿಶೋರ್‌ಕುಮಾರ್, ಹೆಚ್.ಬಸವರಾಜು, ಎಸ್‌ಎಸ್‌ಕೆ ನವೀನ್, ಬಾದಾಮಿ ಮಂಜು, ಹಾಲಿನ ನಾಗರಾಜು, ಶಿವುಮದನ, ಕೆ.ಎಂ. ಮಹದೇವಯ್ಯ, ರಾಜೇಶ್, ಬಿ. ಶಶಿಧರ್, ಶಿವಮಲ್ಲಪ್ಪ ಇತರರು ಇದ್ದರು.