ಲೇಡೀಸ್ ಈಗ ಹಬ್ಬ ಹರಿದಿನಗಳಲ್ಲಿ ಮಾತ್ರ ಯತ್ನಿಕ್ ವೇರ್ ಧರಿಸುವುದು ಸಾಮಾನ್ಯ. ಅದು ಬಿಟ್ಟರೆ ಅವರಿಗೆ ವೆಸ್ಟರ್ನ್ ಟೌಟ್‌ಫಿಟ್‌ಗಳೇ ತುಂಬಾ ಇಷ್ಟ. ಹಾಗೇ ಜೀನ್ಸ್ , ಮಿಡೀಸ್, ಮಿನೀಸ್ ಧರಿಸುವಾಗ ಅದಕ್ಕೆ ಸೂಟ್ ಆಗುವ ಬೆಲ್ಟ್ನ ಆಯ್ಕೆ ತುಂಬ ಮುಖ್ಯವಾಗುತ್ತದೆ. ಡ್ರೆಸ್ ಚೆನ್ನಾಗಿದ್ದು ಅದರ ಬೆಲ್ಟ್ ಚೆನ್ನಾಗಿಲ್ಲ ಅಂದ್ರೆ ಅದರ ಲುಕ್ ಹಾಳಾಗುತ್ತದೆ. ಯಾವ ಡ್ರೆಸ್‌ಗೆ ಯಾವ ತರಹದ ಬೆಲ್ಟ್ ಧರಿಸಬೇಕು ಎನ್ನುವುದು ತಿಳಿದುಕೊಂಡಿರುವುದು ಅತೀ ಮುಖ್ಯ.
ಕಲರ್‌ಫುಲ್ ಕಾಟನ್ ಬೆಲ್ಟ್, ಜೂಟ್ ಬೆಲ್ಟ್, ಲೆದರ್ ಬೆಲ್ಟ್, ಪ್ಲಾಸ್ಟಿಕ್ ಬೆಲ್ಟ್, ಹೂ ಬಳ್ಳಿಗಳ ಬೆಲ್ಟ್ ಇದು ಫ್ಯಾಷನ್ ಹುಡುಗಿಯರನ್ನು ಹಾವಿನಂತೆ ಸುತ್ತುಕೊಂಡಿವೆ. ಕಾಂಟ್ರಾಸ್ಟ್ ಶೇಡಿನ ಬೆಲ್ಟ್ ಜೀನ್ಸ್ ಬೆಡಗಿಯರ ಅವತಾರವನ್ನೇ ಬದಲಿಸಿದೆ. ಇದೀಗ ಬೆಲ್ಟ್ ಗಳಲ್ಲಿ ಹಲವು ಬಗೆ ಇವೆ. ಇವು ಇಡೀ ಡ್ರೆಸ್‌ನ ಲುಕ್ಕನ್ನೇ ಬದಲಿಸುತ್ತಿದೆ. ಇನ್ನು ಹೊಸ ಲುಕ್ ನೀಡೋ ಲೇಡೀಸ್ ಫ್ಯಾಷನ್ ಬೆಲ್ಟ್‌ಗಳು ಟೀನೇಜ್ ಹುಡುಗಿಯರ ಬಳಕುವ ಸೊಂಟವನ್ನು ಹಿಡಿದಿಟ್ಟಿವೆ. ವೈವಿಧ್ಯ ವಿನ್ಯಾಸ, ಬಣ್ಣಗಳಲ್ಲಿ ಸಿಗುವ ಬೆಲ್ಟ್‌ಗಳು ಮಾಲ್‌ಗಳಿಂದ ಹಿಡಿದು ಸ್ಟ್ರೀಟ್ ಷ್ಯಾಷನ್ ತನಕವು ತನ್ನ ಸ್ಥಾನವನ್ನು ಆಕ್ರಮಿಸಿಕೊಂಡಿದೆ.
ಹಳೆ ಕಾಲದ ವೈಟ್ ಬೆಲ್ಟ್ , ಬಕ್ಕಲ್ ಬೆಲ್ಟ್‌ಗಳು ಹೊಸ ಟಚ್ ಪಡೆದು ಮತ್ತೆ ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿದೆ. ಬೆಲ್ಟ್‌ಗಳನ್ನು ಲೂಸ್ ಆಗಿರುವ ಪ್ಯಾಂಟುಗಳನ್ನು ಹಿಡಿದಿಟ್ಟದುಕೊಳ್ಳಲು ಬಳಸುತ್ತಿದ್ದ ಜನರು ಇಂದು ಸ್ಟೈಲ್‌ಗಾಗಿ ಬಳಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಸ್ಟೈಲಿಷ್ ಬೆಲ್ಟ್ ಗಳು ತನ್ನ ಸ್ಥಾನವನ್ನು ಅಲಂಕರಿಸಿವೆ. ಗೌನ್‌ಗಳು, ಮಿನೀಸ್, ಸ್ಕರ್ಟ್, ಜೀನ್ಸ್, ಬಿಲೋವೆಸ್ಟ್ ಜೀನ್ಸ್. ಫಾರ್ಮಲ್ಸ್, ಫ್ರಾಕ್‌ಗಳನ್ನು ಸುತ್ತುವರಿದು ಫ್ಯಾಷನ್ ಸ್ಟೇಟೆ¾ಂಟ್ ಹುಟ್ಟು ಹಾಕಿವೆ.
ಬಿಗ್ ಬೆಲ್ಟ್‌ಗಳು ಟೀನೇಜ್ ಹುಡುಗಿಯರ ಹಾಟ್ ಡ್ರೆಸ್‌ನೊಳಗೆ ಹೊಕ್ಕು ಗ್ಲಾಮರಸ್ ಎನಿಸಿಕೊಂಡಿದೆ. ಬಿಗ್ ಬೆಲ್ಟ್‌ಗಳು ಫ್ರಾಕ್ ಹಾಗೂ ಗೌನ್‌ಗಳ ಲುಕ್ಕನ್ನು ಇನ್ನಷ್ಟು ಹೆಚ್ಚಿಸಿವೆ. ಸೊಂಟವನ್ನು ಫ್ಲಾಟ್ ಆಗಿ ಬಿಂಬಿಸುತ್ತವೆ. ಮೊದಲೆಲ್ಲಾ ಬೆಲ್ಟ್‌ಗಳಲ್ಲಿ ಬೆರಳೆಣಿಕೆಯಷ್ಟೆ ಕಲರ್‌ಗಳಿದ್ದವು. ಆದರೆ, ಇದೀಗ ಪ್ಯಾಷನ್ ಲೋಕಕ್ಕೆ ಕಲರ್‌ಫುಲ್ ಬೆಲ್ಟ್ ಗಳು ಲಗ್ಗೆ ಇಟ್ಟಿವೆ. ನಿಮ್ಮ ಡ್ರೆಸ್ ಕಲರ್‌ಗೆ ತಕ್ಕಂತೆ ಕಲರ್ ಕಲರ್ ಬೆಲ್ಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹೀಗಾಗಿ, ಇದು ಫ್ಯಾಷನ್ ಹುಡುಗಿಯರ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ.
ಮಧ್ಯಮ, ದಪ್ಪ ಅಥವಾ ಸಣ್ಣ ಬೆಲ್ಟ್ನಿಂದ ನಿಮ್ಮ ಸೊಂಟದ ಭಾಗದ ಆಕರ್ಷಣೆ ಹಿಡಿದಿಡುತ್ತವೆ. ಅದರಲ್ಲೂ ಲೋಹ ಲೇಪನ ಅಥವಾ ಥೆÅಡ್‌ಗಳಿದ್ದರೆ ಉತ್ತಮ. ಬೆಲ್ಟಿನ ವಿಶೇಷತೆ ಎಂದರೆ ನಿಮ್ಮ ಸಿಂಪಲ್ ಬಟ್ಟೆಗಳಿಗೂ ಹೊಸ ಲುಕ್ ನೀಡಬಹುದು. ಯಾವುದೇ ಬಗೆಯ ಬೆಲ್ಟ್ ಧರಿಸಿ ನೀವು ಆಕರ್ಷಕವಾಗಿ ಕಾಣಬೇಕು ಅಂದರೆ ನಿಮ್ಮ ಕೂದಲಿನ ವಿನ್ಯಾಸ, ವಾಚ್, ಚಪ್ಪಲಿ ಕೂಡ ಬೆಲ್ಟ್ಗೆ ಹೊಂದುವಂತಿರಬೇಕು.
ಸುಲಭಾ ಆರ್. ಭಟ್