Advertisement

“ನಟಸಾರ್ವಭೌಮ’ಅಭಿಮಾನಿಯ ಲೀವ್​​​​ ಲೆಟರ್​ ವೈರಲ್!

10:32 AM Jan 30, 2019 | |

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ “ನಟಸಾರ್ವಭೌಮ’ ಚಿತ್ರ ಇದೇ ಫೆಬ್ರವರಿ 7ಕ್ಕೆ ಬಿಡುಗಡೆಯಾಗುತ್ತಿದ್ದು, ಸಿನಿಮಾವನ್ನು ಕಣ್ತೊಂಬಿಕೊಳ್ಳೊಕ್ಕೆ ಅವರ ಅಭಿಮಾನಿಗಳು ತುಂಬಾನೇ ಕಾತುರರಾಗಿದ್ದಾರೆ. ಈ ನಡುವೆ “ನಟಸಾರ್ವಭೌಮ’ ಚಿತ್ರವನ್ನು ನೋಡಲು ರಜಾ ಬೇಕು ಎಂದು ಅವರ ಅಭಿಮಾನಿಯೊಬ್ಬರು ಲೀವ್​ ಲೆಟರ್​ ಬರೆದಿದ್ದು, ಇದೀಗ ಫೋಟೋ ವೈರಲ್ ಆಗಿದೆ.

Advertisement

ಹೌದು, ಮೈಸೂರಿನ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಆಗಿರುವ ನಿಸರ್ಗ ಸಿನಿಮಾ ವೀಕ್ಷಿಸಲು ರಜೆ ನೀಡಬೇಕೆಂದು ಪತ್ರ ಬರೆದಿದ್ದಾರೆ. ಅಲ್ಲದೇ ಈ ಪತ್ರದ ಫೋಟೋವನ್ನು ಚಿತ್ರದ ನಿರ್ದೇಶಕ ಪವನ್ ಒಡೆಯರ್ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿ, “ಸಾಮಾಜಿಕ ಜಾಲತಾಣದಲ್ಲಿ ನೋಡಿದೆ. ನನಗೆ ನಗು ತಡೆಯಲು ಆಗುತ್ತಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

ಪತ್ರದಲ್ಲೇನಿದೆ?: “ನಟಸಾರ್ವಭೌಮ’ ಚಿತ್ರ ಫೆಬ್ರವರಿ 7ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರ ಕುಟುಂಬದ ಎಲ್ಲ ಸದಸ್ಯರು ಹಾಗೂ ಎಲ್ಲ ವಯಸ್ಸಿನವರು ನೋಡುವಂತಹ ಒಳ್ಳೆಯ ಚಿತ್ರವಾಗಿದ್ದು ಹಾಗೂ ಚಿತ್ರದ ನಾಯಕ ನಟ ನಮ್ಮ ರಾಜಕುಮಾರ್ ಅವರ ಹೆಮ್ಮೆಯ ತೃತೀಯ ಸುಪುತ್ರನಾದ ಪುನೀತ್ ರಾಜಕುಮಾರ್ ಅವರಾಗಿದ್ದು, ಅಲ್ಲದೇ ಹೀಗಿನ ಮಕ್ಕಳ ಅಚ್ಚುಮೆಚ್ಚಿನ ನಟರಾಗಿದ್ದಾರೆ. ಹಾಗಾಗಿ ನಾನು “ನಟಸಾರ್ವಭೌಮ’ ಚಿತ್ರವನ್ನು ನೋಡಲು ಫೆ.8ರಂದು ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಿರುವುದರಿಂದ ನಾನು ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀವು ರಜೆ ನೀಡಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ ಎಂದು ಬರೆದಿದ್ದಾರೆ.

ಇನ್ನು ಚಿತ್ರಕ್ಕೆ ಪವನ್ ಒಡೆಯರ್ ಆ್ಯಕ್ಷನ್ ಕಟ್ ಹೇಳಿದ್ದು, ರಾಕ್‍ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ. ತಾರಾಗಣದಲ್ಲಿ ಪುನೀತ್ ರಾಜ್‍ಕುಮಾರ್ ಜೊತೆ ಡಿಂಪಲ್ ಬೆಡಗಿ ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸಾಧುಕೋಕಿಲಾ, ಬಿ.ಸರೋಜಾ ದೇವಿ, ಚಿಕ್ಕಣ್ಣ, ರವಿಶಂಕರ್ ನಟಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next