Advertisement

ಖ್ಯಾತ ಹಿಂದೂಸ್ತಾನಿ ಗಾಯಕ, ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾಖಾನ್ ವಿಧಿವಶ

08:32 PM Jan 17, 2021 | Team Udayavani |

ಮುಂಬೈ: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಹಿಂದೂಸ್ತಾನಿ ಗಾಯಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉಸ್ತಾದ್ ಗುಲಾಂ ಮುಸ್ತಫಾಖಾನ್ (89)  ಇಂದು ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

Advertisement

1931 ರಲ್ಲಿ ಉತ್ತರಪ್ರದೇಶದ ಬದಾಯುನಲ್ಲಿ ಉಸ್ತಾದ್ ಗುಲಾಂ ಮುಸ್ತಫಾಖಾನ್ ಜನಿಸಿದ್ದರು. ತಂದೆ ಉಸ್ತಾದ್ ವಾರಿನ್ ಹುಸೇನ್ ಖಾನ್ ಹಾಗೂ ತಾಯಿ ಸಬ್ರಿ ಬೇಗಂ ಕೂಡ ಸಂಗೀತಗಾರರಾಗಿದ್ದರು. ಮುಸ್ತಫಾಖಾನ್ ಹಿಂದೂಸ್ಥಾನಿ ಸಂಗೀತದಲ್ಲಿ ಪ್ರಾಥಮಿಕ ಶಿಕ್ಷಣವನ್ನು ತಂದೆಯವರಲ್ಲಿ ಕಲಿತರು.

ಮುಸ್ತಫಾಖಾನ್  ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಮಹತ್ತರ ಸಾಧನೆಗಾಗಿ 1991ರಲ್ಲಿ ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು. ಹಾಗೆಯೇ 2006ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೂಡ ಒಲಿದು ಬಂತು. 2018ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ:  ವಿದೇಶದಲ್ಲಿ ಬಸವಣ್ಣನಿಂದ ಗೌರವ, ಕಾಲ್ಪನಿಕ ರಾಮನಿಂದಲ್ಲ: ಶ್ರೀ ನಿಜಗುಣಾನಂದ ಸ್ವಾಮೀಜಿ

ಉಸ್ತಾದ್ ಗುಲಾಂ ಮುಸ್ತಫಾಖಾನ್ ಅವರ ನಿಧನಕ್ಕೆ ಖ್ಯಾತ ಗಾಯಕಿ ಲತಾ ಮಂಗೇಶ್ವರ್, ಪ್ರಧಾನಿ ಮೋದಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಉಸ್ತಾದ್ ಗುಲಾಂ ಮುಸ್ತಫಾಖಾನ್ ಅವರ ನಿಧನವು ನಮ್ಮ ಸಾಂಸ್ಕೃತಿಕ ಜಗತ್ತನ್ನು ಬಡವಾಗಿಸಿದೆ. ಸಂಗೀತ ಕ್ಷೇತ್ರದಲ್ಲಿದ್ದ ಅವರ ಸೃಜನಶೀಲತೆಯ ಹಲವು ತಲೆಮಾರುಗಳನ್ನು ಮಂತ್ರಮುಗ್ಧರನ್ನಾಗಿಸಿತ್ತು. ಅವರೊಂದಿಗೆ ನಡೆಸಿದ ಸಂವಹನ ಇನ್ನೂ ಕೂಡ ನನ್ನ ನೆನಪಿನಲ್ಲಿವೆ. ಅವರ ಅಗಲಿಕೆಗೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.

 

ಇದನ್ನೂ ಓದಿ:  ಬೆಳಗಾವಿ : ಬಿಜೆಪಿ ಚಾಣಕ್ಯ ಅಮಿತ್ ಶಾಗೆ ಬೆಳ್ಳಿ ಗದೆ ನೀಡಿ, ರುದ್ರಾಕ್ಷಿ ಹಾರ ಹಾಕಿ ಸ್ವಾಗತ

Advertisement

Udayavani is now on Telegram. Click here to join our channel and stay updated with the latest news.

Next