Advertisement

“ಕುಟುಂಬ ಯಕ್ಷಗಾನ’ಅಗತ್ಯ: ಪಲಿಮಾರು ಸ್ವಾಮೀಜಿ

02:37 AM May 27, 2019 | Team Udayavani |

ಉಡುಪಿ: ಕುಟುಂಬದೊಳಗೆ ಯಕ್ಷಗಾನ ಕಲೆಯು ಹರಿದು ಬರುವ “ಕುಟುಂಬ ಯಕ್ಷಗಾನ’ವು ಈ ಕಲೆಯ ಉಳಿವು-ಬೆಳವಣಿಗೆಗೆ ಅಗತ್ಯ ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.

Advertisement

ಪರ್ಯಾಯ ಶ್ರೀ ಪಲಿಮಾರು ಮಠ, ಶ್ರೀಕೃಷ್ಣ ಮಠಗಳ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ, ಕೋಟೇಶ್ವರ ಸಂಯಮಂ ಸಹಯೋಗದಲ್ಲಿ ರವಿವಾರ ರಾಜಾಂಗಣದಲ್ಲಿ ಆಯೋಜನೆಗೊಂಡಿದ್ದ ಹಿರಿಯ ಯಕ್ಷಗಾನ, ತಾಳಮದ್ದಲೆ ಕಲಾವಿದ ಮಲ್ಪೆ ವಾಸುದೇವ ಸಾಮಗ ಅವರ ಸಪ್ತತಿ ಸಮಾರೋಪ ಸಮಾರಂಭದಲ್ಲಿ ಅಭಿನಂದನ ಗ್ರಂಥ “ಸಮಗಾಥೆ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ| ಟಿ. ಶಾಮ ಭಟ್‌ ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಕಲಾವಿದರಲ್ಲಿ ಮಲ್ಪೆ ವಾಸುದೇವ ಸಾಮಗರು ಒಬ್ಬರು ಎಂದರು. ಹಿರಿಯ ಕಲಾವಿದ ಪ್ರೊ| ಎಂ.ಎ. ಹೆಗಡೆ ಮಾತನಾಡಿ, ಮಲ್ಪೆ ವಾಸುದೇವ ಸಾಮಗರ ಜೀವನದ ಕುರಿತು ಸಾಕ್ಷ್ಯಚಿತ್ರ ನಿರ್ಮಾಣವಾಗಬೇಕು ಎಂದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಯಕ್ಷಗಾನ ಕಲಾ ಮಂಡಳಿಗಳು ಮತ್ತು ನೀಲಾವರ ಗೋಶಾಲೆಗೆ ನಿಧಿ ಸಮರ್ಪಣೆಯೊಂದಿಗೆ ಗೌರವಿಸಲಾಯಿತು.
ವಾಸುದೇವ ಸಾಮಗರ ಮಡದಿ ಮೀರಾ ಸಾಮಗ, ಎಚ್‌. ಶ್ರೀಧರ ಹಂದೆ ಕೋಟ, ಪ್ರದೀಪ ಕುಮಾರ ಕಲ್ಕೂರ ಉಪಸ್ಥಿತರಿದ್ದರು. ಕೆ. ಗಣೇಶ್‌ ರಾವ್‌ ಸ್ವಾಗತಿಸಿ, ಪ್ರದೀಪ ಸಾಮಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರಳಿ ಕಡೇಕಾರ್‌ ಕಾರ್ಯಕ್ರಮ ನಿರ್ವಹಿಸಿದರು.

ರಾಜ್ಯ ಕಲೆಯಾಗಿ ಯಕ್ಷಗಾನ
ಸಪ್ತತಿ ಸಮಾರಂಭದಲ್ಲಿ ಅಭಿನಂದನೆ, ಸಮ್ಮಾನಕ್ಕೆ ಉತ್ತರಿಸಿ ಮಾತನಾಡಿದ ವಾಸುದೇವ ಸಾಮಗರು, ಯಕ್ಷಗಾನವನ್ನು ರಾಜ್ಯದ ಕಲೆಯಾಗಿ ಗುರುತಿಸಬೇಕಿದೆ. ಯಕ್ಷಗಾನ ವಿದ್ವಾಂಸರು, ಕಲಾವಿದರು, ವಿಮರ್ಶಕರು ಅಗತ್ಯ ಬೆಂಬಲ ಸೂಚಿಸಿದಾಗ ಮಾತ್ರ ಆ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಸಾಧ್ಯ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next