ನಾಗ್ಪುರ:ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಲ್ಲಿ ಕೌಟುಂಬಿಕ ಮೌಲ್ಯಗಳನ್ನು ರಕ್ಷಿಸುವತ್ತ ಒಲವು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಭಾರತವು ಈ ನಿಟ್ಟಿನಲ್ಲಿ ವಿಶೇಷ ಕೊಡುಗೆ ನೀಡಲು ಸಾಧ್ಯವಿದೆ ಎಂದು ಆರ್ಎಸ್ಎಸ್ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಆರ್ಎಸ್ಎಸ್ ಜತೆಗೆ ಗುರುತಿಸಿಕೊಂಡಿರುವ ಸಂಘಟನೆ, “ವಿಶ್ವಮಾಂಗಲ್ಯ ಸಭಾ’ದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನ ಪ್ರತಿ ರಾಷ್ಟ್ರ ಮತ್ತು ಸಂಘಟನೆಯು ಈಗ ತಾಯ್ತನ ರಕ್ಷಣೆಯ ಬಗ್ಗೆ ಮಾತನಾಡುತ್ತಿವೆ. ಇದರ ಜತೆಗೆ ಹಲವು ರಾಷ್ಟ್ರಗಳಲ್ಲಿನ ಪಕ್ಷಗಳು ಕೌಟುಂಬಿಕ ಮೌಲ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮಾತನಾಡುತ್ತಿವೆ. ಭಾರತದಲ್ಲಿ ಈ ವ್ಯವಸ್ಥೆಯೇ ಪ್ರಧಾನವಾಗಿದೆ.
ಹೀಗಾಗಿ, ಜಗತ್ತಿಗೆ ನಾವು ಈ ಕ್ಷೇತ್ರದಲ್ಲಿ ಅನುಪಮ ಕೊಡುಗೆ ನೀಡಲಿದೆ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಜಗತ್ತಿಗೆ ನಾವು ಈ ಕೊಡುಗೆ ನೀಡಬೇಕು ಎಂದಾದರೆ, ನಮ್ಮ ದೇಶದಲ್ಲಿ ಅ ವ್ಯವಸ್ಥೆ ಸುಗಮವಾಗಿ ಇರಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.