Advertisement
ಹೌದು. ಪ್ರತಿವರ್ಷ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆಯಿಂದ ಸಂತಾನೋತ್ಪತ್ತಿ ಹಾಗೂ ಮಗುವಿನ ಆರೋಗ್ಯಕಾರ್ಯಕ್ರಮದಡಿ ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆಯಿಂದ ಸಮಗ್ರ ಶಿಶುಅಭಿವೃದ್ಧಿ ಯೋಜನೆಯಡಿ ಪ್ರತ್ಯೇಕ ಸಮೀಕ್ಷೆನಡೆಸಲಾಗುತ್ತಿತ್ತು. ಈ ಬಾರಿ ಎರಡೂಇಲಾಖೆಗಳು ಒಟ್ಟಿಗೇ ಸಮೀಕ್ಷೆ ನಡೆಸುತ್ತಿವೆ. ಮಾಹಿತಿಗೆ ಕುಟುಂಬಗಳ ನಿರಾಕರಣೆ: ಕಳೆದತಿಂಗಳು, ಪಡಿತರ ಚೀಟಿ ವಿಷಯದಲ್ಲಿ ಸಚಿವ ಉಮೇಶ ಕತ್ತಿ ಅವರ ಹೇಳಿಕೆ ಸಮೀಕ್ಷೆಗೆ ತೀವ್ರ ಅಡ್ಡಿಯಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.
Related Articles
Advertisement
ಏನಿದು ಕುಟುಂಬ ಸಮೀಕ್ಷೆ?: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಶಾ ಹಾಗೂಅಂಗನವಾಡಿ ಕಾರ್ಯಕರ್ತೆಯರ ಮೂಲಕಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಲಾಗುತ್ತಿದೆ.ಸಮೀಕ್ಷೆಗೆ ಮೂಲಭೂತ ಸಲಕರಣೆ ಇಲ್ಲದಕಾರಣ ಅಂಗನವಾಡಿ ಕಾರ್ಯಕರ್ತೆಯರು ಸದ್ಯಕ್ಕೆ ಇ-ಸಮೀಕ್ಷೆ ಮಾಡುತ್ತಿಲ್ಲ. ಅವರುತಮ್ಮ ನಿತ್ಯದ ಕೆಲಸ-ಕಾರ್ಯಗಳಲ್ಲಿಮಗ್ನರಾಗಿದ್ದಾರೆ. ಆದರೆ, ಆಶಾಗಳಿಗೆ ಸಮೀಕ್ಷೆ ಮಾಡಲೇಬೇಕೆಂದು ಒತ್ತಡಹಾಕುವ ಪ್ರಕ್ರಿಯೆ ನಡೆಯುತ್ತಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಸಮೀಕ್ಷೆ ನಡೆಸುವ ಆಶಾಗಳಿಗೆ ಕೆಲವುಪ್ರಶ್ನಾವಳಿ ನೀಡಿದ್ದು, ಪ್ರತಿಯೊಂದುಕುಟುಂಬಕ್ಕೂ ಭೇಟಿ ನೀಡಿ ಆ ಮಾಹಿತಿಯನ್ನುಆನ್‌ಲೈನ್ ಮೂಲಕ ದಾಖಲಿಸಬೇಕು. ಒಂದು ಕುಟುಂಬದಲ್ಲಿ ಎಷ್ಟು ಜನರಿದ್ದಾರೆ, ಹೆಣ್ಣು-ಗಂಡು ಮಕ್ಕಳು, ಖಾಸಗಿ-ಸರ್ಕಾರಿ ನೌಕರಿ, ಕೃಷಿ-ಖುಷ್ಕಿ ಭೂಮಿ, ಪಡಿತರ ಚೀಟಿಯ ವಿಧ, ಮೊಬೈಲ್, ಬೈಕ್, ಕಾರು, ಮನೆಯಲ್ಲಿ ಫ್ರೀಜ್ ಹೀಗೆ ವಿವಿಧ ಮಾಹಿತಿಕಲೆ ಹಾಕಲಾಗುತ್ತಿದೆ. ಈ ರೀತಿಯ ಮಾಹಿತಿಪಡೆಯಲು ಕುಟುಂಬಗಳ ಬಳಿ ಹೋದಾಗ ಬಹುತೇಕರು ಮಾಹಿತಿ ಕೊಡುತ್ತಿಲ್ಲ.
ಕಾರಣ ಸರಿಯಾದ ಮಾಹಿತಿ ಕೊಟ್ಟರೆ ನಮ್ಮ ಪಡಿತರ ಚೀಟಿ ರದ್ದು ಮಾಡುತ್ತಾರೆಂಬಆತಂಕ ಕುಟುಂಬದವರದ್ದು. ಒಟ್ಟಾರೆಜಿಲ್ಲೆಯಲ್ಲಿ ಕಳೆದೊಂದು ವಾರದಿಂದನಡೆಯುತ್ತಿರುವ ಕುಟುಂಬ ಸಮೀಕ್ಷೆಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರುವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತ ಕುಟುಂಬದವರೂ ಸರಿಯಾದ ಮಾಹಿತಿಕೊಡಲು ಹಿಂಜರಿಯುತ್ತಿದ್ದಾರೆ. ಕುಟುಂಬಸಮೀಕ್ಷೆಯ ನಿಜವಾದ ಅಗತ್ಯತೆಯನ್ನುಅಧಿಕಾರಿಗಳು ಸಾರ್ವಜನಿಕಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಯಿಂದ ಕುಟುಂಬ ಸಮೀಕ್ಷೆ ನಡೆಯುತ್ತಿದೆ. ಇದಕ್ಕಾಗಿ ಆಶಾಗಳು ಮೊಬೈಲ್ ಖರೀದಿ ಮಾಡಬೇಕೆಂದು ನಾವು ಹೇಳಿಲ್ಲ. ಆಶಾಗಳು ಕುಟುಂಬ ಸಮೀಕ್ಷೆ ಮಾಡಿ, ಇಲಾಖೆಯ ಸಿಬ್ಬಂದಿ ಮೂಲಕ ಆನ್‌ಲೈನ್ ಮೂಲಕ ದಾಖಲೀಕರಿಸಬೇಕು. – ಡಾ|ಅನಂತ ದೇಸಾಯಿ, ಡಿಎಚ್‌ಒ
ಕುಟುಂಬ ಸಮೀಕ್ಷೆ ನಡೆಸಲೇಬೇಕು, ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂದು ಒತ್ತಡ ಹಾಕುತ್ತಿದ್ದಾರೆ. ಹಲವಾರು ಆಶಾಗಳ ಬಳಿ ದೊಡ್ಡ ಮೊಬೈಲ್ ಇಲ್ಲ.ಅವರು ಹೊಸ ಮೊಬೈಲ್‌ಗೆ 10ರಿಂದ 15 ಸಾವಿರ ಖರ್ಚು ಮಾಡ ಬೇಕಾಗುತ್ತದೆ. ಇಲಾಖೆಯಿಂದಲೇ ಟ್ಯಾಬ್ ಇಲ್ಲವೇ ಮೊಬೈಲ್ ಕೊಡಬೇಕು. ಪ್ರತಿಯೊಂದುಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾಟಾ ಎಂಟ್ರಿ ಆಪರೇಟರ್ ಇರಬೇಕು. ಆಗ ನಾವುಕುಟುಂಬ ಸಮೀಕ್ಷೆ ಮಾಹಿತಿ ದಾಖಲಿಸಲು ಸಾಧ್ಯವಾಗುತ್ತದೆ. ಈ ಕಾರ್ಯಕ್ಕೆ ಪ್ರತ್ಯೇಕ ಸಂಭಾವನೆ ನೀಡಬೇಕು. – ಅಂಜನಾ ಕುಂಬಾರ, ಜಿಲ್ಲಾ ಕಾರ್ಯದರ್ಶಿ, ಆಶಾ ಕಾರ್ಯಕರ್ತೆಯರ ಸಂಘ
ಶ್ರೀಶೈಲ ಕೆ.ಬಿರಾದಾರ