Advertisement

ಅದಾಲತ್‌ನಲ್ಲಿ ಒಂದಾದ 14 ದಂಪತಿ

04:39 PM Feb 13, 2023 | Team Udayavani |

ತುಮಕೂರು: ಜಿಲ್ಲೆಯ ವಿವಿಧ ನ್ಯಾಯಾ ಲಯಗಳಲ್ಲಿ ಬಾಕಿ ಇದ್ದ ವಿವಿಧ ಪ್ರಕರಣಗಳಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿದಿದ್ದ 14 ದಂಪತಿಗಳು ಲೋಕ್‌ ಅದಾಲತ್‌ ಒಂದಾದರು.

Advertisement

ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯ, ಪಾವಗಡ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿಯ ನ್ಯಾಯಾಲಯ ಗಳಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ ನ್ಯಾಯಾ ಧೀಶರು ದಂಪತಿಗಳಿಗೆ ಬುದ್ಧಿ ಹೇಳಿ ಮನ ವೊಲಿಸಿದ ಪರಿಣಾಮವಾಗಿ 14 ಜೋಡಿಗಳು ಪುನರ್‌ ಒಂದಾದ ಸನ್ನಿವೇಶಕ್ಕೆ ನ್ಯಾಯಾಲ ಯದಲ್ಲಿದ್ದ ವಕೀಲರು, ಕಕ್ಷಿದಾರರು, ಸಾರ್ವಜನಿಕರು ಸಾಕ್ಷಿಯಾದರು.

ಬುದ್ಧಿ ಹೇಳಿ ಮನವೊಲಿಕೆ: ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಹಾರ ಬದಲಿಸಿ 7 ದಂಪತಿಗಳನ್ನು ಒಂದು ಮಾಡಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ.ಗೀತಾ, ದಂಪತಿಗಳು ಚಿಕ್ಕ ಚಿಕ್ಕ ವಿಚಾರಗಳಿಗೆ ಮನಸ್ಸು ಕೆಡಿಸಿ ಕೊಂಡು, ಕೆಲವೊಂದು ಸಲ ಬೇರೆಯವರ ಮಾತು ಕೇಳಿ ಸಹ ನ್ಯಾಯಾಲಯಗಳಿಗೆ ವಿಚ್ಚೇದನಕ್ಕೆ ಅಥವಾ ಜೀವನಾಂಶಗಳಿಗೆ ದಾವೆ ಹಾಕಿದ್ದು, ಅವರಿಗೆ ಕಳೆದ ಕೆಲವು ದಿನಗಳಿಂದ ನ್ಯಾಯಾಧೀಶರು, ಎರಡೂ ಕಡೆಯ ವಕೀ ಲರು ಬುದ್ಧಿ ಹೇಳಿದ ಪರಿಣಾಮ 7 ದಂಪತಿ ಗಳು ಪರಸ್ಪರ ಹಾರ ಬದಲಿಸಿಕೊಂಡು ಸಿಹಿ ತಿನಿಸಿ ಮನೆಗೆ ಹೋಗುತ್ತಿದ್ದಾರೆ. ಮತ್ತೆ ಎಂದೂ ನ್ಯಾಯಾಲಯಕ್ಕೆ ದಾವೆ ಹಾಕಿಕೊಂಡು ಬರ ಬೇಡಿ ಎಂದು ಹೇಳಲಾಗಿದೆ. ಅವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ, ಅವರ ಜೀವನ ಸುಖಕರ, ಸಂತೋಷ, ನೆಮ್ಮದಿಯಾಗಿ ಇರಲಿ ಎಂದು ಶುಭ ಹಾರೈಸಿದರು.

ಸಮಾಜಕ್ಕೆ ಮಾದರಿಯಾಗಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಳಾದ ನೂರುನ್ನೀಸ ಮಾತನಾಡಿ, ಸಮರ ಸವೇ ಜೀವನ, ಪರಸ್ಪರ ವಿರಸ ಮರೆತು ಜೀವನದಲ್ಲಿ ಹೊಂದಿಕೊಂಡು ಹೋಗಬೇಕು, ದೊಡ್ಡವರು ಸೇರಿ ಮಾಡಿದ ಮದುವೆಗೆ ಅರ್ಥ ತನ್ನಿ, ಮನಸ್ಸುಗಳನ್ನು ಕೆಡಿಸಿಕೊಳ್ಳದೆ ಸಂತೋಷವಾಗಿ ಬಾಳಿ ಬದುಕಿ, ಬೇರೆಯ ವರಿಗೆ ಮಾದರಿ ಆಗುವುದಲ್ಲದೆ ಸಮಾಜಕ್ಕೆ ಮಾದರಿಯಾಗಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನರಸಿಂಹಪ್ಪ, ವಕೀಲರು ಗಳು, ಕಕ್ಷಿದಾರರು, ಸಾರ್ವಜನಿಕರು, ಆರಕ್ಷಕ ಸಿಬ್ಬಂದಿಗಳು ಹಾಜರಿದ್ದರು.

Advertisement

ಪುನಃ ಒಂದಾದ ದಂಪತಿಗಳು ಇತರ ಪ್ರಕರಣಗಳ ದಂಪತಿಗಳಿಗೆ ಮಾದರಿಯಾಗಲಿ, ಮನಸ್ಸಿ ನಲ್ಲಿ ಏನೂ ಇಟ್ಟುಕೊಳ್ಳದೆ ಸಂತೋಷ ದಿಂದ ಜೀವನ ಕಳೆಯಬೇಕು. ಇರುವುದೊಂದೇ ಜೀವನ, ಸಂತೋಷವಾಗಿ ಕಳೆಯಬೇಕು. -ಎನ್‌.ಮುನಿರಾಜ, ಕೌಟುಂಬಿಕ ನ್ಯಾಯಾಲಯದ 1ನೇ ಅಧಿಕ ಪ್ರ. ನ್ಯಾಯಾಧೀಶರು

Advertisement

Udayavani is now on Telegram. Click here to join our channel and stay updated with the latest news.

Next