Advertisement

ಲೋಟ, ತಟ್ಟೆ, ಜಾಗಟಿ ಹಿಡಿದು ಚಳವಳಿ

12:00 PM Apr 13, 2021 | Team Udayavani |

ರೋಣ: 6ನೇ ವೇತನ ಆಯೋಗ ಶಿಪಾರಸ್ಸು ಸೇರಿದಂತೆ ಸಾರಿಗೆ ನೌಕರರವಿವಿಧ ಬೇಡಿಕೆಗಳನ್ನು ಸರ್ಕಾರ ಶೀಘ್ರವೇಸ್ಪಂದಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರ ಕುಟುಂಬಸ್ಥರು ಸೋಮವಾರ ಪಟ್ಟಣದಲ್ಲಿ ಬೀದಿಗಿಳಿದು ಲೋಟಾ, ತಟ್ಟೆ, ಜಾಗಟಿ ಚಳವಳಿ ನಡೆಸಿದರು.

Advertisement

ಸಾರಿಗೆ ನೌಕರರ ಹೋರಾಟಕ್ಕೆ ರೈತ ಸಂಘ, ಸಿಐಟಿಯು ಸಂಘಟನೆ, ದಲಿತಪರ ಸಂಘಟನೆ,ಕರ್ನಾಟಕ ರಾಜ್ಯ ರಕ್ಷಣಾ ಸಮಿತಿ, ಕಾಂಗ್ರೆಸ್‌ಪಕ್ಷ ಬೆಂಬಲ ವ್ಯಕ್ತಪಡಿಸಿದ್ದು, ಪ್ರತಿಭಟನಾನಿರತ ಸಾರಿಗೆ ನೌಕರರ ಕುಟುಂಬಸ್ಥರೊಂದಿಗೆಬೀದಿಗಿಳಿದು ಲೋಟಾ, ತಾಟು, ಜಾಗಟಿಚಳವಳಿಯಲ್ಲಿ ಭಾಗವಹಿಸಿದ್ದರು. ಬಳಿಕ ತಹಶೀಲ್ದಾರ್‌ ಜೆ.ಬಿ. ಜಕ್ಕನಗೌಡ್ರ ಅವರಿಗೆ ಮನವಿ ಸಲ್ಲಿಸಿದರು.

ಸಿಐಟಿಯು ಮುಖಂಡ ಮಹೇಶ ಹಿರೇಮಠ, ಸಾರಿಗೆ ನೌಕರರ ಕೂಟ ತಾಲೂಕುಅಧ್ಯಕ್ಷ ಎಂ.ಎಂ.ಅವ್ವಣ್ಣವರ, ರಾಜ್ಯ ರೈತ ಸಂಘಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷೆ ಉಮಾದೇವಿಹಿರೇಮಠ, ರೈತ ಸಂಘ ಉಪಾಧ್ಯಕ್ಷ ಎಫ್‌.ವೈ. ಕುರಿ, ಜಿಲ್ಲಾಧ್ಯಕ್ಷ ಸಿ.ಬಿ.ವಸ್ತ್ರದ ಮುಂತಾದವರು ಮಾತನಾಡಿದರು.

ತಹಶೀಲ್ದಾರ್‌ ಜೆ.ಬಿ.ಜಕ್ಕನಗೌಡ್ರ ಮನವಿಸ್ವೀಕರಿಸಿದರು. ಪ್ರತಿಭಟನೆಯಲ್ಲಿ ತಾಪಂ ಸದಸ್ಯಸಿದ್ದಣ್ಣ ಯಾಳಗಿ, ಗ್ರಾಪಂ ಅಧ್ಯಕ್ಷ ವೀರಣ್ಣಯಾಳಗಿ, ಪುರಸಭೆ ಸದಸ್ಯ ಬಾವಾಸಾಬ್‌ ಬೆಟಗೇರಿ, ಅಶೋಕ ಗಡಗಿ, ರಾಜು ಕೆಂಚರಡ್ಡಿ, ಭೀಮರಡ್ಡಿ ರಡ್ಡೇರ, ಮೇಘರಾಜ ಬಾವಿ, ರೈತ ಸಂಘ ತಾಲೂಕು ಅಧ್ಯಕ್ಷ ವೀರಪ್ಪ ತಳವಾರ, ರಹಿಮಾನಸಾಬ್‌ ವಬಾಲೆಸಾಬನವರ, ರೇಣುಕಪ್ಪ ಬೈರಗೊಂಡ, ಕವಿತಾ ಹಿರೇಮಠ, ಮೀನಾಕ್ಷಿ ಬಸನಗೌಡ್ರ, ವಿ.ಎಸ್‌.ದೇಶಾಯುಗೌಡ್ರ, ಎಂ.ಆರ್‌.ವಾಲಿಕಾರ,ಎಂ.ಎಚ್‌.ಮಾದರ, ಅಮರೇಶಗೌಡ ಕರಕನಗೌಡ್ರ, ಜಿ.ಜೆ.ದೇಶಾಯಿಗೌಡ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next