Advertisement

Family; ಪತ್ನಿಯನ್ನು ಪಿಶಾಚಿ ಎನ್ನುವುದು ಕ್ರೌರ್ಯವಲ್ಲ ಎಂದ ಹೈಕೋರ್ಟ್‌

01:24 AM Mar 31, 2024 | Team Udayavani |

ಪಟ್ನಾ: ದೂರವಾಗಿರುವ ದಂಪತಿ ಒಬ್ಬರನ್ನೊಬ್ಬರು ಭೂತ-ಪಿಶಾಚಿ ಎಂದು ಬೈದುಕೊಂಡರೆ ಅದನ್ನು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಪಟ್ನಾ ಹೈಕೋರ್ಟ್‌ ಹೇಳಿದೆ.

Advertisement

ಬಿಹಾರದ ನವಾಡ ಮೂಲದ ಮಹಿಳೆಯೊಬ್ಬರು ಸಂಬಂಧಿಸಿ ಪತಿ ಸಹದೇವ್‌, ಮಾವ ನರೇಶ್‌ ವಿರುದ್ಧ ಪ್ರಕರಣ ದಾಖ ಲಿಸಿದ್ದರು. ಪ್ರಕರಣ ಸಂಬಂಧಿಸಿದಂತೆ ಕೆಳ ನ್ಯಾಯಾಲ ಯದಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಅದನ್ನು ಪ್ರಶ್ನಿಸಿ ಪತಿ, ಮಾವ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ವೇಳೆ ತಮ್ಮ ಕಕ್ಷಿದಾರರಿಗೆ ಆಕೆಯ ಪತಿ ಮತ್ತು ಮಾವ ಭೂತ,  ಪಿಶಾಚಿ ಎಂದು ನಿಂದಿಸಿರುವುದು ಆಕ್ಷೇಪಾರ್ಹ ಮತ್ತು ದೌರ್ಜನ್ಯ ಎಂದು ಮಹಿಳೆ ಪರ ವಕೀಲರು ವಾದಿಸಿದ್ದಾರೆ. ಈ ವೇಳೆ ನ್ಯಾಯಾಲಯವು, ಅಂಥ ಪದ ಬಳಕೆಯನ್ನು ಕ್ರೌರ್ಯ ಎಂದು ಪರಿಗಣಿಸಲಾ ಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next