Advertisement

ಗದಗ: ಮಗನಿಂದಲೇ ತಂದೆಯ ಬರ್ಬರ ಹತ್ಯೆ

08:53 PM Aug 17, 2022 | Team Udayavani |

ಗದಗ: ಕೌಟುಂಬಿಕ ಕಲಹ ಹಿನ್ನೆಲೆ ಮಗನಿಂದಲೇ ತಂದೆಯ ಬರ್ಬರ ಹತ್ಯೆ ನಡೆದಿರುವ ಘಟನೆ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಬುಧವಾರ ನಡೆದಿದೆ.

Advertisement

ಹುಲಕೊಟಿ ಗ್ರಾಮದ 58 ವರ್ಷದ ಗಣೇಶ ಅಡಿವೆಪ್ಪ ಚಿಕ್ಕನಟ್ಟಿ ಕೊಲೆಯಾದವರು. ವಿಜಯ ಗಣೇಶ ಚಿಕ್ಕನಟ್ಟಿ ಕೊಲೆ ಮಾಡಿದ ಮಗ. ಕಳೆದ ಕೆಲ ವರ್ಷಗಳಿಂದ ಗಣೇಶ ಚಿಕ್ಕನಟ್ಟಿ, ಹೆಂಡತಿ ಹಾಗೂ ಮಗನಿಗೆ ನಿತ್ಯ ಕಿರುಕುಳ ನೀಡಿ, ಮನೆಯಲ್ಲಿ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ.

ಎಂದಿನಂತೆ ತಂದೆ ಗಣೇಶ ಮನೆಯಲ್ಲಿ ತಾಯಿಗೆ ಕಿರುಕುಳ ನೀಡುತ್ತಿದ್ದನ್ನು ಗಮನಿಸಿದ ಮಗ, ತಂದೆ ಮಲಗಿರುವ ವೇಳೆ ಕೊಡಲಿಯಿಂದ ಬಲವಾಗಿ ಕುತ್ತಿಗೆಗೆ  ಹೊಡೆದಿದ್ದಾನೆ. ಪರಿಣಾಮ ಗಣೇಶ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಲೆ ನಂತರ ವಿಜಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿ:ವಾಟ್ಸ್‌ಆ್ಯಪ್‌ನಲ್ಲಿ ಹೊಸ ಫೀಚರ್‌ ಬಿಡುಗಡೆ:  “ಅನ್‌ಡು’ ಆಯ್ಕೆ

ಘಟನಾ ಸ್ಥಳಕ್ಕೆ ಎಸ್ಪಿ ಶಿವಪ್ರಕಾಶ ದೇವರಜು, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಭೇಟಿ ನೀಡಿ ಪರಶೀಲನೆ  ನಡೆಸಿದ್ದಾರೆ. ಕೊಲೆ ಆರೋಪಿ ವಿಜಯ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಗದಗ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಚಂದ್ರಶೇಖರ ಹರಿಹರ ಮಾಹಿತಿ ನೀಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next