Advertisement

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

10:59 AM Apr 30, 2024 | Team Udayavani |

ಸಾಮಾನ್ಯವಾಗಿ ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಕೇಳಿಬರುವ ಒಂದು ಮಾತೆಂದರೆ ಅದು ಫ್ಯಾಮಿಲಿ ಡ್ರಾಮಾ. ನಮ್ಮ ಸಿನಿಮಾ ಫ್ಯಾಮಿಲಿ ಡ್ರಾಮಾ. ಇಡೀ ಕುಟುಂಬ ಸಮೇತ ನೋಡಬಹುದಾದ ಚಿತ್ರ ಎಂದು. ಆದರೆ, ಇಲ್ಲೊಂದು ನಿಜಕ್ಕೂ ಫ್ಯಾಮಿಲಿ ಡ್ರಾಮಾ ಮಾಡಿದೆ. ಅದು ಹೇಗೆ ಅಂತೀರಾ, ತಮ್ಮ ಚಿತ್ರಕ್ಕೆ ಫ್ಯಾಮಿಲಿ ಡ್ರಾಮಾ ಎಂಬ ಟೈಟಲ್‌ ಇಟ್ಟಿದೆ.

Advertisement

ಹೊಸ ಪ್ರತಿಭೆಗಳ ಈ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯುವ ಪ್ರತಿಭೆ ಆಕರ್ಷ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾವಿದು. ಆಕರ್ಷ್‌ ಅವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ರಿಷಭ್‌ ಶೆಟ್ಟಿ ಅವರ ತಂಡದಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡಿರುವ ನಿರ್ದೇಶಕ ಆಕರ್ಷ್‌.

ಈ ಸಿನಿಮಾದಲ್ಲಿ ಆಚಾರ್‌ ಆ್ಯಂಡ್‌ ಕೋ ಸಿನಿಮಾದ ನಿರ್ದೇಶಕಿ ಸಿಂಧು ಶ್ರೀನಿವಾಸ್‌ ಮೂರ್ತಿ, ಡೇರ್‌ ಡೆವಿಲ್‌ ಮುಸ್ತಾಫ‌ ಸಿನಿಮಾದಲ್ಲಿ ನಟಿಸಿರುವ ಅಭಯ್, ಪೂರ್ಣ ಮೈಸೂರು ಹಾಗೂ ಅನನ್ಯಾ ಅಮರ್‌ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.

“ಫ್ಯಾಮಿಲಿ ಡ್ರಾಮಾ’ ಡಾರ್ಕ್‌ ಕಾಮಿಡಿ ಸಿನಿಮಾ. ಮುಗ್ಧ ಕುಟುಂಬವೊಂದು ಕೊಲೆ ಮಾಡಿ ಸಂಕಷcಕ್ಕೆ ಸಿಲುಕುವ ಕಥೆಯನ್ನು ಹೊಂದಿದೆ. ಫಿಲಿಫೈನನ್ಸ್‌ನ ಡಿಸೈನರ್‌ ಬಳಿ ಫ್ಯಾಮಿಲಿ ಡ್ರಾಮಾ ಚಿತ್ರದ ಪೋಸ್ಟರ್‌ ಅನ್ನು ಡಿಸೈನ್‌ ಮಾಡಿಸಿದೆ ತಂಡ.  ರೆಟ್ರೋ ಶೈಲಿಯಲ್ಲಿ ಪೋಸ್ಟರ್‌ ಮೂಡಿಬಂದಿದೆ.

ಸಿನಿಮಾದ ಸಂಗೀತ ಕೂಡ ರೆಟ್ರೋ ಶೈಲಿಯಲ್ಲಿ ಇದೆ. ಇವತ್ತಿನ ಕಾಲಘಟ್ಟದ ಕಥೆಯಾದರೂ ಸಂಗೀತ ರೆಟ್ರೋ ಶೈಲಿಯಲ್ಲಿ ಇರುವುದು ಈ ಸಿನಿಮಾದ ವಿಶೇಷವಾಗಿದೆ. ಅಂದಹಾಗೆ ಚಿತ್ರಕ್ಕೆ ಚೇತನ್‌ ಅಮಯ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಶೂಟಿಂಗ್‌ ಮುಗಿಸಿರುವ ಸಿನಿಮಾತಂಡ ಜುಲೈನಲ್ಲಿ ರಿಲೀಸ್‌ ಪ್ಲಾನ್‌ ಮಾಡಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next