Advertisement
ಜಲಮೂಲಗಳ ರಕ್ಷಣೆ, ಅಂತರ್ಜಲ ಮಟ್ಟ ಹೆಚ್ಚಳ, ಕೆರೆಕಟ್ಟೆಗಳ ಸಂರಕ್ಷಣೆಗಾಗಿ ಕೆರೆಗಳನ್ನು ಪುನಶ್ಚೇತನಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಜಲಮೂಲಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವ ಜಲ ಸಂರಕ್ಷಣೆಯ ಮಹತ್ವಾಕಾಂಕ್ಷಿ ಈ ಯೋಜನೆ ಅನುಷ್ಠಾನದಲ್ಲಿ ರಾಜ್ಯ ದೇಶದಲ್ಲೇ ಮುಂಚೂಣಿಯಲ್ಲಿರುವುದು ವಿಶೇಷ. “ಅಮೃತ್ ಸರೋವರ್’ ಅನುಷ್ಠಾನವನ್ನು ತೀವ್ರಗೊಳಿ ಸಲು ಕಳೆದ ಆಗಸ್ಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರು, ಸ್ವಾತಂತ್ರೊÂತ್ಸವ ನಿಮಿತ್ತ ಆ.15 ರಂದು ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 15 ಕೆರೆಗಳನ್ನಾದರೂ ಅಭಿವೃದ್ಧಿ ಪಡಿಸಬೇಕು ಹಾಗೂ ಕೆರೆಯ ದಡದಲ್ಲಿಯೇ ತ್ರಿವರ್ಣ ಧ್ವಜಾರೋಹಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಜತೆಗೆ ನಿರಂತರ ಪ್ರಗತಿ ಪರಿಶೀಲನೆಯ ಕ್ರಮ ಸಹ ಯೋಜನೆಯ ತ್ವರಿತ ಪ್ರಗತಿಗೆ ಸಹಕಾರಿಯಾಗಿದೆ.
●ಡಾ| ಎ. ಚನ್ನಪ್ಪ, ದಾವಣಗೆರೆ ಜಿಪಂ ಸಿಇಒ ಏನೇನು ಕಾಮಗಾರಿ?: ಈ ಯೋಜನೆಯಡಿ ಗುರುತಿಸಿರುವ ಕೆರೆಗಳಲ್ಲಿ ಹೂಳು ತೆಗೆಯುವುದು, ಕೆರೆಯ ತೂಬು ನವೀಕರಿಸುವುದು, ಕೆರೆ ಸುತ್ತಲೂ ತಂತಿಬೇಲಿ ಅಳವಡಿಸುವುದು. ಕೆರೆಗೆ ನೀರು ಸರಾಗವಾಗಿ ಹರಿದುಬರಲು ಸುತ್ತಲಿನ ನಾಲೆಗಳ ಸುಧಾರಣೆ, ಕೆರೆ ದಂಡೆ ಅಭಿವೃದ್ಧಿ, ಕೆರೆ ದಂಡೆ ಮೇಲೆ ಪಾದಚಾರಿ ಪಥ ಅಭಿವೃದ್ಧಿ, ಸಸಿಗಳನ್ನು ನೆಡುವುದು, ದಡದಲ್ಲಿ ಉದ್ಯಾನವನ ನಿರ್ಮಾಣ, ಆಸನ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾಮ ಗಾರಿ ಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನು ಹೊಸದಾಗಿಯೂ ಕೆರೆ ನಿರ್ಮಿಸಬಹುದಾಗಿದ್ದು, ಕನಿಷ್ಠ ನಾಲ್ಕು ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುವಷ್ಟು ವಿಸ್ತಾರದ ಕೆರೆ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಅಮೃತ್ ಸರೋವರ್’ ಯೋಜನೆಯಿಂದ ಗ್ರಾಮೀಣ ಕೆರೆಗಳು ಆಧುನಿಕ ಸ್ಪರ್ಶ ಪಡೆದುಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳುತ್ತಿವೆ.ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಕಾಮಗಾರಿ ಕೈಗೊಳ್ಳುವುದರಿಂದ ಗ್ರಾಮೀಣ ಜನರಿಗೂನಿರಂತರವಾಗಿ ಉದ್ಯೋಗ ಲಭಿಸುತ್ತಿದೆ.
Related Articles
ಅಮೃತ್ ಸರೋವರ್ ಯೋಜನೆಯಡಿ 1307 ಕೆರೆಗಳನ್ನು ಅಭಿವೃದ್ಧಿಗೊಳಿಸಿರುವ ಕರ್ನಾಟಕ ದೇಶದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಯೋಜನಾನುಷ್ಠಾನದಲ್ಲಿ ದೇಶದಲ್ಲಿ ಮೊದಲ ಸ್ಥಾನ ಪಡೆದಿರುವ ಉತ್ತರ ಪ್ರದೇಶ 9125, ಎರಡನೇ ಸ್ಥಾನದಲ್ಲಿರುವ ಮಧ್ಯಪ್ರದೇಶ 2626 ಹಾಗೂ ಮೂರನೇ ಸ್ಥಾನದಲ್ಲಿರುವ ಜಮ್ಮು ಮತ್ತು ಕಾಶ್ಮೀರ 2419 ಜಲಮೂಲಗಳನ್ನು ಅಭಿವೃದ್ಧಿಪಡಿಸಿವೆ.
Advertisement
~ಎಚ್.ಕೆ ನಟರಾಜ