Advertisement
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಪತ್ರ ಸಲ್ಲಿಸಿ, ಸೌತ್ ಇಂಡಿಯಾ ಸಿಮೆಂಟ್ ಕಂಪನಿ 1984ರ ಮಾರ್ಚ್ 30ರಂದು ಕಂಪನಿ ಕಾಯ್ದೆಯಡಿ ನೋಂದಣಿಯಾಗಿದೆ. ಕೇವಲ ಸ್ವಲ್ಪ ದಿನಗಳಲ್ಲಿ ಕಂಪನಿ ಮಾಲಿಕ ವರ್ಗದವರು 1993ರ ಡಿಸೆಂಬರ್ 21ರಂದು ಕಾರ್ಖಾನೆಯನ್ನು ರೋಗಗ್ರಸ್ತ ಕಂಪನಿಯಾಗಿ ಪರಿವರ್ತಿಸಲಾಗಿದೆ (ಬಿಐಎಫ್‌ಆರ್) ಎಂದು ಅರ್ಜಿ ಸಲ್ಲಿಸಿದ್ದಾರೆ.
Related Articles
Advertisement
ಆ ಸಂದರ್ಭದಲ್ಲಿ ಮಾಲಿಕ ವರ್ಗದವರು 4ಲಕ್ಷ ರೂ.ಗಳನ್ನು ನಾಲ್ಕು ಕಂತುಗಳಲ್ಲಿ ತುಂಬುವುದಾಗಿ ಒಪ್ಪಿಕೊಂಡಿದ್ದರು. ಕಳೆದ 2001ರಿಂದ ಇಲ್ಲಿಯವರೆಗೆ ಕಾರ್ಮಿಕರಿಗೆ ಬರಬೇಕಾದ ಹಣವನ್ನು ತುಂಬಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಭವಿಷ್ಯನಿಧಿ ವಿಭಾಗದ ಆಯುಕ್ತರ ಗಮನಕ್ಕೆ ಎರಡು ಬಾರಿ ತಂದರೂ ನೆಪ ಹೇಳಿ ಕಾರ್ಮಿಕರಿಗೆ ದ್ರೋಹ ಮಾಡಲಾಗುತ್ತಿದೆ.
ಕಾರ್ಖಾನೆಯವರು 645.52 ಲಕ್ಷ ರೂ.ಗಳನ್ನು ಬೇರೆ, ಬೇರೆ ಬ್ಯಾಂಕುಗಳಿಂದ ಸಾಲ ಪಡೆದು ಕಾರ್ಖಾನೆಯಲ್ಲಿ ವಿನಿಯೋಗಿಸದೆ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಕಂಪೆನಿಯ ಕಾರ್ಮಿಕ ಒಕ್ಕೂಟದ (ಎಐಟಿಯುಸಿ) ಮುಖಂಡ ಡಾ| ಸಜ್ಜನ್ ಮಲ್ಲೇಶಿ, ಅಧ್ಯಕ್ಷ ಜಬ್ಟಾರಖಾನ್, ಉಪಾಧ್ಯಕ್ಷ ಜೈರಾಮ ರಾಠೊಡ, ಗುರುನಾಥ ಪಂಚಾಳ, ಮಹಿಬೂಬ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಶರಣು ಪೂಜಾರಿ, ರಾಮಲಿಂಗಯ್ಯ ನ್ಯಾಮ್, ವಿಠೊಬಾ ಮುಂತಾದವರು ಪಾಲ್ಗೊಂಡಿದ್ದರು.