Advertisement
ಇತ್ತೀಚೆಗೆ, ಅಧ್ಯಕ್ಷ ಝೆಲೆನ್ಸ್ಕಿ ಅವರು, ಉಕ್ರೇನ್ ಸೇನಾ ಸಮವಸ್ತ್ರ ಧರಿಸಿಕೊಂಡು, ಯುದ್ಧ ಸಾಮಗ್ರಿಗಳಿರುವ ಬ್ಯಾಗನ್ನು ಕಟ್ಟಿಕೊಂಡು ಯುದ್ಧ ವಿಮಾನವೊಂದರ ಬಳಿ ತೆರಳುತ್ತಿರುವ ಫೋಟೋವೊಂದು ಉಕ್ರೇನ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಬಟ್ಟೆ ವೈರಲ್ ಆಗಿತ್ತು. ಅಧ್ಯಕ್ಷರೇ ಯುದ್ಧಭೂಮಿಗೆ ಇಳಿದಿದ್ದಾರೆ ಎಂಬಂಥ ಸಂದೇಶಗಳು ಹರಡಿ ಅವು ಹಲವಾರು ಜನರನ್ನು ಯುದ್ಧಕ್ಕೆ ತಾವು ಇಳಿಯುವಂತೆ ಪ್ರೇರೇಪಿಸಿತ್ತು.
ಯುದ್ಧ ನಡೆಯುತ್ತಿದ್ದಾಗಲೇ ಮಹಿಳೆಯೊಬ್ಬರು ಯುದ್ಧಕ್ಕೆ ಸಿದ್ಧವಾಗುತ್ತಿರುವ ಫೋಟೋವೊಂದು ವೈರಲ್ ಆಗಿ, ಆ ಮೂಲಕ ಉಕ್ರೇನ್‌ನ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವಂಥ ಕೆಲಸ ಮಾಡಲಾಗಿತ್ತು. ಫೋಟೋದಲ್ಲಿ ಯುದ್ಧಕ್ಕೆ ಸನ್ನದ್ಧವಾಗುತ್ತಿದ್ದ ಮಹಿಳೆಯನ್ನು ಉಕ್ರೇನ್‌ನ ಉಪಾಧ್ಯರ ಪತ್ನಿ ಎಂದು ಬಿಂಬಿಸಲಾಗಿತ್ತು. ಆದರೆ, ಅಸಲಿಗೆ ಉಕ್ರೇನ್‌ನಲ್ಲಿ ಉಪಾಧ್ಯಕ್ಷರೇ ಇಲ್ಲ! ಹಾಗಾಗಿ, ಆ ಸುದ್ದಿಯೂ ಈಗ ಫೇಕ್ ಎಂದು ಸಾಬೀತಾಗಿದೆ.
Related Articles
ಮಾಜಿ ಮಿಸ್ ಉಕ್ರೇನ್ ಆದ ಅನಾಸ್ತೇಸಿಯಾ ಲೆನ್ನಾ ಅವರು ಬಂದೂಕನ್ನು ಹಿಡಿದಿರುವ ಫೋಟೋವೊಂದು ವೈರಲ್ ಆಗಿತ್ತು. ಸುಂದರಿಯು ಉಕ್ರೇನ್ ಸೇನೆಯನ್ನು ಸೇರಿದ್ದಾರೆಂದು ಹೇಳಲಾಗಿತ್ತು. ಇದನ್ನು ಖುದ್ದಾಗಿ ಅನಾಸ್ತೇನಿಯಾ ಅವರೇ ನಿರಾಕರಿಸಿದ್ದಾರೆ.
Advertisement
“ನಾನೊಬ್ಬ ಸಾಮಾನ್ಯ ಮಹಿಳೆ. ದೇಶದ ಇತರರಂತೆ ನಾನು ಜೀವಿಸುತ್ತಿದ್ದೇನೆ. ನಾನು ಸೇನೆಗೆ ಸೇರಿಲ್ಲ. ಯುದ್ಧದಲ್ಲಿ ಭಾಗಿಯಾಗಿಲ್ಲ. ಫೋಟೋದಲ್ಲಿ ನೀವು ನೋಡಿರುವುದು ನಾನು ಏರ್‌ಸಾಫ್ಟ್ ತಂಡದಲ್ಲಿದ್ದಾಗ ಹಿಡಿದಿದ್ದ ಬಂದೂಕು” ಎಂದು ತಿಳಿಸಿದ್ದಾರೆ.