ಕೊಪ್ಪಳ: ಸುಳ್ಳು ಮತ್ತು ಮೋಸ ಕಾಂಗ್ರೆಸ್ ನ ರಕ್ತದಲ್ಲೇ ಇದೆ. ಬಿಟ್ ಕಾಯಿನ್ ಬಗ್ಗೆ ಅವರು ಸುಳ್ಳು ಹೇಳುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಅಧಿವೇಶನದಲ್ಲಿ ಬಿಟ್ ಕಾಯಿನ್ ಬಗ್ಗೆ ಮಾತಾಡಿದ್ದಾರೆ. ಈಗ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ದೇಶದಲ್ಲಿ ಎಮರ್ಜೆನ್ಸಿ ತಂದಿತು. ಅಧಿಕಾರದಲ್ಲಿ ಇದ್ದ ಸಿಎಂರನ್ನು ಕಿತ್ತೊಗೆಯಿತು ಎಂದರು.
ಇದನ್ನೂ ಓದಿ:ಪರಿಷತ್ ಚುನಾವಣೆಗೆ ಇಂದು ಸಂಜೆಯೊಳಗೆ ಅಭ್ಯರ್ಥಿಗಳ ಹೆಸರು ಪ್ರಕಟ: ಸಿಎಂ ಬೊಮ್ಮಾಯಿ
ಬಿಟ್ ಕಾಯಿನ್ ಎನ್ನುವುದು ಶುದ್ದ ಸುಳ್ಳು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅದು ನಡೆದೇ ಇಲ್ಲ. ಅದೇನಾದರೂ ನಡೆದಿದ್ದರೆ ಕಾಂಗ್ರೆಸ್ ಅವಧಿಯಲ್ಲೇ ನಡೆದಿರಬೇಕು. ಈ ಹಿಂದೆ ಇದು ಸದನದಲ್ಲಿ ಚರ್ಚೆಯಾಗಿದೆ. ಆಗ ಸಿಎಂ ಇದ್ದ ಸಿದ್ದರಾಮಯ್ಯ ಅವರು ಬಾಯಿ ಬಿಡಲಿಲ್ಲ. ತನಿಖೆಯನ್ನೂ ನಡೆಸಲಿಲ್ಲ. ನಲಪಾಡ್ ಹಲ್ಲೆ ಮಾಡಿದ ಪ್ರಕರಣವನ್ನು ಪ್ರಶ್ನೆ ಮಾಡಿದ್ದ ಕುಮಾರಸ್ವಾಮಿ ಅವರು ಬಿಟ್ ಕಾಯಿನ್ ಬಗ್ಗೆಯೂ ಆಗಲೇ ಅನುಮಾನ ವ್ಯಕ್ತಪಡಿಸಿದ್ದರು. ಆಗಲೂ ಅದಕ್ಕೆ ಸಿದ್ದರಾಮಯ್ಯ ಅವರು ಯಾವುದೇ ಮಾತನಾಡಲಿಲ್ಲ. ಈಗ ಯಾಕೆ ಬಿಟ್ ಕಾಯಿನ್ ಬಗ್ಗೆ ಪದೇ ಪದೆ ಆ ವಿಷಯ ಎತ್ತುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ಏನೇ ಆಗಲಿ. ಈಗಾಗಲೇ ಬಿಟ್ ಕಾಯಿನ್ ಬಗ್ಗೆ ಇಡಿ ಮತ್ತು ಸಿಬಿಐ ಇಂಟರ್ ಪೋಲ್ ಮೂಲಕ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಸತ್ಯ ಗೊತ್ತಾಗುತ್ತದೆ. ತನಿಖೆ ನಡೆಯುವ ವೇಳೆ ಈಗಲೇ ಎಲ್ಲವನ್ನೂ ಹೇಳಲಾಗದು ಎಂದರು.
ಕಾಂಗ್ರೆಸ್ ಮುಸ್ಲಿಂರನ್ನು ಓಲೈಕೆ ಮಾಡಿ ಕೇವಲ ಮತ ಬ್ಯಾಂಕ್ ಆಗಿ ಬಳಕೆ ಮಾಡಿಕೊಂಡಿದೆ. ಅವರನ್ನು ಯಾವುದೇ ಅಭಿವೃದ್ಧಿ ಮಾಡಿಲ್ಲ. ಚುನಾವಣೆ ಬಂದಾಗ ಮಾತ್ರ ತಮ್ಮ ರಾಜಕೀಯ ಸ್ವಾರ್ಥಕ್ಕೆ ಮಾತ್ರ ಅವರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದರು.