Advertisement

ನನ್ನ ವಿರುದ್ಧ ಲೈಂಗಿಕ ಆರೋಪ ಸುಳ್ಳು: ಅಕ್ಬರ್‌

06:42 AM Oct 15, 2018 | |

ಹೊಸದಿಲ್ಲಿ: ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ವಿದೇಶಾಂಗ ಖಾತೆ ಸಹಾಯಕ ಸಚಿವ ಎಂ.ಜೆ.ಅಕ್ಬರ್‌ ತನ್ನ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇವೆಲ್ಲ ಸುಳ್ಳು ಎಂದು ಹೇಳಿರುವ ಅವರು, ಆರೋಪಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

ರವಿವಾರ ಆಫ್ರಿಕಾ ಪ್ರವಾಸದಿಂದ ದಿಲ್ಲಿಗೆ ಹಿಂದಿರುಗಿದ ಸಚಿವ ಅಕ್ಬರ್‌, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಬಿಜೆಪಿಯ ಹಿರಿಯ ನಾಯಕರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಮಧ್ಯಾಹ್ನದ ಬಳಿಕ ತಮ್ಮ ನಿರ್ಧಾರದ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿದರು. “ನನ್ನ ವಿರುದ್ಧದ ಆರೋಪಗಳೆಲ್ಲವೂ ಆಧಾರ ರಹಿತ. ನನ್ನ ವಿರುದ್ಧ ನಡೆಸಲಾದ ಪಿತೂರಿ ಇದಾಗಿದೆ. ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿರುವಾಗ ಈ ಆರೋಪ ಬರುತ್ತಿರುವುದೇ ಇದಕ್ಕೆ ಸಾಕ್ಷಿ. ಆಧಾರ ರಹಿತ ಆರೋಪಗಳು ಕಾಳ್ಗಿಚ್ಚಿನಂತೆ ಹಬ್ಬುತ್ತವೆ. ಆರೋಪಗಳ ಬಗ್ಗೆ ನನ್ನ ವಕೀಲರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ. 

ಅಕ್ಬರ್‌ ಹಿಂದೆ ಸಂಪಾದಕರಾಗಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದರು ಎಂದು 12 ಮಂದಿ ಪತ್ರಕರ್ತರು “ಮಿ ಟೂ’ ಅಭಿಯಾನದ ಮೂಲಕ ಆರೋಪಿಸಿದ ಬೆನ್ನಲ್ಲೇ ಅಕºರ್‌ ರಾಜೀನಾಮೆಗೆ ಆಗ್ರಹ ವ್ಯಕ್ತವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next