ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಜೋಳದ ಬೆಳೆಗೆ ಫಾಲ್ ಸೈನಿಕ ಹುಳು ಕಾಟದ ಬಾಧೆ ತಗುಲಿದ್ದು, ರೈತರು ಜೋಳದ ಬೆಳೆ ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ. ಬೀಜೋಪಚಾರದಿಂದಲೇ ತಜ್ಞರ ಸಲಹೆ ಪಾಲಿಸಿದರೆ, ಕೀಟ ನಿಯಂತ್ರದಲ್ಲಿಡ ಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಪಿ. ಮಲ್ಲಿಕಾರ್ಜುನಗೌಡ, ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ.ಬಿ. ಮಂಜುನಾಥ್ ಸಲಹೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿ, ಫಾಲ್‌ಸೈನಿಕ ಹುಳು, ಅಮೆರಿಕ ದಿಂದ ಆಫ್ರಿಕಾ ಮೂಲಕ ಭಾರತಕ್ಕೆ ಬಂದಿದೆ. ಈ ಲದ್ದಿಹುಳು ಆಹಾರ ಖಾಲಿಯಾದ ತಕ್ಷಣ ಅನ್ವೇಷನೆ ಆರಂಭಿಸುತ್ತದೆ. ಒಂದು ಬಹುಬೆಳೆ ಭಕ್ಷಕ ಕೀಟವಾಗಿದ್ದು, ಆಕ್ರಮಣಕಾರಿ ಪ್ರವೃತ್ತಿ ಹೊಂದಿದೆ. ಸುಮಾರು 80ಕ್ಕಿಂತ ಹೆಚ್ಚು ಆಸರೆ ಸಸ್ಯ ಹೊಂದಿದ್ದು, ಮುಖ್ಯವಾಗಿ ಹುಲ್ಲುಗಾವಲು, ಹುರಳಿ, ಹತ್ತಿ, ಗೋವಿನಜೋಳ, ರಾಗಿ, ಓಟ್ಸ್, ಕಡಲೆ, ಭತ್ತ, ಜೋಳ, ಸಕ್ಕರೆ, ಬಿಟ್‌ರೂಟ್, ಸೋಯಾಬಿನ್, ಕಬ್ಬು, ತಂಬಾಕು, ಗೋಧಿ, ಕಿರು ಧಾನ್ಯ ಮತ್ತು ಮೇವಿನ ಬೆಳೆ ಗಳು ಕೀಟದ ಬಾಧೆಗೆ ತುತ್ತಾ ಗುತ್ತವೆ. ತರಕಾರಿ ಬೆಳೆಗಳು ಮತ್ತು ಹಣ್ಣಿನ ಬೆಳೆಗಳ ಮೇಲೆ ಕೆಲವೊಮ್ಮೆ ಮಾತ್ರ ದಾಳಿ ನಡೆಸುತ್ತವೆ ಎಂದರು.
ಹಾನಿಯ ಲಕ್ಷಣಗಳು: ಕೀಟಗಳು ಪ್ರಮುಖ ವಾಗಿ ಎಲೆ ಸೇವಿಸುತ್ತವೆ. ಕೀಟದ ಬಾಧೆ ತೀವ್ರ ವಾದಲ್ಲಿ ಸುಳಿ ತಿಂದು ಅಧಿಕ ಪ್ರಮಾಣ ದಲ್ಲಿ ಹಿಕ್ಕೆ ಹಾಕುತ್ತವೆ. ತೆನೆ ತುದಿಯಲ್ಲಿ ಮೊದಲು ತುಪ್ಪಳ ಆಹಾರ ಸೇವಿಸಿ, ಬಳಿ ಸಿಪ್ಪೆ ಯೊ ಳಗೆ ಪ್ರವೇಶಿಸಿ ಕಾಳು ತಿಂದು ನಾಶಪಡಿ ಸುತ್ತವೆ. ಈ ಕೀಟ ಹೆಚ್ಚಾಗಿ 40ರಿಂದ 50 ದಿ® ದೊಳಗಿನ ಬೆಳೆ ನಾಶಮಾಡುತ್ತವೆ. ಈ ಕೀಟಗಳು ಆಹಾರ ಅನ್ವೇಷಣೆಯಲ್ಲಿ ಒಂದು ಹೊಲದಿಂದ ಮತ್ತೂಂದು ಹೊಲಕ್ಕೆ ಸೈನಿಕ ರೋಪಾದಿಯಲ್ಲಿ ಪಸರಿಸುವ ಶಕ್ತಿ ಹೊಂದಿವೆ ಎಂದರು.
ನಿರ್ವಹಣೆ ಕ್ರಮಗಳು: ಸಾಮಾನ್ಯವಾಗಿ ರೈತರು ಸೂಕ್ತ ವಿಧಾನ ಅನುಸರಿಸದೇ ರಾಸಾ ಯನಿಕ ಅಂಗಡಿಗಳಿಂದ ತಂದ ಕೀಟನಾಶಕ ಬಳಸುತ್ತಾರೆ. 10 ದಿನಗಳ ನಂತರ ಮತ್ತೆ ಕೀಟ ಗಳು ಆರಂಭಗೊಳ್ಳುತ್ತದೆ. ಈ ನಿಟ್ಟಿನಲ್ಲಿ ರೈತರು ಸೂಕ್ತ ಕೀಟ ನಾಶಕ ಬಳಸಬೇಕು. ಅಡ ಗಿ ರುವ ಹುಳುಗಳು ಸಂಜೆ ಹೊತ್ತು ಹೆಚ್ಚಾಗಿ ಹೊರಬರುವುದರಿಂದ ಸಂಜೆ ಹೊತ್ತು ಮಾತ್ರ ಕೀಟ ನಾಶಕ ಸಿಂಪಡಿಸಬೇಕು ಎಂದರು.
ಮುಸುಕಿನ ಜೋಳದಲ್ಲಿ ಸೈನಿಕ ಹುಳುವಿನ ಹತೋಟಿಗೆ ಸೈಯಂತ್ರನಿಲಿಪೊಲ್, ಥಯೋ ಮೆಥಕ್ಸಾಮ್- 6 ಮಿ.ಲೀ. ಜತೆಗೆ 4 ಮಿ.ಲೀ. ನೀರು ಪ್ರತಿ ಕಿಲೋಗ್ರಾಂ ಬೀಜಕ್ಕೆ ಬೀಜೋಪ ಚಾರ ಮಾಡಿ ಬಿತ್ತನೆ ಮಾಡುವುದು ಸೂಕ್ತ. ಬೇವಿನ ಬೀಜದ ಕಷಾಯವನ್ನು ಶೇ.5ರಂತೆ ಅಥವಾ ಬೇವಿನ ಮೂಲದ ಕೀಟ ನಾಶಕ ಅಜಾಡಿರೆಕ್ಟಿನ್ 10,000 ಪಿಪಿಎಂ 2 ಮೀ.ಲೀ ಒಂದು ಲೀ. ನೀರಿಗೆ ಮಿಶ್ರಣ ಮಾಡಿ, ಸುಳಿಯಲ್ಲಿ ಸಿಂಪರಣೆ ಮಾಡು ವುದರಿಂದ ಮೊಟ್ಟೆ ಮತ್ತು ಮರಿಹುಳು ನಾಶಪಡಿಸ ಬಹುದು.
ಸ್ಟ್ರೈನೊಟರಮ್ 11.7 ಎಸ್‌ಸಿ, 0.5 ಮಿ.ಲೀ/ಲೀ., ನೀರಿಗೆ ಅಥವಾ ಕ್ಲೊರಾಂ ಟ್ರಿನೀಲಿ ಪೋಲ್ 18.5 ಎಸ್‌ಸಿ 0.4 ಮಿ.ಲೀ. ಅಥವಾ 0.4 ಗ್ರಾಂ. ಎಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ. ಯನ್ನು ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.