Advertisement
ತುಮಕೂರು ನಗರದಲ್ಲಿ ಗಣರಾಜ್ಯೋತ್ಸವ ಆಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋಗಿದ್ದಾರೆ, ಹೋಗಲಿ. ಅವರನ್ನು ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ಅದ್ದೂರಿಯಾಗಿ ಸ್ವಾಗತ ಬಯಸಿದ್ದೆವು. ನನ್ನನ್ನು ಸರಿಯಾಗಿ ಬಿಜೆಪಿಯವರು ನಡೆಸಿಕೊಂಡಿಲ್ಲ ಅಂತೆಲ್ಲಾ ಹೇಳಿ ಪಕ್ಷಕ್ಕೆ ಬಂದಿದ್ದರು. ಪಕ್ಷಕ್ಕೆ ಅವರು ಬಂದ ಬಳಿಕ ಕಾಂಗ್ರೆಸ್ ನಲ್ಲಿ ಅವರಿಗೆ ಗೌರವಯುತವಾಗಿ ನಡೆಸಿಕೊಂಡಿದ್ದೆವು. ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಅವಕಾಶ ಕಲ್ಪಿಸಿದೆವು. ಮುಖ್ಯಮಂತ್ರಿಯಾಗಿದ್ದವರು ಸೋಲಬಾರದು ಆದರೂ ಸೋತರು. ಇದು ಅವರಿಗೆ ಜನಬೆಂಬಲ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಆದರೂ ಅವರು ಮುಖ್ಯಮಂತ್ರಿಯಾಗಿದ್ದವರು ಎಂದು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದವು. ಆದರೆ ಬಿಜೆಪಿಯನ್ನು ಬೈದವರು ಮತ್ತೆ ವಾಪಸು ಹೋಗಿದ್ದಾರೆ ಎಂದರೆ ಯಾಕೆ ಹೋಗಿದ್ದಾರೆ ಎಂದು ಗೊತ್ತಿಲ್ಲ. ಇದರ ಹಿಂದಿನ ಮರ್ಮ, ಒತ್ತಡದ ಗುಟ್ಟು ಗೊತ್ತಿಲ್ಲ ಎಂದರು.
Related Articles
Advertisement
ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಈಡೇರಿಸಿದೆ. ಅದರಲ್ಲಿ ನ್ಯೂನತೆ ಬಂದಿದ್ದರೆ ಈ ಜಾಥಾದಲ್ಲಿ ತಿಳಿಸಬಹುದು. ಅದನ್ನು ಸರಿಪಡಸಲಾಗುವುದು. ಅಲ್ಲದೆ, ಜನಪರ ಆಡಳಿತ ಕೊಡುವುದಿಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬದ್ಧವಾಗಿದೆ ಎಂಬುದನ್ನು ಜಾಥಾದಲ್ಲಿ ತಿಳಿಸಲಾಗುತ್ತದೆ.
ಜ.29 ರಂದು ಜಿಲ್ಲೆಗೆ ಸಿಎಂ
ಇದೇ ಜ. 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಕಳೆದ ಎಂಟು ತಿಂಗಳಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ನಾನಾ ಕಾಮಾಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ 200 ಹೆಚ್ಚು ಅಡಿಗಲ್ಲು ಹಾಕಬೇಕು ಎಂ ಚಿಂತನೆಯಿದೆ. ಆದರೆ ಕಡಿಮೆ ಮಾಡಿ ನೂರಕ್ಕೆ ಇಳಿಸಿದ್ದೇವೆ. ಸುಮಾರು 697 ಕೋಟಿ ರೂ ವೆಚ್ಚದಲ್ಲಿ ಅಡಿಗಲ್ಲು ಮತ್ತು ಶಂಕುಸ್ಥಾಪನೆ ಮಾಡುತ್ತೇವೆ. ಜೊತೆಗೆ ವಿಶ್ವವಿದ್ಯಾಲಯವನ್ನು ಸುಮಾರು 40 ಕೋಟಿ ವೆಚ್ಚದಲ್ಲಿ ಕಟ್ಟಿದ್ದಾರೆ. ಅದನ್ನು ಉದ್ಘಾಟನೆ ಮಾಡಲಾಗುತ್ತದೆ. ಭವಿಷ್ಯ ತುಮಕೂರು ಇತಿಹಾಸದಲ್ಲಿ ಬೃಹತ್ ಮೊತ್ತದ ಅಡಿಗಲ್ಲು, ಕಾಮಗಾರಿಗೆ ಗುದ್ದಲಿಪೂಜೆಯನ್ನು ಮೊದಲ ಬಾರಿಗೆ ಮಾಡಲಾಗುತ್ತಿದೆ. ಇದು ತುಮಕೂರು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ ಎಂದರು.
ಕಳೆದ 7 ತಿಂಗಳಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 55 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಇದರಿಂದ ಸುಮಾರು 450 ಕೋಟಿ ರೂ. ಉತ್ಪತ್ತಿ ಮಾಡಲಾಗಿದೆ. ಇದರಿಂದಾಗಿ ಇಡೀ ರಾಜ್ಯದಲ್ಲಿ ತುಮಕೂರು ಜಿಲ್ಲೆ ಮೊದಲ ಸ್ಥಾನದಲ್ಲಿದ್ದೇವೆ ಎಂದರು.
ನರೇಗಾಕ್ಕೆ ಪೂರಕವಾಗಿ ಒಂದು ಸಾವಿರ ಶಾಲೆಗಳನ್ನು ಪೇಸ್ ಲಿಫ್ಟ್ ಮಾಡಿ ಕಾಂಪೌಡ್ ಮಾಡಿ ರಿಪೇರಿ ಮಾಡಲಾಗಿದೆ. ಇದಕ್ಕಾಗಿ 85 ಕೋಟಿ ಖರ್ಚು ಮಾಡಲಾಗಿದೆ ಎಂದರು
ಸಿಎಂ ಜಿಲ್ಲೆಗೆ ಬರುವುದರಿಂದ ಜಿಲ್ಲೆಗೆ ನಾನಾ ಬೇಡಿಕೆ ಇಡಲಾಗುತ್ತಿದೆ. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಇಡೀ ಜಿಲ್ಲೆಗೆ ಒಂದು ವಿವಿ ಕೊಟ್ಟಿದ್ದು ಇತಿಹಾಸ. ತುಮಕೂರು ವಿಶ್ವವಿದ್ಯಾಲಯದಲ್ಲಿ ಲಕ್ಷಾಂತರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ನೂತನ ಕ್ಯಾಂಪಸ್ ಬರುತ್ತಿದೆ. ಹಾಗಾಗಿ ಹೆಚ್ಚಿನ ಕೋರ್ಸ್ ಗಳನ್ನು ಮಾಡಲಿಕ್ಕೆ ಹೆಚ್ಚು ಹಣ ಕೊಡಬೇಕೆಂಬ ಬೇಡಿಕೆ ಇಡಲಾಗುತ್ತಿದೆ ಎಂದರು.
ತುಮಕೂರು ಬಹಳ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರಿಗಿಂತ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರು ವಿಸ್ತಾರವಾಗುತ್ತಿದೆ. ಹಾಗಾಗಿ ತುಮಕೂರು , ರಾಮನಗರ ಕೋಲಾರ ಚೆನ್ನಪಟ್ಟಣ ಅಭಿವೃದ್ಧಿ ಮಾಡಿಬೇಕಿದೆ. ಆ ಮೂಲಕ ಬೆಂಗಳೂರು ಮೇಲಿನ ಒತ್ತಡ ಕಡಿಮೆಯಾಗಲಿದೆ. ಹಾಗಾಗಿ ಈಗಾಗಲೇ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಒತ್ತಡ ಇದೆ. ಒಂದು ಕೋಟಿ ಮೂವತ್ತು ಲಕ್ಷ ವಾಹನಗಳಿವೆ. ಅದರಲ್ಲಿ 80 ಲಕ್ಷ ದ್ವಿಚಕ್ರವಾಹನಗಳಿವೆ. ಹಾಗಾಗಿ ರಸ್ತೆಗಳು ಅಗಲೀಕರಣ ಮಾಡಲು ಸಾಧ್ಯವಿಲ್ಲ. ಈಗಾಗಲೇ ಸಾಧ್ಯವಾದಷ್ಡು ಮಾಡಲಾಗಿದೆ. ಹಾಗಾಗಿ ಬೆಂಗಳೂರರನ್ನು ತುಮಕೂರು ನಗರಕ್ಕೆ ಸಂಪರ್ಕ ಕಲ್ಪಿಸಬೇಕು. ಈ ಹಿನ್ನೆಲೆಯಲ್ಲಿ ಮೆಟ್ರೊ ರೈಲನ್ನು ತುಮಕೂರಿಗೆ ತರಬೇಕು ಎಂದು ಸಿಎಂ ಡಿಸಿಎಂ ಇಬ್ಬರಿಗೂ ಮನವಿ ಮಾಡಿದ್ದೇನೆ. ಹಾಗಾಗಿ ಇಬ್ಬರೂ ಡಿಪಿಆರ್ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ಇದು ಮೊದಲ ಹಂತ. ಎರಡನೇ ಹಂತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನುಮತಿ ಸಿಗಬೇಕು. ಸದ್ಯಕ್ಕೆ ಡಿಪಿಆರ್ ಆಗಬೇಕು. ಅದಾದ ಬಳಿಕ ಮುಂದಿನ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಉದ್ಘಾಟನೆ ಮಾಡುತ್ತೇವೆ. ರಾಮಮಂದಿರದ ರೀತಿಯಲ್ಲಿ ಮೊದಲನೆ ಹಂತದಲ್ಲಿ ಉದ್ಘಾಟನೆ ಮಾಡುತ್ತೇವೆ. ಪದೇ ಪದೆ ಮುಖ್ಯಮಂತ್ರಿ ಬರುವುದಿಲ್ಲ. ಹಾಗಾಗಿ ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ಉದ್ಘಾಟನೆ ಮಾಡಲಿದ್ದಾರೆ. ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ ಎಂದರು.
ಲಿಕಿಂಗ್ ಕೆನಾಲ್ ವಿಚಾರ ಮಾತನಾಡಿ, ಈ ವಿಚಾರ ಕ್ಯಾಬಿನೆಟ್ ಚರ್ಚೆಯಾಗಿದೆ. ಇದರಿಂದ ಯಾವುದೇ ಏನು ತೊಂದರೆಯಾಗಲ್ಲ ಎಂದರು.
ಸ್ಟೇಡಿಯಂ ಅನ್ನು ಹಸ್ತಾಂತರವಾಗಿದೆ ಎಡಿ ಸ್ಪೋರ್ಟ್ಸ್ ಅವರಿಗೆ ಹಸ್ತಾಂತರ ಮಾಡಲಾಗಿದೆ. ಕೊಬ್ಬರಿಗೆ ಬೆಂಬಲ ಬೆಲೆ ವಿಚಾರ ವಾಗಿ ಮಾತನಾಡಿ, 1500 ನಾವು ಕೊಡುತ್ತೇವೆ. ಕೇಂದ್ರದಿಂದ 12ಸಾವಿರ ಕೊಟ್ಟಿದ್ದೀರಾ ಮಾರ್ಕೆಟಿಂಗ್ ಬೆಲೆ 15 ಸಾವಿರ ಇದೆ ಎಂದಾಗ ಕೇಂದ್ರದವರು 15 ಕೊಡಿಲಿ , ನಾವು 2 ಸಾವಿರ ಕೊಡುತ್ತೇವೆ. ಒಟ್ಟು 17 ಸಾವಿರ ಆಗುತ್ತದೆ ಎಂದರು.