Advertisement

“ಮೈತ್ರಿ ಪತನ, ಡಿಕೆಶಿ ಜೈಲು ಸೇರಲು ಸಿದ್ದು ಕಾರಣ’

10:36 PM Sep 24, 2019 | Team Udayavani |

ಚಾಮರಾಜನಗರ: ಸಮ್ಮಿಶ್ರ ಸರ್ಕಾರ ಕೆಡಗುವುದು ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಜೈಲಿಗೆ ಕಳುಹಿಸುವುದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಕ್ಷನ್‌ ಪ್ಲಾನ್‌ ಆಗಿತ್ತು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ದೂರಿದರು. ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಕಾಟಾಚಾರದ 14 ತಿಂಗಳ ಸರ್ಕಾರ ಮಾಡಲು ನಿರ್ಧರಿಸಿದ್ದರು.

Advertisement

ನಂತರ ಮುಖ್ಯಮಂತ್ರಿ ಕುರ್ಚಿಯಿಂದ ಕುಮಾರಸ್ವಾಮಿ ಅವರನ್ನು ಇಳಿಸಲು ಪ್ಲಾನ್‌ ಮಾಡಿದ್ದರು ಎಂದರು. ಸಿದ್ದರಾಮಯ್ಯ ಅವರು ಸರ್ಕಾರ ಬಿದ್ದ ಬಳಿಕ ವಿರೋಧ ಪಕ್ಷದ ಸ್ಥಾನ ಪಡೆಯಲು ಪ್ರಯತ್ನ ಮಾಡಿದ್ದರು. ಇದಲ್ಲದೇ, ಜೊತೆ ಜೊತೆಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರನ್ನ ಜೈಲಿಗೆ ಕಳುಹಿಸಲು ಮೊದಲೇ ಆಕ್ಷನ್‌ ಪ್ಲಾನ್‌ ಮಾಡಿದ್ದರು. ಇವೆಲ್ಲ ಸಿದ್ದರಾಮಯ್ಯ ಮಾಡಿದ ದೊಡ್ಡ ನಾಟಕ ಎಂದು ಗುರುತರ ಆರೋಪ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next