Advertisement
2022ರ ಎಪ್ರಿಲ್‌ನಲ್ಲಿ ಸಿಪ್ಪೆ ಸಹಿತವಾದ ತೆಂಗಿನ ಕಾಯಿ ಒಂದಕ್ಕೆ ಬೆಳೆಗಾರರಿಂದ 14ರಿಂದ 16 ರೂ. ನೀಡಿ ವ್ಯಾಪಾರಿಗಳು ಖರೀದಿಸಿದ್ದರು. 2023ರ ಮೇ- ಜೂನ್ ತಿಂಗಳಲ್ಲಿ ತೆಂಗಿನ ಕಾಯಿ ಬೆಲೆ ಸಾರ್ವ ತ್ರಿಕ ಕುಸಿತ ಎಂಬಂತಾಗಿದೆ. ಸದ್ಯ ಸಿಪ್ಪೆ ಸಹಿತವಾದ ಒಂದು ಕಾಯಿಗೆ 8ರಿಂದ 9 ರೂ. ನೀಡಿ ಕೊಂಡೊಯ್ಯುತ್ತಿದ್ದಾರೆ. ಸಿಪ್ಪೆ ತೆಗೆದ ಕಾಯಿಗೆ (ಕಾಯಿಯ ಗಾತ್ರದ ಆಧಾರ ದಲ್ಲಿ) 12ರಿಂದ 14 ರೂ. ಇದೆ.
Related Articles
ತೆಂಗಿನ ಕೊಯ್ಲು ಸದ್ಯ ದುಬಾರಿಯಾಗಿದೆ. ಒಂದು ಮರ ಏರಲು ವಿಭಿನ್ನ ದರ ಇದೆ. ತೀರಾ ಗ್ರಾಮೀಣ ಭಾಗದಲ್ಲಿ ಒಂದು ಮರಕ್ಕೆ 40ರಿಂದ 50 ರೂ. ಇದ್ದರೆ ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾ.ಪಂ. ವ್ಯಾಪ್ತಿಯಲ್ಲಿ 60ರಿಂದ 80 ರೂ. ಇದೆ. ಆದ್ದರಿಂದ ಕೊçಲಿಗೆ ಆಗುವ ಖರ್ಚು ಕೆಲವೊಮ್ಮೆ ತೆಂಗಿನ ಕಾಯಿ ಮಾರಾಟದಿಂದ ಬರುವುದಿಲ್ಲ. ಮಳೆಗಾಲ ಹೊರತು ಬೇರೆ ತಿಂಗಳಲ್ಲಿ ದಿನಬಿಟ್ಟು ದಿನ ಅಥವಾ ಮೂರು ದಿನಕ್ಕೆ ಒಮ್ಮೆಯಾದರೂ ಮರಕ್ಕೆ ನೀರು ಹಾಯಿಸಬೇಕು. ಕಟ್ಟೆ ಕಟ್ಟಿ ಗೊಬ್ಬರ ಹಾಕಬೇಕು. ಸಾಕಷ್ಟು ವೆಚ್ಚ ಮಾಡಬೇಕಾಗುತ್ತದೆ. ಆದರೆ ಕೊçಲು ಆದಾಗ ಮಾತ್ರ ದರ ಇರುವುದಿಲ್ಲ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಾರೆ.
Advertisement
ಸರಕಾರದ ಸ್ಪಂದನೆ ಅಗತ್ಯಶುದ್ಧ ತೆಂಗಿನ ಎಣ್ಣೆ (ಗಾಣದಿಂದ ಮಾಡಿದ ಎಣ್ಣೆ) ಒಂದು ಲೀಟರ್‌ಗೆ ವಿವಿಧ ದರವಿದೆ. ಕನಿಷ್ಠ 280, 300ರಿಂದ 350 ರೂ.ಗಳ ವರೆಗೂ ಇವೆ. ಸಾಮಾನ್ಯ ತೆಂಗಿನ ಎಣ್ಣೆ 180ರಿಂದ 210 ರೂ. ವರೆಗೂ ಇದೆ. ತೆಂಗಿನ ಕಾಯಿಗೆ ದರ ಕಡಿಮೆ ಯಾದರೂ ಎಣ್ಣೆಯ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಬೆಳಗಾರರಿಂದ ಕನಿಷ್ಠ ಬೆಲೆ ನೀಡಿ ಕಾಯಿ ಕೊಂಡೊಯ್ದರೂ ಎಣ್ಣೆ ಬೆಲೆ ಕಡಿಮೆ ಮಾಡುವುದಿಲ್ಲ. ಅಲ್ಲದೆ ಮಾರುಕಟ್ಟೆಯಲ್ಲೂ ಕಾಯಿ ದರ ಕಡಿಮೆಯಾಗುವುದಿಲ್ಲ. ಮಳೆಗಾಲದಲ್ಲಿ ಕೊಬ್ಬರಿ ಮಾರಾಟ ಕಷ್ಟ. ಸರಕಾರ ತೆಂಗು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಬೇಕು ಮತ್ತು ಕಾಯಿಯನ್ನು ಕನಿಷ್ಠ ಬೆಂಬಲ ಬೆಲೆಯಡಿಗೆ ತರಬೇಕು ಎಂಬುದು ಬೆಳೆಗಾರರ ಆಗ್ರಹವಾಗಿದೆ. – ರಾಜು ಖಾರ್ವಿ ಕೊಡೇರಿ