Advertisement

ಫ‌ಲ್ಗುಣಿ ನದಿ ಮಾಲಿನ್ಯ: ಮೀನುಗಾರ ಕಾಲುಗಳಲ್ಲಿ ಒಸರುತ್ತಿದೆ ರಕ್ತ!

10:03 PM Oct 18, 2020 | mahesh |

ಬೆಂಗ್ರೆ: ಮಂಗಳೂರಿನ ಸುತ್ತಮುತ್ತ ತಲೆಯೆತ್ತಿರುವ ನೂರಾರು ಉದ್ದಿಮೆಗಳು ಜಲಮೂಲಗಳಿಗೆ ಮಾರಕವಾಗತೊಡಗಿವೆ.

Advertisement

ದ.ಕ. ಜಿಲ್ಲೆಯ ಫ‌ಲ್ಗುಣಿ ನದಿಯೂ ಇದಕ್ಕೆ ಹೊರತಾಗಿಲ್ಲ. ಕೈಗಾರಿಕೆಗಳು ರಾಸಾಯನಿಕ ತ್ಯಾಜ್ಯಗಳನ್ನು ನದಿಗೆ ಹರಿಸುತ್ತಿದ್ದು, ಮೀನುಗಾರರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಫ‌ಲ್ಗುಣಿಯನ್ನೇ ನಂಬಿರುವ ಸಾವಿರಾರು ಮೀನುಗಾರರ ಬದುಕು ಕಮರಿ ಹೋಗುವ ಆತಂಕ ಎದುರಾಗಿದೆ.

ನೀರಿನಲ್ಲಿ ಗಂಟೆಗಳ ಕಾಲ ನಿಲ್ಲುವ ಮೀನುಗಾರರ ಕಾಲಿನ ಚರ್ಮ ಕೆಂಪಾಗಿ ಹುಣ್ಣುಗಳು ಕಾಣಿಸುತ್ತಿವೆ. ಭಾರೀ ತುರಿಕೆ ಯಿಂದಾಗಿ ಹುಣ್ಣು ಉಲ್ಬಣಿಸಿ ಒಂದೆರಡು ದಿನಗಳಲ್ಲೇ ನೀರಿಗೆ ಇಳಿಯಲು ಅಸಾಧ್ಯ ಎನ್ನುವ ಸ್ಥಿತಿ ಎದುರಾಗುತ್ತದೆ. ಬೆಂಗ್ರೆ ಗ್ರಾಮವೊಂದರಲ್ಲೇ 200ಕ್ಕೂ ಅ ಧಿಕ ಸಾಂಪ್ರದಾಯಿಕ ನಾಡದೋಣಿ ಗಳಿದ್ದು ಸಾವಿರಕ್ಕೂ ಅಧಿಕ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಈಗ ಹೆಚ್ಚಿನವರ ಕಾಲುಗಳಲ್ಲಿ ಹುಣ್ಣುಗಳು ಕಾಣಿಸಿಕೊಂಡಿದ್ದು, ತುರಿಕೆಯಾಗಿ ರಕ್ತ ಒಸರುತ್ತಿದೆ. ಒಂದು ದೋಣಿಯಲ್ಲಿ ನಾಲ್ಕೈದು ಮಂದಿ ಮೀನು ಹಿಡಿಯಲು ಹೋಗುತ್ತಾರೆ. ಅವರಲ್ಲಿ ಒಂದಿಬ್ಬರು ಅನಾರೋಗ್ಯಕ್ಕೀಡಾದರೂ ಸಾಕು; ಉಳಿದ ಇಬ್ಬರಿಗೂ ದುಡಿಮೆ ಇಲ್ಲವಾಗುತ್ತದೆ. ಒಂದೆಡೆ ಒಪ್ಪೊತ್ತು ಅನ್ನಕ್ಕೂ ಪರದಾಟವಾದರೆ ಇನ್ನೊಂದೆಡೆ ದೋಣಿಗಾಗಿ ಮಾಡಿರುವ ಸಾಲದ ಕಂತನ್ನು ತುಂಬುವುದು ಹೇಗೆ ಎಂಬ ಭೀತಿ ಕಾಡುತ್ತಿದೆ.

ಹೋರಾಟಕ್ಕಿಲ್ಲ ಬೆಲೆ
ಈ ಹಿಂದೆ ಹಲವು ಬಾರಿ ಫ‌ಲ್ಗುಣಿ ಮಲಿನವಾಗುತ್ತಿದೆ ಎಂದು ಹೋರಾಟ ನಡೆದರೂ ಪರಿಹಾರ ಸಿಕ್ಕಿಲ್ಲ.

ಒಳಚರಂಡಿಗಳ ಸೋರಿಕೆ
ಬೃಹತ್‌ ಕೈಗಾರಿಕೆಗಳಿರಲಿ, ಯಾವುದೇ ಕಂಪೆನಿಗಳಿರಲಿ ನದಿಗಳಿಗೆ ನೇರವಾಗಿ ತ್ಯಾಜ್ಯ ನೀರನ್ನು ಬಿಡುವಂತಿಲ್ಲ. ಕಾನೂನಿನಂತೆ ಎಲ್ಲ ಕಡೆ ತ್ಯಾಜ್ಯ ಸಂಸ್ಕರಣ ಘಟಕಗಳಿವೆ. ನದಿ ನೀರು ಮಲಿನಗೊಳ್ಳಲು ನಗರದ ಒಳಚರಂಡಿಗಳ ಸೋರಿಕೆ ಕಾರಣವಾಗಿರಬಹುದು. ಮೀನುಗಾರಿಕಾ ಇಲಾಖೆಯು ಈ ಬಗ್ಗೆ ಮುತುವರ್ಜಿ ವಹಿಸಿ ಸಮಸ್ಯೆಯ ಮೂಲವನ್ನು ತಿಳಿದುಕೊಳ್ಳಬೇಕು.
-ಕೀರ್ತಿಕುಮಾರ್‌ , ಅಧಿಕಾರಿ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು

Advertisement

ಕ್ರಮಕ್ಕೆ ಮುಂದಾಗಿನದಿಗೆ ರಾಸಾಯನಿಕ ಬಿಡುತ್ತಿರು ವುದರಿಂದ ಸಾಂಪ್ರ ದಾಯಿಕ ಮೀನುಗಾರಿಕೆ ಸಾಧ್ಯ ವಾಗುತ್ತಿಲ್ಲ. ಕಾಲುಗಳಲ್ಲಿ ಹುಣ್ಣು, ತುರಿಕೆ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಆಡಳಿತ ವ್ಯವಸ್ಥೆಯು ಗಂಭೀರವಾಗಿ ಚಿಂತಿಸಿ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ನಮ್ಮ ಬದುಕಿಗಾಗಿ ಪ್ರತಿಭಟನೆಯ ಮೂಲಕ ಬಿಸಿ ಮುಟ್ಟಿಸುವುದು ಅನಿವಾರ್ಯವಾಗಲಿದೆ.
-ಅಜಿತ್‌ ಎಸ್‌. ಕರ್ಕೇರ, ಅಧ್ಯಕ್ಷರು, ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next