Advertisement

ನೈಕಾ ಸ್ಥಾಪಕಿ ಫಾಲ್ಗುಣಿ ನಾಯರ್‌ ಈಗ ಶ್ರೀಮಂತ ನವೋದ್ಯಮಿ

09:21 PM Mar 16, 2022 | Team Udayavani |

ನವದೆಹಲಿ: 2012ರಲ್ಲಿ ಸೌಂದರ್ಯ ಸಾಧನಗಳ ಆನ್‌ಲೈನ್‌ ಮಾರಾಟ ಕಂಪನಿ ನೈಕಾವನ್ನು ಫಾಲ್ಗುಣಿ ನಾಯರ್‌ ಆರಂಭಿಸಿದ್ದರು. ಅವರೀಗ ಹುರುನ್‌ನ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿರುವ ನವೋದ್ಯಮಿಗಳು ಎನಿಸಿಕೊಂಡಿದ್ದಾರೆ!

Advertisement

ಹಾಗೆಯೇ ಹುರುನ್‌ ಎಂ3ಎಂ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿನ ಅಗ್ರ 10ರ ಪಟ್ಟಿಯಲ್ಲಿ ಫಾಲ್ಗುಣಿ ನಾಯರ್‌ ಹಾಗೂ ಅವರ ಪತಿ ಸಂಜಯ್‌ ನಾಯರ್‌ ಕಾಣಿಸಿಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಹುರುನ್‌ ಎಂ3ಎಂ ಪಟ್ಟಿಯಲ್ಲಿ ಭಾರತದ 6 ಯುನಿಕಾರ್ನ್ (1 ಬಿಲಿಯನ್‌ ಡಾಲರ್‌ ಮೌಲ್ಯ ಹೊಂದಿರುವ ಸ್ಟಾರ್ಟಪ್‌ ಗಳು) ಸ್ಥಾಪಕರು ಕಾಣಿಸಿಕೊಂಡಿದ್ದಾರೆ.

ಫಾಲ್ಗುಣಿ ನಾಯರ್‌ 2012ರಲ್ಲಿ ನೈಕಾ ಮೂಲಕ ಸೌಂದರ್ಯ ಸಾಧನಗಳ ಆನ್‌ಲೈನ್‌ ಮಾರಾಟ ಆರಂಭಿಸಿದ್ದರು. ಒಮ್ಮೆಲೇ ಅವರ ಕಂಪನಿಯ ಮೌಲ್ಯ ಏರಿಕೆಯಾಗಿದೆ. ಜನರ ಬೇಡಿಕೆಯೂ ಗರಿಷ್ಠವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next