Advertisement

ಫಕೀರೇಶ್ವರ ರಥೋತ್ಸವ

11:55 AM May 19, 2019 | Suhan S |

ಶಿರಹಟ್ಟಿ: ಇಲ್ಲಿನ ಶ್ರೀ ಜ| ಫಕೀರೇಶ್ವರರ ಮಹಾರಥೋತ್ಸವ ಶನಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಸಹಸ್ರಾರು ಭಕ್ತರ ಹರಹರ ಮಹಾದೇವ ಎಂಬ ಜಯಘೋಷಗಳ ನಡುವೆ ತೇರನ್ನು ಎಳೆಯಲಾಯಿತು.

Advertisement

ಬೆಳಗ್ಗೆ 8ಕ್ಕೆ ಜ| ಫಕೀರ ಸಿದ್ಧರಾಮ ಸ್ವಾಮೀಜಿ ಶ್ರೀ ಮಠದ ಪೀಠಪರಂಪರೆಯಂತೆ ಹರಿಪುರ ಗ್ರಾಮವನ್ನು ಬಿಟ್ಟು ಶಿರಹಟ್ಟಿಗೆ ಪುರಪ್ರವೇಶ ಮಾಡಿದ್ದು, ಬೃಹತ್‌ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಡೊಳ್ಳಿನ ಮಜಲು, ಝಾಂಜ್‌ ಮೇಳ, ನಂದಿ ಧ್ವಜ ಹಾಗೂ ಆನೆ, ನಗಾರಿ ನಾದ ಗಮನ ಸೆಳೆಯಿತು. ಪಟ್ಟಣದ ಮ್ಯಾಗೇರಿ ಓಣಿಯಲ್ಲಿರುವ ಕರ್ತೃ ಫಕೀರೇಶ್ವರರ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಅಲ್ಲಿಂದ ಮಠಕ್ಕೆ ಬಂದು ಕರ್ತೃ ಫಕ್ಕಿರೇಶ್ವರರ ಪೂಜೆ ಹಾಗೂ ಇನ್ನಿತ್ಯಾದಿ ನಿಯಮಗಳನ್ನು ಕೈಗೊಂಡು ಶೆಟ್ಟರ ಓಣಿಯಲ್ಲಿನ ಬೋರಶೆಟ್ಟರವರ ಮನೆಯಲ್ಲಿ ಪ್ರಸಾದ ಸ್ವೀಕರಿಸಿದರು. ನಂತರ ಮೆರವಣಿಗೆ ಮೂಲಕ ಸಂಜೆ 4.30ಕ್ಕೆ ಮಠಕ್ಕೆ ಆಗಮಿಸಿ ಕೆಲ ಧಾರ್ಮಿಕ ವಿಧಿವಿಧಾನ ಕೈಗೊಂಡು ಲಕ್ಷ್ಮೀ ಪೂಜೆ ಕೈಗೊಂಡು ರಥದ ಕಡೆಗೆ ಸಾಗಿ ಬಂದರು. ನಂತರ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next