Advertisement

PAN Card ನವೀಕರಣ ಎಸ್‌ಎಂಎಸ್‌ ನಕಲಿ: ಕೇಂದ್ರ ಸರಕಾರ ಎಚ್ಚರಿಕೆ

01:36 AM Aug 25, 2024 | Team Udayavani |

ಹೊಸದಿಲ್ಲಿ: “ಮಾಹಿತಿ ಕೊಡದಿದ್ದರೆ ನಿಮ್ಮ ಕ್ರೆಡಿಟ್‌ ಕಾರ್ಡ್‌ ಬ್ಲಾಕ್‌ ಮಾಡಲಾಗುತ್ತದೆ’ ಎಂಬ ವಂಚನೆ ವ್ಯಾಪಕವಾಗಿರುವಂತೆಯೇ ಪ್ಯಾನ್‌ ಕಾರ್ಡ್‌ ಅಪ್‌ಡೇಟ್‌ ಹೆಸರಿನ ವಂಚನೆ ಬೆಳಕಿಗೆ ಬಂದಿದೆ. “ನಿಮ್ಮ ಪ್ಯಾನ್‌ ಕಾರ್ಡ್‌ ಮಾಹಿತಿ ನವೀಕರಿಸದಿದ್ದರೆ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಖಾತೆ ನಿಷ್ಕ್ರಿಯಗೊಳ್ಳಲಿದೆ’ ಎಂಬ ಎಚ್ಚರಿಕೆ ಎಸ್‌ಎಂಎಸ್‌ ನಕಲಿ. ಅದನ್ನು ನಂಬಬಾರದು ಎಂದು ಕೇಂದ್ರ ಸರಕಾರ ಹೇಳಿದೆ. ಪ್ಯಾನ್‌ಕಾರ್ಡ್‌ ನವೀಕರಣಕ್ಕೆ ಸಂಬಂಧಿಸಿ, ಅಂಚೆ ಇಲಾಖೆಯು ಗ್ರಾಹಕರಿಗೆ ಸಂದೇಶ ಕಳಿಸುವುದಿಲ್ಲ ಮತ್ತು ವೈಯಕ್ತಿಕ ಮತ್ತು ಬ್ಯಾಂಕ್‌ ಮಾಹಿತಿಯನ್ನು ಕೋರುವುದಿಲ್ಲ ಎಂದು ಸ್ಪಷ್ಟಪಡಿ­ಸಿದೆ. ಅಲ್ಲದೆ ಇಂತಹ ನಕಲಿ ಸಂದೇಶಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕೆಂದು ಕೋರಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next