Advertisement

ಲಾಟರಿ ಹೆಸರಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರಿಗೆ ಪಂಗನಾಮ! 28 ಲಕ್ಷಕ್ಕೂ ಅಧಿಕ ವಂಚನೆ

03:53 PM Nov 12, 2020 | sudhir |

ಬ್ಯಾಡಗಿ: ಲಾಟರಿ ಹೆಸರಿನಲ್ಲಿ ವಂಚಕರ ತಂಡವೊಂದು ಬ್ಯಾಡಗಿ ಸೇರಿದಂತೆ ಹಿರೇಕೆರೂರ, ರಟ್ಟಿಹಳ್ಳಿ, ರಾಣೆಬೆನ್ನೂರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರಿಗೆ 28 ಲಕ್ಷಕ್ಕೂ ಅಧಿಕ ಮೊತ್ತದ ಪಂಗನಾಮ
ಹಾಕಿದ ಘಟನೆ ಬೆಳಕಿಗೆ ಬಂದಿದೆ.

Advertisement

ಶ್ರೀ ಸಾಯಿ ಎಂಟರ್‌ಪ್ರೈಸಸ್‌ ಎಂಬ ಕಂಪನಿ ಹೆಸರಿನಲ್ಲಿ ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಿಗೆ ತೆರಳಿರುವ ವಂಚಕರ ತಂಡ ಲಾಟರಿ ಹೆಸರಿನಲ್ಲಿ ಮುಗ್ಧ ಗ್ರಾಮೀಣ ಮಹಿಳೆಯರು ಸೇರಿದಂತೆ ರೈತರಿಗೆ ಬೈಕ್‌, ವಾಹನ ಹಾಗೂ ಇನ್ನು ಅನೇಕ ಬಹುಮಾನದ ಆಸೆ ತೋರಿಸಿ 28 ಲಕ್ಷಕ್ಕೂ ಅಧಿಕ ಪಂಗನಾಮ ಹಾಕಿದ್ದಾರೆ.

ಬೈಕ್‌ ಹಾಗೂ ಇನ್ನಿತರ ಬಹುಮಾನದ ಆಸೆಗಾಗಿ ಜಿಲ್ಲೆಯ ವಿವಿಧ ಗ್ರಾಮಗಳ ಜನರು ತಲಾ 700 ರೂ.ಗಳಂತೆ ಪಾವತಿ ಮಾಡಿದ್ದು,
ಅವರಿಗೆ ಒಂದು ಬುಕ್‌ಲೆಟ್‌ ನೀಡಲಾಗಿದೆ. ಉಳಿದಂತೆ ರಶೀದಿಯಲ್ಲಿ ಬ್ಯಾಡಗಿ ವಿದ್ಯಾನಗರದ ವಿಳಾಸ ನಮೂದಿಸಲಾಗಿದೆ.

ವಂಚಕರ ಜಾಲಕ್ಕೆ ಸಿಲುಕಿರುವ ಸಾವಿರಾರು ಸಾರ್ವಜನಕರು ಮೊದಲು 100 ರೂ ತುಂಬಿ ನಂತರ 600 ರೂಗಳನ್ನು ತುಂಬಿ ರಶೀದಿ ಪಡೆದುಕೊಂಡಿದ್ದಾರೆ. ನ. 11ರಂದು ಡ್ರಾ ಇದೆ ಎಂದು ಬ್ಯಾಡಗಿ ವಿದ್ಯಾನಗರ ವಿಳಾಸಕ್ಕೆ ಬಂದ ಜನರಿಗೆ ತಾವು ಮೋಸ ಹೋಗಿರುವ ವಿಷಯ ತಿಳಿದು ಬಂದಿದೆ.

ಇದನ್ನೂ ಓದಿ: ಆತಂಕ ಹೆಚ್ಚಿಸಿದ ರೈತರ ಆತ್ಮಹತ್ಯೆ ಸಂಖ್ಯೆ ! ರೈತರಿಗೆ ಆರ್ಥಿಕ ಸಂಕಷ್ಟ

Advertisement

ವಿದ್ಯಾನಗರದಲ್ಲಿನ ವಿಳಾಸ ಪತ್ತೆಯಾಗದ ಕಾರಣ ದೂರವಾಣಿಗೆ ಕರೆ ಮಾಡಿದ್ದಾರೆ. ಆದರೆ ವಂಚಕರು ನೀಡಿದ್ದ ಎಲ್ಲ ದೂರವಾಣಿ ಸಂಖ್ಯೆಗಳು ಸ್ವಿಚ್‌ ಆಫ್‌ ಆಗಿದ್ದ ಹಿನ್ನೆಲೆಯಲ್ಲಿ ಆತಂಕಗೊಂಡ ಜನರು ಪೊಲೀಸ್‌ ಠಾಣೆ ಎದುರು ಜಮಾಯಿಸಿ ತಮ್ಮ ಅಳಲನ್ನು ಪೊಲೀಸ್‌ ಎದುರು ತೋಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಹಣ ಕಳೆದುಕೊಂಡ ಕಾಟೇನಹಳ್ಳಿ ಗ್ರಾಮದ ಚಂದ್ರು ಕಲ್ಲಾಪುರ, ಹಳ್ಳಿ ಜನರ ಮುಗ್ಧತೆಯನ್ನು ವಂಚಕರು ಬಂಡವಾಳ ಮಾಡಿಕೊಂಡು ಜಿಲ್ಲೆಯಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹಳ್ಳಿಗೆ ಬರುತ್ತಿದ್ದ ಇವರು
ಜನರಿಗೆ ವಂಚನೆಯ ಸುಳಿವು ಸಿಗದಂತೆ ಹಣ ಕಟ್ಟಿಸಿಕೊಂಡು ಯಾಮಾರಿಸಿದ್ದಾರೆ ಅವರು ತಂದಿದ್ದ ಬೈಕ್‌ ನಂಬರ್‌ ಸೇರಿದಂತೆ
ವಿವಿಧ ದಾಖಲೆಗಳು ನಮ್ಮ ಬಳಿಯಿದ್ದು, ಇವುಗಳನ್ನು ಆಧರಿಸಿ ಅವರ ಪತ್ತೆ ಹಚ್ಚುವಂತೆ ಆಗ್ರಹಿಸಿದರು.

ವಂಚಕರ ಜಾಲ ಪತ್ತೆ ಹಚ್ಚಿ
ಲಕ್ಷಾಂತರ ರೂ. ಪಂಗನಾಮ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿರಾರು ಜನರು ಬ್ಯಾಡಗಿ ಪೊಲೀಸ್‌ ಠಾಣೆಗೆ ತೆರಳಿ ವಂಚಕರ ವಿರುದ್ಧ ದೂರು ಸಲ್ಲಿಸಿದ್ದು, ವ್ಯವಸ್ಥಿತವಾದ ವಂಚಕರ ಜಾಲ ಪತ್ತೆ ಹಚ್ಚುವಂತೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next