Advertisement

ನಕಲಿ ಅಂಗವಿಕಲ ದೃಢೀಕರಣ ಪತ್ರ: ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು

05:07 PM Dec 28, 2022 | Team Udayavani |

ಮಧುಗಿರಿ : ತಾಲೂಕು ಆಸ್ಪತ್ರೆಯಲ್ಲಿ ನಿರಂತರವಾಗಿ ಲಂಚದ ಹಣಕ್ಕಾಗಿ ನಡೆಯುತ್ತಿರುವ ನಕಲಿ ವಯಸ್ಸಿನ ದೃಢೀಕರಣ ಪತ್ರ ಮತ್ತು ಅಂಗವಿಕಲ ದೃಢೀಕರಣ ಪತ್ರ ನೀಡುತ್ತಿರುವ ಬಗ್ಗೆ ಬುಧವಾರ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

Advertisement

ಠಾಣಾಧಿಕಾರಿಗಳು ಎಫ್ ಐಆರ್ ದಾಖಲಿಸುವ ಭರವಸೆ ನೀಡಿದ್ದಾರೆ ಒಂದು ವೇಳೆ ಎಫ್ ಐಆರ್ ದಾಖಲಿಸದಿದ್ದಲ್ಲಿ ಮುಂದಿನ ಕಾನೂನು ಹೋರಾಟ ಮುಂದುವರೆಸಲಾಗುವುದು.ಮಧುಗಿರಿ ಪಟ್ಟಣದ ಲಿಂಗೇನಹಳ್ಳಿ ಬಡಾವಣೆಯ ಹನುಮಂತರಾಯಪ್ಪ ಎಂಬುವರು 2018 ರಲ್ಲಿ ಮರಣ ಹೊಂದಿದ್ದು ಇವರ ಮಗನಾದ ಮಹೇಶ್ ಎಂಬುವರು ಮೊದಲಿನಿಂದಲೂ ಹೋರಾಟದ ಮನೋಭಾವ ಹೊಂದಿರುವ ಪ್ರಜ್ಞಾವಂತ ನಾಗರಿಕರಾಗಿದ್ದು ಇಂತಹ ಅಕ್ರಮ ಎಸಗಿರುವವರಿಗೆ ಪಾಠ ಕಲಿಸಬೇಕೆಂಬ ಉದ್ದೇಶದಿಂದ ತಾಲೂಕು ಆಸ್ಪತ್ರೆಯ ನೌಕರನೆಂದು ಹೇಳಿಕೊಳ್ಳುವ ರಾಜಣ್ಣ ಎಂಬುವ ವ್ಯಕ್ತಿಯನ್ನು ಸಂಪರ್ಕಿಸಿದಾಗ ಸದರಿ ರಾಜಣ್ಣ 5000 ರೂ ಹಾಗು ಆಧಾರ್ ಕಾರ್ಡ್ ನೀಡಿ ನಿಮ್ಮ ತಂದೆಯವರ ವಯಸ್ಸಿನ ದೃಢೀಕರಣ ಪತ್ರ ಮಾಡಿಸಿ ಕೊಡುತ್ತೇನೆಂದು ತಿಳಿಸಿರುತ್ತಾರೆ ಅದರಂತೆ ಒಟ್ಟು ಹತ್ತು ಸಾವಿರ ಹಣ ನೀಡಿ ಪ್ರತ್ಯೇಕವಾಗಿ ಎರಡು ಬಾರಿ ಮಹೇಶ್ ತಂದೆಯ ಹೆಸರಿಗೆ ವಯಸ್ಸಿನ ದೃಢೀಕರಣ ಪತ್ರವನ್ನು ಇಬ್ಬರು ವೈದ್ಯರ ಸಹಿಯೊಂದಿಗೆ ಹಾಗು ಕಚೇರಿ ಮೊಹರಿನೊಂದಿಗೆ ಪಡೆದಿರುತ್ತಾರೆ.

ಬಹು ಮುಖ್ಯವಾಗಿ ಗಮನಿಸಬೇಕಾದ ಮುಖ್ಯ ವಿಷಯವೇನೆಂದರೆ ಈ ಹಿಂದೆ ಹೋರಾಟಗಾರನಾದ ನಾನು ಇದೇ ತಾಲೂಕು ಆಸ್ಪತ್ರೆಯಲ್ಲಿ ದೃಢೀಕರಣ ಪತ್ರ ನೀಡಲು ಹಣ ಪಡೆದು ನೀಡುತ್ತಿದ್ದಾರೆಂಬ ಆರೋಪ ಹೊರಿಸಿ ತುಮಕೂರು DHO ರವರಿಗೆ ದೂರು ನೀಡಿದ ಮೇರೆಗೆ ಅಂದಿನ DHO ರವರು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಿಂದ ವಿಚಾರಣೆಗೆ ನಿರ್ದೇಶಿದಾಗ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಆಡಳಿತ ವೈದ್ಯಾಧಿಕಾರಿ ಗಂಗಾಧರ್,ಡಾ. ಪುರುಷೋತ್ತಮ್,ಡಾ. ಮಹೇಶ್ ಸಿಂಗ್,ಡಾ.ರತ್ನಾವತಿ ಎಂಬುವರನ್ನು ವಿಚಾರಣೆಗೆ ಒಳ ಪಡಿಸಿ ಆಸ್ಪತ್ರೆಯಲ್ಲಿನ ಮದ್ಯವರ್ತಿಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಆಡಳಿತ ವೈದ್ಯಾಧಿಕಾರಿಗೆ ಎಚ್ಚರಿಕೆ ನೀಡಲಾಗಿತ್ತು ಆದರೆ ಇಲ್ಲಿನ ಆಸ್ಪತ್ರೆಯ ವೈದ್ಯರು ಹಳೆಯ ಚಾಳಿ ಮುಂದುವರೆಸಿದ್ದರು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next