Advertisement

ನಕಲಿ ವಜ್ರದಕಲ್ಲು ಮಾರಾಟಕ್ಕೆ ಯತ್ನ

03:13 PM May 06, 2021 | Team Udayavani |

ಚಿಕ್ಕಬಳ್ಳಾಪುರ: ವಜ್ರ ಎಂದು ನಂಬಿಸಿಕಲ್ಲನ್ನು ಕೋಟ್ಯಂತರ ರೂ. ಬೆಲೆಗೆಮಾರಲು ಯತ್ನಿಸಿದ ಐವರು ವಂಚಕರನ್ನು ಗ್ರಾಮಾಂತರ ಪೊಲೀಸರು ಬಂಧಿ ಸಿನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯತಂಬಾಲಪಲ್ಲಿ ತಾಲೂಕಿನ ಬೀರಂಗಿಗ್ರಾಮದ ಸಿ.ಅರವಿಂದ್‌(21), ಚಿಂತಾಮಣಿ ತಾಲೂಕಿನ ಹೊಸಹುಡ್ಯ ಗ್ರಾಮದಮಂಜುನಾಥ್‌(35), ಚಿಕ್ಕಬಳ್ಳಾಪುರತಾಲೂಕು ಸಾಮಸೇನಹಳ್ಳಿ ಗ್ರಾಮದಹೊನ್ನಪ್ಪ(63), ಕಮ್ಮತನಹಳ್ಳಿಯಶಿವಣ್ಣ(38), ಶಿಡ್ಲಘಟ್ಟ ತಾಲೂಕಿನ ಲಗಿನಾಯಕನಹಳ್ಳಿಯ ಚಿನ್ನಪ್ಪರೆಡ್ಡಿ(45)ಬಂಧಿ ತರು.ಚಿಕ್ಕಬಳ್ಳಾಪುರ ತಾಲೂಕಿನ ಸಾಮಸೇನಹಳ್ಳಿ ಗ್ರಾಮದಲ್ಲಿ ಬಾಗೇಪಲ್ಲಿ ತಾಲೂಕಿನಗೂಳೂರು ಗ್ರಾಮದ ಪ್ರಶಾಂತ್‌ ಎಂಬಾತ ‌ನಿಗೆ ಆರೋಪಿಗಳು 6 ಕೋಟಿ ರೂ.ಬೆಲೆ ಬಾಳುವ ವಜ್ರದ ಕಲ್ಲು ಇರುವುದಾಗಿ ನಂಬಿಸಿ, ಮೋಸ ಮಾಡಲು ಯತ್ನಿಸಿದ್ದಾರೆ.

ಇದರಿಂದ ಅನುಮಾನಗೊಂಡಪ್ರಶಾಂತ್‌ ಗ್ರಾಮಾಂತರ ಠಾಣೆಗೆ ದೂರುನೀಡಿದ್ದು, ಎಸ್ಪಿ ಮಿಥುನ್‌ಕುಮಾರ್‌,ಡಿವೈ ಎಸ್ಪಿ ರವಿಶಂಕರ್‌ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಬಿ.ಪಿ.ಮಂಜುನೇತೃತ್ವದ ತಂಡ ಆರೋಪಿಗಳನ್ನುದೊಡ್ಡಪೈಲಗುರ್ಕಿ ಗೇಟ್‌ನಲ್ಲಿ ಬಂ ಧಿಸಿಅವರ ಬಳಿ 4 ಲಕ್ಷ ರೂ.ನ ಕಾರು, ನಕಲಿವಜ್ರದ ಕಲ್ಲು, ಒಂದು ಶೆಲ್‌ ಬ್ಯಾಟರಿವಶ ಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸರಿಗೆ ಎಸ್ಪಿನಗದು ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next