Advertisement

ಜೀವಂತ ವ್ಯಕ್ತಿ ಹೆಸರಲ್ಲಿ ನಕಲಿ ಮರಣ ಪ್ರಮಾಣ ಪತ್ರ ಪ್ರಕರಣ: ಆರೋಪಿ 7 ದಿನ ಪೊಲೀಸ್ ಕಸ್ಟಡಿಗೆ

07:39 PM Jan 29, 2022 | Team Udayavani |

ಭಟ್ಕಳ: ಜಾಲಿ ಪಟ್ಟಣ ಪಂಚಾಯತ್‌ನಲ್ಲಿ ಜಾಲಿ ಜಂಗನಗದ್ದೆಯ ನಕಲಿ ವಿಳಾಸವನ್ನು ನೀಡಿ ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆದಿದ್ದ ಪ್ರಕರಣದಲ್ಲಿ ಎರಡನೇ ಆರೋಪಿ ಮರಣ ಪ್ರಮಾಣ ಪತ್ರದಲ್ಲಿ ಹೆಸರಿರುವ ಹಾಸನದ ಎಚ್.ವಿ. ಹರ್ಷವರ್ಧನ್ ಅವರನ್ನು ಇಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ತನಿಖೆಗಾಗಿ 7 ದಿನಗಳ ಪೊಲೀಸ್ ಕಸ್ಟಡಿ ನೀಡಿದೆ.

Advertisement

ಜಾಲಿ ಪಟ್ಟಣ ಪಂಚಾಯತ್‌ನಲ್ಲಿ ಮೀನಾಕ್ಷಿ ಬಿ.ಎಚ್. ಎನ್ನುವವರು ತಾನು ಎಚ್.ವಿ. ಹರ್ಷವರ್ಧನ ಈತನ ತಾಯಿಯಾಗಿದ್ದು ಆತನು ಜಾಲಿಯ ಜಂಗನಗದ್ದೆಯಲ್ಲಿ ವಾಸವಾಗಿರುವ ಭಾಡಿಗೆ ಮನೆಯಲ್ಲಿ ಮೃತ ಪಟ್ಟಿರುವುದಾಗಿ ಅರ್ಜಿ ಸಲ್ಲಿಸಿದ್ದು ನಂತರ ಅರ್ಜಿಯ ವಿಚಾರಣೆಯಾಗಿ, ಸ್ಥಳ ಪಂಚನಾಮೆಯಿಂದ ಆತ ಮೃತ ಪಟ್ಟಿರುವುದನ್ನು ದೃಢಪಡಿಸಿ ಆತನ ಮರಣ ಪ್ರಮಾಣ ಪತ್ರವನ್ನು ನೀಡಲಾಗಿತ್ತು. ನಂತರ ವಿಮಾ ಕಂಪೆನಿಗೆ ಅವರು ಅರ್ಜಿ ಸಲ್ಲಿಸಿ ವಿಮೆಯ ಹಣವನ್ನು ಪಡೆಯಲು ಪ್ರಯತ್ನಿಸಿದಾಗ ಮರಣ ಪ್ರಮಾಣ ಪತ್ರ ನಕಲಿ ಎನ್ನುವುದನ್ನು ಮನಗಂಡ ವಿಮಾ ಕಂಪೆನಿಯ ಮರಣ ಪ್ರಮಾಣ ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಜಾಲಿ ಪಟ್ಟಣ ಪಂಚಾಯತಕ್ಕೆ ಪತ್ರ ಬರೆದಿದ್ದು ನಂತರ ಕೂಲಂಕುಷವಾಗಿ ಪರಿಶೀಲಿಸುವಾಗ ಮರಣ ಪ್ರಮಾಣ ಪತ್ರವೇ ನಕಲಿ ಎನ್ನುವುದು ಬೆಳಕಿಗೆ ಬಂದಿತ್ತು.

ಜಾಲಿ ಆರೋಗ್ಯ ನಿರೀಕ್ಷಕ ವಿನಾಯಕ ನಾಯ್ಕ ಅವರು ನಗರ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದರು.

ಇದನ್ನೂ ಓದಿ : ಪ್ರೀತಿಸುವಂತೆ ಬಾಲಕಿಯನ್ನು ಪೀಡಿಸುತ್ತಿದ್ದ ಆರೋಪಿಗಳಿಗೆ  ಫೋಕ್ಸೋ ಕಾಯ್ದೆಯಡಿ ಶಿಕ್ಷೆ

ನಗರ ಠಾಣೆಯ ಪೊಲಿಸರು ಆರೋಪಿ ನಂ.1 ಮೀನಾಕ್ಷಿ ಬಿ.ಎಚ್, ಹಾಗೂ ಆರೋಪಿ ನಂ.2 ಎಚ್.ವಿ. ಹರ್ಷವರ್ಧನ ಇವರ ಮೇಲೆ 420 ರೆಡವಿತ್ ಐ.ಪಿ.ಸಿ. ಸೆಕ್ಷನ್ 34 ಹಾಗೂ ಸೆಕ್ಷನ್ 465, 468 ರೆಡ್‌ವಿತ್ 120(ಬಿ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯು ಈಗಾಗಲೇ ಪ್ರಕರಣವೊಂದರಲ್ಲಿ ಮೈಸೂರು ಸೆಂಟ್ರಲ್ ಜೈಲ್‌ನಲ್ಲಿದ್ದು ಬಾಡಿ ವಾಟಂಟ್ ಹೊರಡಿಸಿ ಆತನನ್ನು ಹಾಜರು ಪಡಿಸಲಾಗಿದ್ದು ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಫವಾಜ್ ಪಿ.ಎ. ಅವರು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next