Advertisement

ಅಸ್ಸಾಮ್‌ನಲ್ಲಿ 2,000 ರೂ. ಗಳ 4.4 ಲಕ್ಷ ರೂ. ನಕಲಿ ನೋಟು ಪತ್ತೆ

04:30 PM Mar 17, 2017 | Team Udayavani |

ಗುವಾಹಟಿ : ಭಾರತ – ಬಾಂಗ್ಲಾದೇಶದ ಗಡಿಗೆ ತಾಗಿಕೊಂಡಿರುವ ಅಸ್ಸಾಂ ನ ಧೂಬ್ರಿ ಜಿಲ್ಲೆಯ ಗ್ರಾಮವೊಂದರಲ್ಲಿ ಬಿಎಸ್‌ಎಫ್ ಸಿಬಂದಿಗಳು 4.4 ಲಕ್ಷ ರೂ. ಮುಖಬೆಲೆಯ 2,000 ರೂ.ಗಳ ಭಾರತೀಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ನಿನ್ನೆ ಗುರುವಾರ ರಾತ್ರಿ ಖುಶ್‌ನಿಮಾರಾ ಗ್ರಾಮದಲ್ಲಿ  ಕೈಗೊಳ್ಳಲಾಗಿದ್ದ ಕಾರ್ಯಾಚರಣೆಯಲ್ಲಿ  2,000 ರೂ.ಗಳ 220 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಯಿತು. 

ಕೊರಿಯರ್‌ನಲ್ಲಿ  ಬಂದ ನಕಲಿ ನೋಟುಗಳ ಈ ಕಟ್ಟು ಬಾಂಗ್ಲಾದೇಶದಿಂದ ರವಾನೆಯಾಗಿದ್ದು ಧೂಬ್ರಿಯಲ್ಲಿ ಯಾರೋ ಒಬ್ಬರಿಗೆ ತಲುಪುವುದಿತ್ತು. ಕೊರಿಯರ್‌ ಹುಡುಗ ಈ ಪಾರ್ಸೆಲ್‌ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ವಶಕ್ಕೆ ತೆಗೆದುಕೊಳ್ಳಲಾದ ನಕಲಿ ನೋಟುಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next