Advertisement

Wildfires; ಲಾಸ್‌ ಏಂಜಲೀಸ್‌ ಬೆಂಕಿಗೆ 10000 ಕೋಟಿ ಬಂಗಲೆ ಭಸ್ಮ

01:26 AM Jan 12, 2025 | Team Udayavani |

ಲಾಸ್‌ ಏಂಜಲೀಸ್‌: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್‌ ಏಂಜಲೀಸ್‌ನಲ್ಲಿ 5 ಕಡೆ ಹೊತ್ತಿ ಉರಿ ಯುತ್ತಿರುವ ಕಾಡ್ಗಿಚ್ಚು, ರೌದ್ರಾವತಾರವನ್ನು ಮುಂದುವರಿ ಸಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಐತಿಹಾಸಿಕ ಕಟ್ಟಡಗಳು ಭಸ್ಮವಾಗಿವೆ. ಈ ಪೈಕಿ ಲಾಸ್‌ ಏಂಜಲೀಸ್‌ನ 10375 ಕೋಟಿ ರೂ. (125 ಮಿಲಿಯನ್‌ ಡಾಲರ್‌) ಮೌಲ್ಯದ ಅದ್ಧೂರಿ ಬಂಗಲೆಯೂ ಸೇರಿದೆ. ಅದು ಲೂಮಿನರ್‌ ಟೆಕ್ನಾಲಜೀಸ್‌ನ ಸಿಇಒ ಆಸ್ಟಿನ್‌ ರಸೆಲ್‌ ಅವರಿಗೆ ಸೇರಿ ದ್ದಾಗಿದೆ. ಅದು ಒಟ್ಟು 18 ರೂಮ್‌ಗಳನ್ನು ಹೊಂದಿತ್ತು. ಇದಲ್ಲದೆ, ಸಮುದ್ರದತ್ತ ಮುಖ ಮಾಡಿರುವ ಕೋಟಿ ಗಟ್ಟಲೇ ಬೆಲೆ ಬಾಳುವ ಬಂಗಲೆಗಳಿಗೆ ಪ್ರಸಿದ್ಧವಾಗಿರುವ ಫೆಸಿಫಿಕ್‌ ಫಾಲಿಸೈಡ್‌ ಹಾಗೂ ಇದರ ಪಕ್ಕದ ಮಲಿಬು ನಗರದ ಹಲವು ಪ್ರದೇಶಗಳು ಈಗ ಭಸ್ಮವಾಗಿವೆ.

Advertisement

ಗಾಳಿಯ ವೇಗ ಕಾರಣ: ಸಂತಾ ಅನಾ ಸುಂಟರಗಾಳಿಯ ವೇಗವೂ ಹೆಚ್ಚಿದ್ದೂ, ಬೆಂಕಿ ವೇಗವಾಗಿ ಹರಡಲು ಕಾರಣವಾಗಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಳೆಬರುವ ಸಾಧ್ಯತೆಯೂ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. 1930ರಲ್ಲಿ ನಿರ್ಮಾಣವಾಗಿದ್ದ ಕಟ್ಟಡಗಳು ಈಗ ಬೂದಿಯಾಗಿವೆ. ಶತಮಾನಗಳ ಕಾಲ ಸಿನಿಮಾ ರಂಗಕ್ಕೆ ಕೊಡುಗೆ ನೀಡಿರುವ ಲಾಸ್‌ ಏಂಜಲೀಸ್‌, ಎಲ್ಲಾ ಕಡೆ ಐತಿಹಾಸಿಕ ಗುರುತುಗಳನ್ನು ಉಳಿಸಿಕೊಂಡಿದೆ. ಇವೆಲ್ಲವೂ ಈಗ ನಾಶವಾಗುತ್ತಿದೆ. ಹಾಲಿವುಡ್‌ ಹಿಲ್ಸ್‌ನಲ್ಲಿ ಎದ್ದಿದ್ದ ಕಾಡ್ಗಿಚ್ಚನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಈವರೆಗೆ ಸುಮಾರು 1.8 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ.
ಜೆಟ್‌ ಪ್ರೊಪಲÒನ್‌ ಕೇಂದ್ರಕ್ಕೆ ಬಾಗಿಲು: ಭಾರಿ ಬೆಂಕಿ ಯಿಂದಾಗಿ ನಾಸಾದ ಜೆಟ್‌ ಪ್ರೊಪಲÒನ್‌ ಲ್ಯಾಬೊರೇಟರಿ ಮತ್ತು ಕ್ಯಾಲಿಫೋರ್ನಿಯಾದ ಐತಿಹಾಸಿಕ ಮೌಂಟ್‌ ವಿಲ್ಸನ್‌ ವೀಕ್ಷಣಾಲಯಕ್ಕೆ ಪ್ರವೇಶವನ್ನು ರದ್ದು ಮಾಡಲಾಗಿದೆ.

13 ಲಕ್ಷ ಕೋಟಿ ರೂ. ನಷ್ಟ?: ಲಾಸ್‌ ಏಂಜಲೀಸ್‌ನಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ 13 ಲಕ್ಷ ಕೋಟಿ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಇದೇ ವೇಳೆ, ಬೆಂಕಿ ದುರಂತದಿಂದ ಅಸುನೀಗಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಈಜುಪಟುವಿನ 10 ಒಲಿಂಪಿಕ್ಸ್‌ ಪದಕ ಭಸ್ಮ
ಕ್ಯಾಲಿಫೋರ್ನಿಯಾ ಬೆಂಕಿಗೆ ಒಲಿಂಪಿಕ್ಸ್‌ ಕ್ರೀಡಾಪಟುಗಳು ತುತ್ತಾಗಿದ್ದಾರೆ. ಅಮೆರಿಕದ ಖ್ಯಾತ ಈಜುಪಟು, ಗ್ಯಾರಿ ಹಾಲ್‌ ಜೂನಿಯರ್‌ ಅವರು ಗೆದ್ದಿದ್ದ 10 ಚಿನ್ನದ ಪದಕಗಳು ಬೆಂಕಿಗಾಹುತಿಯಾಗಿದೆ. ಅವರು 2004ರಲ್ಲಿ ಅಥೆನ್ಸ್‌, 2000ದಲ್ಲಿ ಸಿಡ್ನಿ, 1996ರಲ್ಲಿ ಅಟ್ಲಾಂಟಾದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದಿದ್ದರು.

Advertisement

ಮನೆ ಕಳೆದುಕೊಂಡವರಿಗಾಗಿ ನಿಧಿ ಸಂಗ್ರಹ ಆರಂಭಿಸಿದ ಉದ್ಯಮಿ ಪ್ಯಾರಿಸ್‌ ಹಿಲ್ಟನ್‌
ಕ್ಯಾಲಿಫೋರ್ನಿಯಾ ಬೆಂಕಿಯಲ್ಲಿ ತನ್ನ ಮನೆಯನ್ನು ಕಳೆದುಕೊಂಡ ಅಮೆರಿಕದ ಉದ್ಯಮಿ ಪ್ಯಾರಿಸ್‌ ಹಿಲ್ಟನ್‌ ಅವರು, ಮನೆ ಕಳೆದುಕೊಂಡ ಇತರರಿಗಾಗಿ ನಿಧಿ ಸಂಗ್ರಹಿಸಲು ಆರಂಭಿಸಿದ್ದಾರೆ. ಸಂತ್ರಸ್ತರಿಗೆ ಸದ್ಯಕ್ಕೆ 86.19 ಲಕ್ಷ ರೂ. ಹೊಂದಿಸುವುದಾಗಿ ಭರವಸೆ ನೀಡಿದ್ದಾರೆ. ವಿನಾಶಕಾರಿ ಬೆಂಕಿಯಿಂದ ನೂರಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಅವರನ್ನು ನೋಡಲು ಈಗ ಧೈರ್ಯ ಸಾಲುತ್ತಿಲ್ಲ. ಹೀಗಾಗಿ ಅವರ ಬೆಂಬಲಕ್ಕೆ ನಿಂತಿದ್ದೇನೆ. ಅವರಿಗೋಸ್ಕರ ನಿಧಿ ಸಂಗ್ರಹಿಸಲು ಮುಂದಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.