Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 11ರಂದು ಶಿವರಾತ್ರಿ ದಿನ ಶ್ರೀಮಠದಲ್ಲಿ ನಡೆದ ಭಕ್ತರ ಸಭೆಯಲ್ಲಿ ಈ ಬಾರಿ ಏ. 12ರಿಂದ ಸದಾಶಿವ ಮುತ್ಯಾನ ಜಾತ್ರೆಯನ್ನು ಕೋವಿಡ್ ನಿಯಮ ಪಾಲನೆ ಸಹಿತ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
Related Articles
Advertisement
ಏ. 15ರಂದು ಸರಳ ಸಾಮೂಹಿಕ ವಿವಾಹ, ಶ್ರೀಗಳಿಂದ ಕಾಲಜ್ಞಾನದ ಹೇಳಿಕೆ ನಡೆಯಲಿದ್ದು, ಏ. 16ರಂದು ಬೆಳಗ್ಗೆ 11ಕ್ಕೆ ಗ್ರಾಮೀಣ ಸಾಹಸ ಕ್ರೀಡೆಯಾದ ಭಾರ ಎತ್ತುವ ಸ್ಪರ್ಧೆ, ಜಂಗೀ ಕುಸ್ತಿ ನಡೆಯಲಿವೆ. ಸಂಜೆ 7ಕ್ಕೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಮದ್ದುಸುಡುವ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಈ ಬಾರಿ ಜಾನುವಾರು ಜಾತ್ರೆಗೆ ವಿಶೇಷ ಒತ್ತು ನೀಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಎಲ್ಲೂ ಜಾನುವಾರು ಜಾತ್ರೆ ನಡೆದಿಲ್ಲ. ಸಿದ್ದೇಶ್ವರ ಜಾತ್ರೆಯ ಜಾನುವಾರು ಜಾತ್ರೆ, ಫಂಡರಪುರ ಜಾತ್ರೆಯೂ ನಡೆದಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದ್ದು, ಕತಕನಹಳ್ಳಿ ಜಾತ್ರೆಯಲ್ಲಿ ಮೊದಲ ಬಾರಿಗೆ ಜಾನುವಾರು ಜಾತ್ರೆ ಹಮ್ಮಿಕೊಂಡು ರೈತರಿಗೆ ಅನುಕೂಲ ಕಲ್ಪಿಸಲಾಗಿದೆ.
ಇದಕ್ಕಾಗಿ ರಾಸುಗಳಿಗೆ ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಸೇರಿದಂತೆ ಅಗತ್ಯ ಇರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಸುಕ್ಷೇತ್ರ ಕತಕನಹಳ್ಳಿ ಮಠಕ್ಕೆ ಶ್ರೇಷ್ಠ ಆಧ್ಯಾತ್ಮಿಕ ಪರಂಪರೆ ಇದೆ. ರೈತರಿಗೆ ಅನುಕೂಲವಾಗುವ ಕಾರ್ಯಕ್ರಮ, ಕೆಸರಿನ ಓಟದಂತಹ ಗ್ರಾಮೀಣ ಕ್ರೀಡೆಗಳಿಗೆ ಪೊÅàತ್ಸಾಹ, ಸರಳ ಸಾಮೂಹಿಕ ವಿವಾಹ, ಪ್ರವಚನಾಮೃತ ಹೀಗೆ ಅನೇಕ ರೀತಿಯಿಂದಲೂ ಜಾತ್ರೆ ವೈಶೀಷ್ಟÂತೆಯಿಂದ ನಡೆಯುತ್ತಾ ಬಂದಿದೆ ಎಂದರು.