Advertisement
ಅವರು ಬುಧವಾರ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ದ್ವಿತೀಯ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಸರಕಾರದ ಲಕ್ಷಾಂತರ ರೂ. ಅನುದಾನ ಖರ್ಚು ಮಾಡಿ ಎಪಿಎಂಸಿ ಆವರಣದಲ್ಲಿ ಮಾರುಕಟ್ಟೆ ನಿರ್ಮಿಸಿದ್ದು, ಅದು ಪಾಳು ಬಿದ್ದಿದೆ. ಜತೆಗೆ ರಸ್ತೆ ಬದಿಯಲ್ಲೇ ಸಂತೆ ನಡೆಯುತ್ತಿರುವುದರಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಹೀಗಾಗಿ ಅದರ ಕುರಿತು ಮುಂದೆ ಚರ್ಚೆ ನಡೆಸೋಣ ಎಂದರು.
Related Articles
ಗುರುವಾಯನಕೆರೆಯಲ್ಲಿ ಮಂಗಳೂರಿನಿಂದ ಆಗಮಿಸುವ ಬಸ್‌ಗಳನ್ನು ಗ್ರಾ.ಪಂ.ಗೆ ತೆರಳುವ ರಸ್ತೆ ಬಳಿಯಲ್ಲಿ ನಿಲ್ಲಿಸುವ ಬದಲು ಜಂಕ್ಷನ್‌ನಲ್ಲೇ ನಿಲ್ಲಿಸುವ ಕುರಿತು ಸಂಚಾರ ಠಾಣೆಯ ಎಸ್‌ಐ ಓಡಿಯಪ್ಪ ಗೌಡ ಅವರಿಗೆ ಶಾಸಕರು ಸೂಚನೆ ನೀಡಿದರು. ರೆಖ್ಯಾ ಗ್ರಾಮದಲ್ಲಿ ಅರಣ್ಯ ಭೂಮಿ ಸಮಸ್ಯೆ ಪರಿಹರಿಸಿ, ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಿಸುವಂತೆ ತಹಶೀಲ್ದಾರ್‌ಗೆ ತಿಳಿಸಿದರು.
Advertisement
ಸಾರ್ವಜನಿಕ ಉದ್ದೇಶಕ್ಕೂ ಬಳಸಲಿಮಾಲಾಡಿ ಗ್ರಾಮದ ಡಿಸಿ ಮನ್ನಾ ಭೂಮಿ, ಶಾಲಾ ಮೈದಾನದ ನಿವೇಶನದ ಕುರಿತ ಗೊಂದಲ ನಿವಾರಣೆಗೆ ಅದನ್ನು ಸಾರ್ವಜನಿಕ ಮೈದಾನ ಎಂದು ಗುರುತಿಸುವಂತೆ ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ ಅವರು ಮನವಿ ಮಾಡಿದಾಗ, ಶಾಲಾ ಮೈದಾನವೆಂದು ಗುರುತಿಸೋಣ. ಜತೆಗೆ ಅದನ್ನು ಸಾರ್ವಜನಿಕ ಉದ್ದೇಶಗಳಿಗೂ ಬಳಕೆ ಮಾಡುವ ನಿರ್ಣಯ ಕೈಗೊಳ್ಳೋಣ ಎಂದು ಶಾಸಕರು ತಿಳಿಸಿದರು. ಬಿಇಒ ಉತ್ತರಕ್ಕೆ ಅಸಮಾಧಾನ
ತಾಲೂಕಿನ ಸರಕಾರಿ ಶಾಲೆಗಳ ಆರ್‌ಟಿಸಿ ಕುರಿತು ಬಿಇಒ ಎ.ಎನ್. ಗುರುಪ್ರಸಾದ್ ಅವರ ಉತ್ತರಕ್ಕೆ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಅವರು ಅಸಮಾಧಾನ ವ್ಯಕ್ತಪಡಿಸಿ, ಬಿಇಒ ಅವರು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಅವರು ಹೇಳುವ ಪ್ರಕಾರ 23 ಶಾಲೆಗಳಿಗಿಂತಲೂ ಹೆಚ್ಚಿನ ಶಾಲೆಗಳಿಗೆ ಆರ್ ಟಿಸಿ ಇಲ್ಲ. ಡಿಸಿ ಮನ್ನಾ ಭೂಮಿಯಲ್ಲಿರುವ ಶಾಲೆಗಳ ಕುರಿತು ಅವರಿಗೆ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತನ್ನ ಹಿಂದಿನ ಕೆಡಿಪಿ ಸಭೆಯಲ್ಲಿ ಆರ್‌ಟಿಸಿ ಇಲ್ಲದ ಶಾಲೆಗಳ ಕುರಿತು ತಹಶೀಲ್ದಾರ್‌ಗೆ ಬರೆಯುವಂತೆ ತಿಳಿಸಿದರೂ ಬಿಇಒ ಅವರು ಬರೆಯದಿರುವ ಕುರಿತು ಅವರ ಕಾರ್ಯವೈಖರಿಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ನಿರ್ಮಾಣವಾಗಿರುವ 4 ಆರ್‌ಎಂ ಎಸ್ ಕಟ್ಟಡಗಳ ಗುಣಮಟ್ಟದ ಕುರಿತು ಪರಿಶೀಲನೆಗೆ ಬರೆಯುವಂತೆ ಶಾಸಕರು ಬಿಇಒಗೆ ಸೂಚನೆ ನೀಡಿದರು. ಕರಾಯ ಶಾಲಾ ಕಟ್ಟಡದ ಕಾಮಗಾರಿ ಕಳಪೆ ಕುರಿತು ಉದಯವಾಣಿಯಲ್ಲಿ ಬಂದಿರುವ ವರದಿಯನ್ನು ಸಭೆಯಲ್ಲಿ ಪ್ರಸ್ತಾವಿಸಿದರು. ಸರಕಾರಿ ಆಸ್ಪತ್ರೆ ಮೇಲ್ದರ್ಜೆ ಪ್ರಕ್ರಿಯೆ
ಗ್ರಾಮ ಅರಣ್ಯ ಹಕ್ಕು ಸಮಿತಿಯ ಕುರಿತು ಸರ್ವೆ, ಅರಣ್ಯ ಇಲಾಖೆಯವರು ವಾರದೊಳಗೆ ವರದಿ ನೀಡುವಂತೆ ತಾ.ಪಂ. ಇಒ ಕುಸುಮಾಧರ್ ಸೂಚನೆ ನೀಡಿದರು. 100 ಹಾಸಿಗೆಗಳ ಸರಕಾರಿ ಆಸ್ಪತ್ರೆಯ ಮೇಲ್ದರ್ಜೆ ಪ್ರಕ್ರಿಯೆಯನ್ನೂ ಶೀಘ್ರ ಮುಗಿಸುವಂತೆ ಟಿಎಚ್‌ಒಗೆ ಶಾಸಕರು ಸೂಚನೆ ನೀಡಿದರು. ಜತೆಗೆ ಆ್ಯಂಬುಲೆನ್ಸ್ ದುರಸ್ತಿ ಕುರಿತು ಕ್ರಮಕ್ಕೆ ಟಿಎಚ್‌ಒ ಅವರನ್ನು ತರಾಟೆಗೆ ತೆಗೆದುಕೊಂಡರು. ಅಕ್ರಮ -ಸಕ್ರಮ
ಕುಂಪಲಾಜೆ ಕಟ್ಟಡ ಅಕ್ರಮ ನಿರ್ಮಾಣದ ಕುರಿತು ಗಮನಹರಿಸುವಂತೆ ಪ.ಪಂ. ಮುಖ್ಯಾಧಿಕಾರಿಗಳಿಗೆ ಶಾಸಕರು ತಿಳಿಸಿದರು. ಜತೆಗೆ ಮುಡಾದಿಂದ ಮುಕ್ತಿ ನೀಡುವುದಕ್ಕೂ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಅಕ್ರಮ -ಸಕ್ರಮ ನಿವೇಶನದ ಕುರಿತು ಫಾರ್ಮ್ ಸಂ. 57ರಲ್ಲಿ ಡಿ. 3ರಿಂದ ಅರ್ಜಿ ಸ್ವೀಕರಿಸಲಾಗುವುದು ಎಂದು ತಹಶೀಲ್ದಾರ್ ಮದನ್‌ಮೋದನ್ ಸಭೆಯ ಗಮನಕ್ಕೆ ತಂದರು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್, ಜಿ.ಪಂ. ಸದಸ್ಯರಾದ ನಮಿತಾ, ಸೌಮ್ಯಲತಾ, ಕೆಡಿಪಿ ನಾಮನಿರ್ದೇಶಿತರಾದ ಅಭಿನಂದನ್ ಹರೀಶ್, ಸುಕುಮಾರ್ ಉಪಸ್ಥಿತರಿದ್ದರು. 2 ತಿಂಗಳಲ್ಲಿ ಶಂಕುಸ್ಥಾಪನೆ
ತಾಲೂಕಿಗೆ ನೂತನವಾಗಿ ಮಂಜೂರಾಗಿರುವ ತೆಕ್ಕಾರು, ಕಳೆಂಜ, ಕಡಿರುದ್ಯಾವರ ಹಾಗೂ ನಾವೂರು ಗ್ರಾ.ಪಂ.ಗಳ ನಿವೇಶನ ಸಮಸ್ಯೆ ಪರಿಹರಿಸಿ, ಮುಂದಿನ 2 ತಿಂಗಳೊಳಗೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವಂತೆ ಶಾಸಕ ಪೂಂಜ ಅಧಿಕಾರಿಗಳಿಗೆ ತಿಳಿಸಿದರು. ಜತೆಗೆ ಅದರ ಕುರಿತು ಕಾರ್ಯ ನಿರ್ವಹಿಸಲು ಶ್ರೀಧರ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಮದ್ಯ ಅಕ್ರಮ ಮಾರಾಟ
ತಾಲೂಕಿನಲ್ಲಿ ಮದ್ಯ ಅಕ್ರಮ ಮಾರಾಟದ ಕುರಿತು ನಮಗೆ ದಾಳಿ ಮಾಡುವುದಕ್ಕೆ ಅವಕಾಶವಿದ್ದರೂ ಅಬಕಾರಿ ಇಲಾಖೆಯವರು ತಮಗೆ ಟಾರ್ಗೆಟ್ ಇದೆ ಎಂದು ಮನವಿ ಮಾಡುತ್ತಾರೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ತಿಳಿಸಿದಾಗ, ಮದ್ಯ ಮಾರಾಟದ ಆರೋಪಗಳಿರುವ ವ್ಯಕ್ತಿಗಳನ್ನು ಕರೆದು ಎಚ್ಚರಿಕೆ ನೀಡುವಂತೆ ಶಾಸಕ ಪೂಂಜ ಅಬಕಾರಿ ಇಲಾಖೆ ಅಧಿಕಾರಿಗೆ ತಿಳಿಸಿದರು. ಗ್ರಾಮ ಜ್ಯೋತಿ ಯೋಜನೆ
ಡಿ. 10ರೊಳಗೆ ತಾಲೂಕಿನಲ್ಲಿ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯನ್ವಯ ಬಾಕಿ ಉಳಿದಿರುವ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಮೆಸ್ಕಾಂ ಎಂಜಿನಿಯರ್ ಶಿವಶಂಕರ್ ತಿಳಿಸಿದರು.