Advertisement
ಬುಧವಾರದ ಪಂದ್ಯದಲ್ಲಿ ಪಾಕಿಸ್ಥಾನ ತಂಡ ಅಫ್ಘಾನಿಸ್ಥಾನವನ್ನು ಸೋಲಿಸುವುದರೊಂದಿಗೆ ಕೂಟದ ಲೆಕ್ಕಾಚಾರಕ್ಕೆ ತೆರೆ ಬಿದ್ದಿದೆ. ತಲಾ ಎರಡು ಪಂದ್ಯಗಳನ್ನು ಗೆದ್ದ ಪಾಕಿಸ್ಥಾನ ಮತ್ತು ಶ್ರೀಲಂಕಾ ರವಿವಾರದ ಪ್ರಶಸ್ತಿ ಸಮರದಲ್ಲಿ ಸೆಣಸ ಲಿವೆ. ಇದಕ್ಕೂ ಮುನ್ನ ಇತ್ತಂಡಗಳು ಶುಕ್ರ ವಾರ “ಸೂಪರ್ ಫೋರ್’ ಸುತ್ತಿನ ಕೊನೆಯ ಪಂದ್ಯ ದಲ್ಲಿ ಮುಖಾಮುಖೀಯಾಗಲಿವೆ. ಇದು ಫೈನಲ್ ಪಂದ್ಯಕ್ಕೊಂದು ರಿಹರ್ಸಲ್ ಆಗಲಿದೆ.
ಹೌದು, ಭಾರತಕ್ಕೇನಾಯಿತು? ಐಪಿಎಲ್‌ನಲ್ಲಿ ದೊಡ್ಡ ಹೀರೋ ಆಗಿ ಮೆರೆದವರೆಲ್ಲ ದೇಶಕ್ಕಾಗಿ ಆಡುವಾಗ, ಅದೂ ಜಾಗತಿಕ ಮಟ್ಟದ ಟೂರ್ನಿಗಳಲ್ಲಿ ಪರದಾಡುವುದೇಕೆ? ಇದು ಎಲ್ಲರ ಮುಂದಿರುವ ಪ್ರಶ್ನೆ.
Related Articles
Advertisement
ಹಾಗೆಯೇ ಭಾರತ ಆಡುವ ಬಳಗದ ಆಯ್ಕೆಯಲ್ಲೂ ಎಡವಟ್ಟು ಸಂಭವಿಸುತ್ತಿರುವುದು ಗುಟ್ಟೇನಲ್ಲ. ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಫಾರ್ಮ್ ಭಾರತದ ಪಾಲಿನ ಭಾರೀ ಚಿಂತೆಯ ಸಂಗತಿಯಾಗಿದೆ. ತಂಡದ ಫೀಲ್ಡಿಂಗ್ ಗುಣಮಟ್ಟವೂ ಕಳಪೆ. ಶ್ರೀಲಂಕಾ ವಿರುದ್ಧ ಅಂತಿಮ ಎಸೆತದಲ್ಲಿ ಎರಡೆರಡು ರನೌಟ್ ಅವಕಾಶವನ್ನು ಕೈಚೆಲ್ಲಿದ್ದು ಇದಕ್ಕೊಂದು ನಿದರ್ಶನ. ಹಾಗೆಯೇ ದೀಪಕ್ ಹೂಡಾ ಅವರಂಥ ಆಲ್‌ರೌಂಡರ್‌ಗಳನ್ನು ಕೇವಲ ಬ್ಯಾಟಿಂಗಿಗೇ ಸೀಮಿತಗೊಳಿಸುವುದು ಅರ್ಥ ವಾಗದ ಸಂಗತಿ. ರೋಹಿತ್ ಶರ್ಮ ನಾಯಕನ ಆಟವಾಡುತ್ತಿರುವಾಗ ಉಳಿದವರು ಸ್ವಲ್ಪ ವಾದರೂ ಬೆಂಬಲ ನೀಡದಿದ್ದರೆ ಹೇಗೆ?ಏಷ್ಯಾ ಮಟ್ಟದಲ್ಲೇ ಟೀಮ್ ಇಂಡಿಯಾ ಇಷ್ಟೊಂದು ಒತ್ತಡಕ್ಕೆ ಸಿಲುಕಿದರೆ, ಟಿ20 ವಿಶ್ವಕಪ್ ವೇಳೆ ಇವರೆಂಥ ಆಟವಾಡಿಯಾರು ಎಂಬುದು ಆತಂಕಕ್ಕೆ ಕಾರಣವಾಗಿದೆ. ಅಕಸ್ಮಾತ್ ಅಫ್ಘಾನಿಸ್ಥಾನ ಕೂಡ ನಮ್ಮವರನ್ನು ಮಣಿಸಿದರೆ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ.
ಅಫ್ಘಾನ್‌ಗೆ ಅನುಭವದ ಕೊರತೆಲೀಗ್ನಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಮಣಿಸಿ ಅಪಾಯಕಾರಿಯಾಗಿ ಗೋಚರಿಸಿದ ಅಫ್ಘಾನಿಸ್ಥಾನ, ಸೂಪರ್ ಫೋರ್‌ನಲ್ಲಿ ಲಂಕೆ ಮತ್ತು ಪಾಕಿಸ್ಥಾನಕ್ಕೆ ಶರಣಾಗಿದೆ. ಆದರೆ ಕೆಲವು “ಟಾಪ್ ಕ್ವಾಲಿಟಿ’ಯ ಟಿ20 ಆಟಗಾರರನ್ನು ಹೊಂದಿರುವುದನ್ನು ಮರೆಯುವಂತಿಲ್ಲ. ರಶೀದ್ ಖಾನ್, ಮುಜೀಬ್ ಜದ್ರಾನ್, ಮೊಹಮ್ಮದ್ ನಬಿ, ಹಜ್ರತುಲ್ಲ ಜಜಾಯ್, ರೆಹಮಾನುಲ್ಲ ಗುರ್ಬಜ್ ಪ್ರಮುಖರು. ಆದರೆ ಇವರೆಲ್ಲ ಪಾಕ್ ವಿರುದ್ಧ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ತಂಡದ ಬೌಲಿಂಗ್, ಫೀಲ್ಡಿಂಗ್ ಗಮನಾರ್ಹ ಮಟ್ಟದಲ್ಲಿದೆ. ಒಂದೇ ಸಮಸ್ಯೆಯೆಂದರೆ, ಅದು ದೊಡ್ಡ ಕ್ರಿಕೆಟ್ ರಾಷ್ಟ್ರಗಳೊಂದಿಗೆ ನಿರಂತರವಾಗಿ ಆಡದೇ ಇರುವುದು. ಇದರಿಂದ ಅನುಭವದ ಕೊರತೆ ಕಾಡುತ್ತಿದೆ. ಭಾರತ-ಪಾಕ್ ಫೈನಲ್, ಕನಸು…
ಏಷ್ಯಾ ಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ಥಾನ ಈವರೆಗೆ ಫೈನಲ್‌ನಲ್ಲಿ ಎದುರಾಗಿಲ್ಲ. ಈ ಸಲವಾದರೂ ಮುಖಾಮುಖಿ ಆಗಬಹುದು ಎಂಬುದು ಎಲ್ಲರ ನಿರೀಕ್ಷೆ ಆಗಿತ್ತು. ಪಾಕ್ ಮಾಜಿ ವೇಗಿ ಶೋಯಿಬ್ ಅಖ್ತರ್ ಸೇರಿದಂತೆ ಅನೇಕರು ಇಂಥದೊಂದು ಕನಸು ಕಾಣುತ್ತಿದ್ದರು. ಆದರೆ ಇದು ಸಾಕಾರಗೊಳ್ಳಲೇ ಇಲ್ಲ. ಇಂದಿನ ಪಂದ್ಯ
ಸೂಪರ್ ಫೋರ್
ಭಾರತ-ಅಫ್ಘಾನಿಸ್ಥಾನ
ಸ್ಥಳ: ದುಬಾೖ
ಆರಂಭ: ರಾತ್ರಿ 7.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್