Advertisement

ಪಾನ್‌ ಕೊಡದಿದ್ದರೆ ಶೇ.20 ತೆರಿಗೆ ಕಡಿತ

09:51 AM Jan 26, 2020 | Hari Prasad |

ಹೊಸದಿಲ್ಲಿ: ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವವರು ಪಾನ್‌, ಆಧಾರ್‌ ವಿವರಗಳನ್ನು ಉದ್ಯೋಗದಾತರಿಗೆ ನೀಡದೇ ಇದ್ದರೆ ಸಂಬಳದಿಂದ ಶೇ.20 ತೆರಿಗೆ ಕಡಿತ ಮಾಡಬಹುದು. ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಲ್ಲಿ ಈ ಅಂಶ ಪ್ರಸ್ತಾವಿಸಿದೆ. ಆದರೆ ಈ ನಿಯಮ ವಾರ್ಷಿಕವಾಗಿ ವೇತನ 2.5 ಲಕ್ಷ ರೂ.ಗಳಿಗಿಂತ ಹೆಚ್ಚು ಇದ್ದವರಿಗೆ ಅನ್ವಯವಾಗಲಿದೆ.

Advertisement

ವೇತನದಾರರಿಂದ ಸರಿಯಾಗಿ ತೆರಿಗೆ ಪಾವತಿಯಾಗುತ್ತಿದೆಯೋ ಇಲ್ಲವೋ ಎನ್ನುವುದನ್ನು ಗಮನಿಸಲು ಈ ನಿಯಮ ಜಾರಿಗೊಳಿಸಲಾಗಿದೆ. ಏಕೆಂದರೆ ಸಂಗ್ರಹವಾಗುವ ನೇರ ತೆರಿಗೆಯ ಪ್ರಮಾಣದಲ್ಲಿ ಸಂಬಳದಾರರ ಕೊಡುಗೆಯೇ ಶೇ.37ರಷ್ಟಿದೆ. ಆದಾಯ ತೆರಿಗೆ ಇಲಾಖೆಯ ನಿಯಮ ಪ್ರಕಾರ ಉದ್ಯೋಗ ನೀಡಿದ ವ್ಯಕ್ತಿ ಅಥವಾ ಸಂಸ್ಥೆ ಕಾಯ್ದೆಯಲ್ಲಿ ಉಲ್ಲೇಖೀಸಿರುವ ಪ್ರಮಾಣದಲ್ಲಿ ಉದ್ಯೋಗಿಯಿಂದ ತೆರಿಗೆ ಸಂಗ್ರಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next